Advertisement
ಮೊದಲ ದಿನ ಆರಂಭಕಾರ ಧ್ರುವ ಶೋರಿ 135 ರನ್ ಬಾರಿಸಿದರೆ, ಗುರುವಾರದ ಆಟದಲ್ಲಿ ನಿಶಾಂತ್ ಸಿಂಧು ಮತ್ತು ಹರ್ಷಿತ್ ರಾಣಾ ಶತಕ ದೊಂದಿಗೆ ಮಿಂಚಿದರು. ನಿಶಾಂತ್ 245 ಎಸೆತ ಎದುರಿಸಿ ಭರ್ತಿ 150 ರನ್ ಹೊಡೆದರು. ಸಿಡಿಸಿದ್ದು 18 ಬೌಂಡರಿ ಹಾಗೂ 3 ಸಿಕ್ಸರ್. ಅತ್ಯಂತ ಆಕ್ರಮಣಕಾರಿಯಾಗಿ ಆಡಿದ ಹರ್ಷಿತ್ ರಾಣಾ 122 ರನ್ ಮಾಡಿ ಅಜೇಯರಾಗಿ ಉಳಿದರು. ಇದರಲ್ಲಿ 12 ಫೋರ್, 9 ಸಿಕ್ಸರ್ ಒಳಗೊಂಡಿತ್ತು. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಾಣಾ ಹೊಡೆದ ಮೊದಲ ಶತಕ. ಈಶಾನ್ಯ ವಲಯದ ಅನನುಭವಿ ಬೌಲರ್‌ಗಳೆಲ್ಲ ದುಬಾರಿಯಾಗಿ ಪರಿಣಮಿಸಿದರು.
ಆಲೂರು: ಅತ್ತ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಶತಕದ ಸುರಿಮಳೆ ಆಗುತ್ತಿದ್ದರೆ, ಇತ್ತ ಆಲೂರು ಕ್ರೀಡಾಂಗಣದಲ್ಲಿ ಬೌಲರ್ ಮೇಲುಗೈ ಸಾಧಿಸಿದ್ದಾರೆ.
ಮಧ್ಯ ವಲಯದ 182 ರನ್ನುಗಳ ಸಾಮಾನ್ಯ ಮೊತ್ತತೆR ಜವಾಬು ನೀಡಿದ ಪೂರ್ವ ವಲಯ 122ಕ್ಕೆ ಕುಸಿಯಿತು. 60 ರನ್ನುಗಳ ಮುನ್ನಡೆಯೊಂದಿಗೆ ದ್ವಿತೀಯ ಸರದಿಯನ್ನು ಆರಂಭಿಸಿರುವ ಮಧ್ಯ ವಲಯ ವಿಕೆಟ್ ನಷ್ಟವಿಲ್ಲದೆ 64 ರನ್ ಮಾಡಿದ್ದು, 124 ರನ್ನುಗಳ ಲೀಡ್ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
2 ವಿಕೆಟಿಗೆ 32 ರನ್ ಮಾಡಿದ್ದ ಪೂರ್ವ ವಲಯ ದ್ವಿತೀಯ ದಿನದಾಟದಲ್ಲೂ ಕುಸಿಯುತ್ತ ಹೋಯಿತು. ಆವೇಶ್ ಖಾನ್ ಮತ್ತು ಸೌರಭ್ ಕುಮಾರ್ ತಲಾ 3 ವಿಕೆಟ್; ನಾಯಕ ಶಿವಂ ಮಾವಿ 2 ವಿಕೆಟ್ ಉರುಳಿಸಿದರು.