Advertisement

ದಿನಬಳಕೆ ಸರಕುಗಳ ಜಿಎಸ್‌ಟಿ ಇಳಿಕೆ ಸಾಧ್ಯತೆ

06:00 AM Nov 06, 2017 | Harsha Rao |

ಹೊಸದಿಲ್ಲಿ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ಬಳಿಕ ಗ್ರಾಹಕರು, ವ್ಯಾಪಾರಿಗಳ ಮನವಿಗೆ ಸ್ಪಂದಿಸಿ ತೆರಿಗೆ ಸ್ಲಾéಬ್‌ನಲ್ಲಿ ಬದಲಾವಣೆ ಮಾಡಿರುವ ಕೇಂದ್ರ ಸರಕಾರವು ಸದ್ಯದಲ್ಲೇ ಇಂಥ ಇನ್ನಷ್ಟು ಬದ
ಲಾವಣೆಗಳನ್ನು ಘೋಷಿಸಲಿದೆ. ನ. 10ರಂದು ಜಿಎಸ್‌ಟಿ ಮಂಡಳಿಯ ಸಭೆ ನಡೆಯಲಿದ್ದು, ಶಾಂಪೂನಂಥ ದಿನಬಳಕೆಯ ವಸ್ತುಗಳು, ಕೈಯಲ್ಲೇ ತಯಾರಿಸಲಾಗುವ ಪೀಠೊಪಕರಣಗಳು, ಪ್ಲಾಸ್ಟಿಕ್‌ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವ ಸಾಧ್ಯತೆಯಿದೆ.

Advertisement

ಶೇ. 28ರ ಸ್ಲಾéಬ್‌ನಲ್ಲಿ ಬರುವ ಕೆಲವು ದಿನಬಳಕೆಯ ವಸ್ತುಗಳ ಜಿಎಸ್‌ಟಿಯನ್ನು ಶೇ.18ಕ್ಕೆ ತಗ್ಗಿಸಲು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟಿÉ ನೇತೃತ್ವದ ಜಿಎಸ್‌ಟಿ ಮಂಡಳಿ ಚಿಂತನೆ ನಡೆಸಿದೆ. ಅಲ್ಲದೆ ಪೀಠೊಪಕರಣಗಳು, ಎಲೆಕ್ಟ್ರಿಕ್‌ ಸ್ವಿಚ್‌ಗಳು, ಪ್ಲಾಸ್ಟಿಕ್‌ ಪೈಪ್‌ಗ್ಳ ತೆರಿಗೆ ಕುರಿತೂ ಪರಿಶೀಲನೆ ನಡೆಸಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ತೆರಿಗೆ ರಿಟರ್ನ್ಸ್ ಸಲ್ಲಿಕೆಯಲ್ಲಿನ ನಿಯಮಗಳನ್ನೂ ಸ್ವಲ್ಪ ಮಟ್ಟಿಗೆ ಸಡಿಲಿಸಲು ಚಿಂತನೆ ನಡೆಸಲಾಗಿದೆ.

ಸದ್ಯ ಎಲ್ಲ ರೀತಿಯ ಪೀಠೊಪಕರಣಗಳಿಗೂ ಶೇ.28 ಜಿಎಸ್‌ಟಿ ವಿಧಿಸಲಾಗಿದೆ. ಆದರೆ ಮರದ ಪೀಠೊಪಕರಣಗಳನ್ನು ಹೆಚ್ಚಾಗಿ ಮಧ್ಯಮ ವರ್ಗದ ಕುಟುಂಬಗಳು ಹಾಗೂ ಅಸಂಘಟಿತ ವಲಯಗಳು ಕೈಯಿಂದಲೇ ತಯಾರಿಸುತ್ತಿದ್ದು, ಹೆಚ್ಚಿನ ತೆರಿಗೆಯಿಂದ ಸಮಸ್ಯೆ ಆಗುತ್ತಿದೆ ಎಂಬುದು ಅವರ ಅಳಲಾಗಿದೆ. ಇದನ್ನು ಜಿಎಸ್‌ಟಿ ಮಂಡಳಿಯು ಮುಂದಿನ ಸಭೆಯಲ್ಲಿ ಪರಿಗಣಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next