Advertisement
ಭಾರತೀಯ ಟೆಸ್ಟ್ ತಂಡಕ್ಕೆ ಮರಳಲು ಯೋಚಿಸುತ್ತಿರುವ ಅಯ್ಯರ್ ಸದ್ಯ ಸಾಗುತ್ತಿರುವ ಈ ಕೂಟದಲ್ಲಿ ಸತತ ಎರಡನೇ ಬಾರಿ ಶೂನ್ಯಕ್ಕೆ ಔಟಾಗಿ ನಿರಾಶೆ ಅನುಭವಿಸಿದ್ದಾರೆ. ಆದರೆ ದೇವದತ್ತ ಪಡಿಕ್ಕಲ್ (50), ಶ್ರೀಕರ್ ಭರತ್ (52), ರಿಕಿ ಭುಯಿ (56) ಮತ್ತು ಸಂಜು ಸ್ಯಾಮ್ಸನ್ ಅವರ ಅಜೇಯ 89 ರನ್ ನೆರವಿನಿಂದ ಭಾರತ “ಡಿ’ ತಂಡವು 5 ವಿಕೆಟಿಗೆ 306 ರನ್ ಪೇರಿಸಿದೆ. ದಿನದಾಟದ ಅಂತ್ಯದ ವೇಳೆ ಸ್ಯಾಮ್ಸನ್ ಮತ್ತು 26 ರನ್ ಗಳಿಸಿದ್ದ ಸರನ್Ï ಜೈನ್ ಕ್ರೀಸ್‌ನಲ್ಲಿದ್ದರು. ಬಿರುಸಿನ ಆಟವಾಡಿದ ಸ್ಯಾಮ್ಸನ್ ಇಷ್ಟರವರೆಗೆ 83 ಎಸೆತ ಎದುರಿಸಿದ್ದು 10 ಬೌಂಡರಿ ಮತ್ತು ಮೂರು ಸಿಕ್ಸರ್ ಬಾರಿಸಿದ್ದರು. ಅವರು ಈಗಾಗಲೇ ಜೈನ್ ಜತೆ ಮುರಿಯದ ಆರನೇ ವಿಕೆಟಿಗೆ 90 ರನ್ ಪೇರಿಸಿದ್ದಾರೆ.
Related Articles
ಮೂರು ವಿಕೆಟಿಗೆ 172 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ವೇಳೆ ಕ್ರೀಸ್‌ಗೆ ಆಗಮಿಸಿದ್ದ ನಾಯಕ ಅಯ್ಯರ್ ಮತ್ತೆ ಶೂನ್ಯಕ್ಕೆ ಔಟಾಗಿ ನಿರಾಶೆ ಅನುಭವಿಸಿದರು. ಅವರು ಈ ಕೂಟದ ಕಳೆದ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 104 ರನ್ (9, 54, 0, 41, 0) ಗಳಿಸಿದ್ದರು. ಬಾಂಗ್ಲಾ ವಿರುದ್ಧದ ಭಾರತ ತಂಡದಿಂದ ಹೊರಬಿದ್ದಿದ್ದ ಅಯ್ಯರ್ ಅವರನ್ನು ಆಸ್ಟ್ರೇಲಿಯ ವಿರುದ್ಧದ ಸರಣಿಗೆ ಪರಿಗಣಿಸುವ ಸಾಧ್ಯತೆ ಇನ್ನಷ್ಟು ದೂರವಾಗಿದೆ.
ಸಂಕ್ಷಿಪ್ತ ಸ್ಕೋರು: ಭಾರತ “ಡಿ’ ಐದು ವಿಕೆಟಿಗೆ 306 (ಸಂಜು ಸ್ಯಾಮ್ಸನ್ 89 ಬ್ಯಾಟಿಂಗ್, ದೇವದತ್ತ ಪಡಿಕ್ಕಲ್ 50, ಶ್ರೀಕರ್ ಭರತ್ 52, ರಿಕಿ ಭುಯಿ 56, ರಾಹುಲ್ ಚಹರ್ 60ಕ್ಕೆ 3).
Advertisement
ಭಾರತ “ಎ’ ತಂಡಕ್ಕೆ ರಾವತ್ ನೆರವುಅನಂತಪುರ: ಶಾಶ್ವತ್ ರಾವತ್ ಅವರ ಅಜೇಯ ಶತಕದಿಂದಾಗಿ ಭಾರತ “ಎ’ ತಂಡವು ದುಲೀಪ್ ಟ್ರೋಫಿ ಕ್ರಿಕೆಟ್ ಕೂಟದ ಪಂದ್ಯದಲ್ಲಿ ಭಾರತ “ಸಿ’ ತಂಡದೆದುರು 7 ವಿಕೆಟಿಗೆ 224 ರನ್ ಪೇರಿಸಿದೆ. ಆರಂಭಿಕ ಕುಸಿತದ ಬಳಿಕ ತಂಡಕ್ಕೆ ಆಸರೆಯಾದ ಎಡಗೈ ಬ್ಯಾಟ್ಸ್‌ಮನ್ ಆಗಿರುವ ರಾವತ್ ಸೊಗಸಾದ ಶತಕ ಬಾರಿಸಿ ಗಮನ ಸೆಳೆದರು. ಅವರಿಗೆ ಉಪಯುಕ್ತ ನೆರವು ನೀಡಿದ ಶಮ್ಸ್ ಮುಲಾನಿ 76 ಎಸೆತಗಳಿಂದ 44 ರನ್ ಹೊಡೆದರು. ಆರಂಭಿಕ ಆಘಾತಕ್ಕೆ ಒಳಗಾದ ಭಾರತ “ಎ’ ತಂಡವು ಮೊದಲ 20 ಓವರ್ ಮುಗಿದಾಗ ಕೇವಲ 36 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಕಳೆದ ಪಂದ್ಯದ ಶತಕವೀರ ಪ್ರಥಮ್ ಸಿಂಗ್, ನಾಯಕ ಮಾಯಾಂಕ್ ಅಗರ್ವಾಲ್, ತಿಲಕ್ ವರ್ಮ ಮತ್ತು ರಿಯಾನ್ ಪರಾಗ್ ಅವರು ಅಲ್ಪ ಮೊತ್ತಕ್ಕೆ ಔಟಾಗಿ ನಿರಾಶೆ ಅನುಭವಿಸಿದರು. ಕಳೆದ ವಾರ ಇನ್ನಿಂಗ್ಸ್‌ವೊಂದರಲ್ಲಿ ಎಂಟು ವಿಕೆಟ್ ಹಾರಿಸಿದ್ದ ಅನುÏಲ್ ಕಾಂಬೋಜ್ ಮತ್ತೆ ಬಿಗು ದಾಳಿ ಸಂಘಟಿಸಿ 40 ರನ್ನಿಗೆ ಮೂರು ವಿಕೆಟ್ ಕಿತ್ತರು. ದೇಶೀಯ ಕ್ರಿಕೆಟ್‌ನಲ್ಲಿ ಬರೋಡ ಪರ ಆಡುತ್ತಿರುವ ಶಾಶ್ವತ್ ರಾವತ್ ಇಷ್ಟರವರೆಗೆ 235 ಎಸೆತ ಎದುರಿಸಿದ್ದು 122 ರನ್ ಗಳಿಸಿ ಆಡುತ್ತಿದ್ದಾರೆ. ಆಕರ್ಷಕ ಹೊಡೆತಗಳಿಂದ ಗಮನ ಸೆಳೆದ ಅವರು ಈಗಾಗಲೇ 15 ಬೌಂಡರಿ ಬಾರಿಸಿದ್ದಾರೆ. ಅವರು ಮುಲಾನಿ ಜತೆ 87 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡಿದ್ದರು. ಸಂಕ್ಷಿಪ್ತ ಸ್ಕೋರು: ಭಾರತ “ಎ’ 7 ವಿಕೆಟಿಗೆ 224 (ಶಾಶ್ವತ್ ರಾವತ್ 122 ಬ್ಯಾಟಿಂಗ್, ಶಮ್ಸ್ ಮುಲಾನಿ 44, ಅನುÏಲ್ ಕಾಂಬೋಜ್ 40ಕ್ಕೆ 3, ವಿಜಯಕುಮಾರ್ ವೈಶಾಖ್ 33ಕ್ಕೆ 2).