Advertisement
ದಕ್ಷಿಣ ವಲಯದ 213 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ಪಶ್ಚಿಮ ವಲಯ 7 ವಿಕೆಟಿಗೆ 129 ರನ್ ಮಾಡಿತ್ತು. ಶುಕ್ರವಾರದ ಆಟ ಮುಂದುವರಿಸಿ 146ಕ್ಕೆ ಆಲೌಟ್ ಆಯಿತು. ಉಳಿದ ಮೂರೂ ವಿಕೆಟ್‌ಗಳನ್ನು ಕರ್ನಾಟಕದ ಮಧ್ಯಮ ವೇಗಿ ವಿದ್ವತ್ ಕಾವೇರಪ್ಪ ಉರುಳಿಸಿದರು. ಅವರ ಸಾಧನೆ 53ಕ್ಕೆ 7 ವಿಕೆಟ್. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿದ್ವತ್ ಅವರ ಜೀವನಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ. ಹಾಗೆಯೇ ದುಲೀಪ್ ಟ್ರೋಫಿಯಲ್ಲಿ ದಕ್ಷಿಣ ವಲಯ ಪರ ದಾಖಲಾದ 2ನೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ವಾಗಿದೆ. 1993ರಲ್ಲಿ ಉತ್ತರ ವಲಯದ ವಿರುದ್ಧ ವೆಂಕಟೇಶ ಪ್ರಸಾದ್ 38ಕ್ಕೆ 7 ವಿಕೆಟ್ ಕೆಡವಿದ್ದು ದಾಖಲೆ. ವಿಜಯ್ ಕುಮಾರ್ ವೈಶಾಖ್ 2 ಹಾಗೂ ವಿ. ಕೌಶಿಕ್ ಒಂದು ವಿಕೆಟ್ ಕಿತ್ತರು. ಇದರೊಂದಿಗೆ ಪಶ್ಚಿಮ ವಲಯವನ್ನು ಕರ್ನಾಟಕದ ತ್ರಿಮೂರ್ತಿಗಳೇ ಸೇರಿಕೊಂಡು ಆಲೌಟ್ ಮಾಡಿ ದಂತಾಯಿತು. 65 ರನ್ ಮಾಡಿದ ಆರಂಭಕಾರ ಪೃಥ್ವಿ ಶಾ ಅವರೇ ಪಶ್ಚಿಮ ವಲಯದ ಟಾಪ್ ಸ್ಕೋರರ್.
Related Articles
Advertisement
ಸಂಕ್ಷಿಪ್ತ ಸ್ಕೋರ್: ದಕ್ಷಿಣ ವಲಯ 213 ಮತ್ತು 7 ವಿಕೆಟಿಗೆ 181 (ಹನುಮ ವಿಹಾರಿ 42, ರಿಕ್ಕಿ ಭುಯಿ 37, ಮಾಯಾಂಕ್ ಅಗರ್ವಾಲ್ 35, ಸಚಿನ್ ಬೇಬಿ 28, ಸಾಯಿ ಕಿಶೋರ್ 16, ಡಿ. ಜಡೇಜ 27ಕ್ಕೆ 2, ಅತೀತ್ ಶೇಠ್ 38ಕ್ಕೆ 2, ನಗÌಸ್ವಾಲ 52ಕ್ಕೆ 2). ಪಶ್ಚಿಮ ವಲಯ 146 (ಪೃಥ್ವಿ ಶಾ 65, ಹಾರ್ವಿಕ್ ದೇಸಾಯಿ 21, ವಿದ್ವತ್ ಕಾವೇರಪ್ಪ 53ಕ್ಕೆ 7, ವಿಜಯ್‌ಕುಮಾರ್ ವೈಶಾಖ್ 33ಕ್ಕೆ 2)