Advertisement

ಸ್ವಯಂ ಲಾಕ್‌ಡೌನ್‌ಗೆ ನೀರಸ ಪ್ರತಿಕ್ರಿಯೆ

02:25 PM Jul 17, 2020 | Suhan S |

ಹಾವೇರಿ: ವಿವಿಧ ವ್ಯಾಪಾರಸ್ಥರ ಸಂಘಟನೆಗಳು ಪ್ರತಿದಿನ ಮಧ್ಯಾಹ್ನ 2 ಗಂಟೆ ಬಳಿಕ ಕರೆ ನೀಡಿದ್ದ ಸ್ವಯಂಲಾಕ್‌ ಡೌನ್‌ಗೆ ಮೊದಲ ದಿನ ಗುರುವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ಗುರುವಾರ ವಾರದ ಸಂತೆ ದಿನ ಆಗಿರುವುದರಿಂದ ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಬೆಳಗ್ಗೆಯಿಂದ ಸಂಜೆ ವರೆಗೆ ವ್ಯಾಪಾರ ವ್ಯವಹಾರ ಎಂದಿನಂತೆ ನಡೆಯಿತು. ತನ್ಮೂಲಕ ಸ್ವಯಂ ಲಾಕ್‌ಡೌನ್‌ಗೆ ಪ್ರಥಮ ದಿನ ಜನಬೆಂಬಲ ದೊರಕಲಿಲ್ಲ. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು ವಿವಿಧ ವ್ಯಾಪಾರಿಗಳು ಹಾಗೂ ಆಟೋ, ಟೆಂಪೋ, ಮದ್ಯ ಮಾರಾಟಗಾರ ಸಂಘಟನೆಯವರೆಲ್ಲ ಸಭೆ ಸೇರಿ ನಗರದಲ್ಲಿ ಮಧ್ಯಾಹ್ನ 2ರ ನಂತರ ಸ್ವಯಂ ಲಾಕ್‌ಡೌನ್‌ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಅಲ್ಲದೇ ಜು. 15ರಂದು ಪೊಲೀಸರು ಹಾಗೂ ತಹಶೀಲ್ದಾರ್‌ ರೊಂದಿಗೆ ಸಭೆ ನಡೆಸಿ ಬೆಂಬಲ ಸಹ ಕೋರಿದ್ದರು.

ಅದಕ್ಕೆ ಪೊಲೀಸ್‌ ಹಾಗೂ ತಹಶೀಲ್ದಾರ್‌ ಬೆಂಬಲ ಸೂಚಿಸಿದ್ದರು. ಆದರೆ, ಸ್ವಯಂಲಾಕ್‌ಡೌನ್‌ಗೆ ಮೊದಲ ದಿನ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಂದ ಪೂರ್ಣ ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಲಿಲ್ಲ. ಪೊಲೀಸ್‌ ಇಲಾಖೆಯವರು ಮಧ್ಯಾಹ್ನ 1 ಗಂಟೆಗೆ ಧ್ವನಿವರ್ಧಕದ ಮೂಲಕ ಮಧ್ಯಾಹ್ನ 2ರಿಂದ ಸ್ವಯಂಲಾಕ್‌ಡೌನ್‌ ಪಾಲಿಸುವಂತೆ ಮಾಹಿತಿಯೂ ನೀಡಿದರು.

ಆದರೂ ಬಹುತೇಕ ವ್ಯಾಪಾರಸ್ಥರು ಮಧ್ಯಾಹ್ನ 2 ಗಂಟೆ ಬಳಿಕವೂ ಅಂಗಡಿಗಳನ್ನು ತೆರೆದಿದ್ದರೆ ಸಾರ್ವಜನಿಕರು ಎಂದಿನಂತೆ ಖರೀದಿ ಮುಂದುವರಿಸಿದರು. ನಗರದಲ್ಲಿ ವಾಹನ ಸಂಚಾರವೂ ಎಂದಿನಂತಿತ್ತು. ಗುರುವಾರ ನಗರದಲ್ಲಿ ಸಂತೆಯ ದಿನವಾಗಿದ್ದರಿಂದ ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಜನರು ನಗರಕ್ಕೆ ಬಂದಿದ್ದರಿಂದ ಹಾಗೂ ಹಲವರಿಗೆ ಈ ಬಗ್ಗೆ ಮಾಹಿತಿ ಇಲ್ಲದೇ ಇರುವುದರಿಂದ ಸ್ವಯಂಲಾಕ್‌ ಡೌನ್‌ ಮೊದಲ ದಿನ ವಿಫಲವಾಗಿದ್ದರೂ ಮುಂದಿನ ದಿನಗಳಲ್ಲ ಇದಕ್ಕೆ ಬೆಂಬಲ ಸಿಗುವ ನಿರೀಕ್ಷೆ ಹೊಂದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next