ಕುಂದಾಪುರ: ಕಳೆದ ಕೆಲವು ದಿನ ಗಳಿಂದ ರಾಜ್ಯವ್ಯಾಪಿ ಅಕಾಲಿಕ ಮಳೆಯಾಗು ತ್ತಿದ್ದು, ಇದರ ಪರಿಣಾಮ ತರಕಾರಿಗೂ ತಟ್ಟಿದೆ.
ಕಳೆದೊಂದು ವಾರದಿಂದ ತರಕಾರಿ ಬೆಲೆ ಏರಿಕೆ ಯಾಗುತ್ತಿದೆ. ಟೋಮೆಟೋ ಸಹಿತ ಬಹುತೇಕ ಎಲ್ಲ ತರಕಾರಿಗಳ ದರ ಹೆಚ್ಚಳವಾಗಿವೆ.
ಟೊಮೇಟೋ 1 ಕೆ.ಜಿ.ಗೆ 40 ರೂ. ಇದ್ದದ್ದು ಈಗ 60-65 ರೂ.ಗೆ ಏರಿದೆ. 20 ರೂ. ಇದ್ದ ಈರುಳ್ಳಿ 30-35 ರೂ., 30 ರೂ. ಇದ್ದ ಆಲೂಗಡ್ಡೆ 35-40 ರೂ., ಹೂಕೋಸು 60-70 ರೂ., ಘಾಟಿ ನುಗ್ಗೆ 160-170 ರೂ. ಆಗಿದ್ದು, ಊರ ನುಗ್ಗೆ ಬರುವ ವರೆಗೆ ಇದೇ ದರ ಇರುವ ಸಂಭವವಿದೆ. ಬೀಟ್ರೂಟ್ 60 ರೂ., ಕ್ಯಾಬೇಜ್ 40 ರೂ., ಹೀರೆಕಾಯಿ 60 ರೂ. ಆಗಿದೆ.
ಊರಿನ ತರಕಾರಿಗಳು ಮಾರುಕಟ್ಟೆಗೆ ಬರಲು ಆರಂಭವಾಗಿದ್ದು, ಸೌತೆಕಾಯಿ ಕೆ.ಜಿ.ಗೆ 40, ಗುಳ್ಳ 80-100 ರೂ., ಬೆಂಡೆಕಾಯಿ 100-120 ರೂ., ಅಲಸಂಡೆ 60-70 ರೂ., ಪಟ್ಲ 60-70 ರೂ., ಬಸಳೆ 60-70 ರೂ., ಹರಿವೆ ಸೊಪ್ಪು ಕೆ.ಜಿ.ಗೆ 70 ರೂ. ಆಗಿದೆ.
ಅನಾನಸು ದರವೂ ಏರಿಕೆಯಾಗಿದ್ದು, ಈಗ 70-80 ರೂ. ಇದೆ. ಮಾವಿನಕಾಯಿ ತೋತಾಪುರಿ ಮಾರುಕಟ್ಟೆಗೆ ಬರುತ್ತಿದ್ದು, ಕೆ.ಜಿ.ಗೆ 140 ಆಸುಪಾಸಿನಲ್ಲಿದೆ.
ಕಳೆದೊಂದು ವಾರದಿಂದ ತರಕಾರಿ ದರದಲ್ಲಿ ನಿರಂತರ ಏರಿಕೆಯಾಗುತ್ತಿದೆ. ಈ ಸಮಯದಲ್ಲಿ ಕಾರ್ಯಕ್ರಮಗಳು ಕಡಿಮೆ ಇರುವುದರಿಂದ ತರಕಾರಿ ದರ ಇಳಿಕೆಯಾಗಬೇಕಿತ್ತು. ಆದರೂ ಏರುತ್ತಿದೆ. ಘಟ್ಟ ಪ್ರದೇಶದಲ್ಲಿ ಅಕಾಲಿಕ ಮಳೆಯಾಗುತ್ತಿರುವುದು ಇದಕ್ಕೆ ಕಾರಣವಿರಬಹುದು ಎನ್ನುವುದಾಗಿ ಕುಂದಾಪುರದ ತರಕಾರಿ ವ್ಯಾಪಾರಿ ಗಣೇಶ್ “ಉದಯವಾಣಿ’ಗೆ ತಿಳಿಸಿದ್ದಾರೆ.