ಬಲ್‌ತೇಜ್ ಸಿಂಗ್ ಮತ್ತು ಹರ್ಷಿತ್ ರಾಣ ಅವರ ಬಿಗು ದಾಳಿಗೆ ರನ್ ಗಳಿಸಲು ಒದ್ದಾಡಿದ ದಕ್ಷಿಣ ವಲಯವು ನಾಲ್ಕು ವಿಕೆಟನ್ನು ಬೇಗನೇ ಕಳೆದುಕೊಂಡಿದೆ. ಆದರೆ ಮಾಯಾಂಕ್ ಅಗರ್ವಾಲ್ ಜವಾಬ್ದಾರಿಯಿಂದ ಆಡು ತ್ತಿದ್ದು ತಂಡದ ಆಸರೆಯಾಗಿದ್ದಾರೆ. 37 ರನ್ ಗಳಿಸಿ ಅಜೇಯರಾಗಿ ಉಳಿದಿರುವ ಅವರು ಮುರಿಯದ ಐದನೇ ವಿಕೆಟಿಗೆ ತಿಲಕ್ ವರ್ಮ ಜತೆ ಈಗಾಗಲೇ 28 ರನ್ ಗಳಿಸಿದ್ದಾರೆ.
Advertisement
ಕಾವೇರಪ್ಪ ಬಿಗು ದಾಳಿ ಮೊದಲು ಬ್ಯಾಟಿಂಗ್ ನಡೆಸಿದ ಉತ್ತರ ವಲಯವು ಆರಂಭದಲ್ಲಿಯೇ ಕುಸಿಯಿತು. 18 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡ ತಂಡಕ್ಕೆ ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ಅಂಕಿತ್ ಕುಮಾರ್ ಆಸರೆಯಾದರು. ಪ್ರಭ್‌ಸಿಮ್ರಾನ್ 49 ಮತ್ತು ಅಂಕಿತ್ 33 ರನ್ ಹೊಡೆದರು. ಆ ಬಳಿಕ ಮತ್ತೆ ತಂಡ ಕುಸಿತ ಕಂಡಿತು. ಅಂತಿಮವಾಗಿ 198 ರನ್ನಿಗೆ ಆಲೌಟಾಯಿತು.
Related Articles
ಆಲೂರಿನಲ್ಲಿ ನಡೆದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಮಧ್ಯ ವಲಯದ ಬೌಲರ್‌ಗಳು ಬಿಗು ದಾಳಿ ಸಂಘಟಿಸಿ ಪಶ್ಚಿಮ ವಲಯಕ್ಕೆ ಹೊಡೆತ ನೀಡಿದ್ದಾರೆ. ನಾಯಕ ಶಿವಂ ಮವಿ ದಾಳಿಗೆ ಕುಸಿದ ಪಶ್ಚಿಮ ವಲಯವು ದಿನದಾಟದ ಅಂತ್ಯಕ್ಕೆ 216 ರನ್ ಗಳಿಸಿದ್ದು 8 ವಿಕೆಟ್ ಕಳೆದುಕೊಂಡಿದೆ. ಚೇತೇಶ್ವರ ಪೂಜಾರ, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ ಮತ್ತು ಸರ್ಫ್‌ರಾಜ್ ಖಾನ್ ತಂಡದಲ್ಲಿದ್ದರೂ ತಂಡ ಬೃಹತ್ ಮೊತ್ತ ಪೇರಿಸಲು ವಿಫಲವಾಯಿತು. ಇವೆರೆಲ್ಲರೂ ದೊಡ್ಡ ಮೊತ್ತ ಪೇರಿಸಲು ಅಸಮರ್ಥರಾದರು. ಆದರೆ ಅತಿತ್ ಶೇಥ್ ಅವರ 74 ರನ್ ನೆರವಿನಿಂದ ಪಶ್ಚಿಮ ಚೇತರಿಸುವಂತಾಯಿತು.
Advertisement
ಸಂಕ್ಷಿಪ್ತ ಸ್ಕೋರು: ಪಶ್ಚಿಮ ವಲಯ 8 ವಿಕೆಟಿಗೆ 216 (ಪೃಥ್ವಿ ಶಾ 28, ಪೂಜಾರ 26, ಸೂರ್ಯಕುಮಾರ್ ಯಾದವ್ 7, ಅತಿತ್ ಶೇಥ್ 74, ಶಿವಂ ಮವಿ 43ಕ್ಕೆ 4).