Advertisement

ದುಲೀಪ್‌ ಟ್ರೋಫಿ ಕ್ವಾರ್ಟರ್‌ ಫೈನಲ್‌: ಜೈಸ್ವಾಲ್‌, ರಹಾನೆ ದ್ವಿಶತಕ

12:05 AM Sep 10, 2022 | Team Udayavani |

ಚೆನ್ನೈ: ಈಶಾನ್ಯ ವಲಯ ವಿರುದ್ಧದ ದುಲೀಪ್‌ ಟ್ರೋಫಿ ಕ್ವಾರ್ಟರ್‌ ಫೈನಲ್‌ ಪಂದ್ಯದ ದ್ವಿತೀಯ ದಿನದಾಟದಲ್ಲಿ ಪಶ್ಚಿಮ ವಲಯ ಎರಡು ದ್ವಿಶತಕಗಳಿಂದ ಅಬ್ಬರಿಸಿದೆ.

Advertisement

ಆರಂಭಕಾರ ಯಶಸ್ವಿ ಜೈಸ್ವಾಲ್‌ 228 ಹಾಗೂ ನಾಯಕ ಅಜಿಂಕ್ಯ ರಹಾನೆ ಅಜೇಯ 207 ರನ್‌ ಹೊಡೆದರು. ಮತ್ತೋರ್ವ ಆರಂಭಕಾರ ಪೃಥ್ವಿ ಶಾ 113 ರನ್‌ ಬಾರಿಸಿದರು. ದಿನದಾಟದ ಅಂತ್ಯಕ್ಕೆ ಪಶ್ಚಿಮ ವಲಯ ಕೇವಲ 2 ವಿಕೆಟಿಗೆ 590 ರನ್‌ ಪೇರಿಸಿದೆ.

ಪುದುಚೇರಿಯಲ್ಲಿ ನಡೆಯುತ್ತಿರುವ ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಪೂರ್ವ ವಲಯ ವಿರುದ್ಧ ಉತ್ತರ ವಲಯ ವಿಕೆಟ್‌ ನಷ್ಟವಿಲ್ಲದೆ 65 ರನ್‌ ಮಾಡಿದೆ. ಪೂರ್ವ ವಲಯದ ಮೊದಲ ಇನ್ನಿಂಗ್ಸ್‌ ಸ್ಕೋರ್‌ 397 ರನ್‌. ವಿರಾಟ್‌ ಸಿಂಗ್‌ 117 ರನ್‌ ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next