Advertisement

ಕಲಸು ಮೇಲೋಗರದ ಶಿಕ್ಷಣದಿಂದ ಗುಣಮಟ್ಟಕ್ಕೆ ಧಕ್ಕೆ

11:44 AM Mar 12, 2019 | |

ವಿಜಯಪುರ: ಅಂತಾರಾಷ್ಟ್ರೀಯ ಅಗ್ರಹಾರಗಳಿಗೆ ಶಿಕ್ಷಣದ ಗುಣಮಟ್ಟ ಆಹಾರವಾಗಬಾರದು. ಎಲ್ಲಿಂದ ಜ್ಞಾನಮುಖೀ ಶಿಕ್ಷಣ, ಉದ್ಯೋಗಮುಖೀ ಶಿಕ್ಷಣ ಎಂಬುದನ್ನು ನಿರ್ಧರಿಸಬೇಕು. ಎರಡನ್ನೂ ಒಟ್ಟೊಟ್ಟಿಗೆ ನೀಡುತ್ತೇವೆ ಎಂಬ ಕಲಸ ಮೇಲೋಗರ ನೀತಿಯಿಂದ ಕೆಲವರು ಕೀಳರಿಮೆ ಮತ್ತು ಕೆಲವರು ಮೇಲರಿಮೆ ಅನುಭವಿಸುವಂತಾಗುತ್ತಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

Advertisement

ಸೋಮವಾರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಹಾಗೂ ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ (ರೂಸಾ), ಎಂಎಚ್‌ ಆರ್‌ಡಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉನ್ನತ ಶಿಕ್ಷಣದಲ್ಲಿ ಆದ್ಯತೆಗಳ ಪಲ್ಲಟ ಕುರಿತ ಒಂದು ದಿನದ ಸಾಮರ್ಥ್ಯ ವರ್ಧನೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಣದ ಸಾರ್ವತ್ರೀಕರಣ ದೇಶದ ಬಹುದೊಡ್ಡ ಸಾಧನೆಯಾಗಿದೆ. ಮಹಿಳಾ ವಿವಿ ಸ್ಥಾಪನೆಯಾಗಿ ಮಹಿಳಾ ಸಬಲೀಕರಣಕ್ಕೆ ಬಹುದೊಡ್ಡ ವರದಾನವಾಗಿದೆ ಎಂದರು. ದೇಶದ ಆರ್ಥಿಕ ಬದಲಾವಣೆಗಳು ಸಾಮಾಜಿಕ, ಸಾಂಸ್ಕೃತಿಕ ಮ¤ತು ಶೈಕ್ಷಣಿಕ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತವೆ. ಶಿಕ್ಷಣ ಒಂದು ಸಮಗ್ರ ಘಟಕ. ಪ್ರಾಥಮಿಕ ಶಿಕ್ಷಣ ಬಿಟ್ಟು ಕೇವಲ ಉನ್ನತ ಶಿಕ್ಷಣದ ಕುರಿತು ಚರ್ಚಿಸಿದರೆ ಅದುಅರ್ಧ ಸತ್ಯವಾಗುತ್ತದೆ. ನಾವು ಹೇಗೆ ಪ್ರಾಥಮಿಕ ಶಿಕ್ಷಣ ಕೊಡುತ್ತೇವೆಯೋ ಹಾಗೆಯೇ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯುತ್ತದೆ ಎಂದು ಹೇಳಿದರು.

ಉನ್ನತ ಶಿಕ್ಷಣದ ಭೌತಿಕ ಅಭಿವೃದ್ಧಿಗೆ ಸಿಕ್ಕಷ್ಟು ಅನುದಾನ ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಗೆ ಸಿಗುತ್ತಿಲ್ಲ. ಕೇವಲ ಮಾಧ್ಯಮದಲ್ಲಿನ ಶಿಕ್ಷಣದ ಚರ್ಚೆಯೇ ನಿಜವಾದ ಪ್ರಾಥಮಿಕ ಶಿಕ್ಷಣದ ಚರ್ಚೆ ಎಂದು ಭಾವಿಸಬಾರದು. ಅದರಾಚೆಗೂ ಹೆಚ್ಚು ಚರ್ಚೆಗಳಿವೆ. ಅವುಗಳ ಕುರಿತು ಅವಲೋಕಿಸಬೇಕಿದೆ ಎಂದರು. 

ಕರ್ನಾಟಕ ಸಾಂಸ್ಕೃತಿಕ ವಿಶ್ವವಿದ್ಯಾಲಯದ ಕುಲಪತಿ ಪದ್ಮಾ ಶೇಖರ್‌ ಮಾತನಾಡಿ, ಸಾಂಪ್ರದಾಯಿಕ ಹೊದಿಕೆಯೊಳಗೆ ಸಿಲುಕಿರುವ ಮಹಿಳೆಗೆ ಆದ್ಯತೆಗಳ ಸ್ವೀಕಾರ ಕಷ್ಟವಾಗಿದೆ. ಉನ್ನತ ಶಿಕ್ಷಣದಲ್ಲಿ ಅರ್ಧದಷ್ಟು ಮಹಿಳೆಯರ ಪಾಲು ಇದೆ. ಇದಕ್ಕೆ ಕಾರಣ ಮಹಿಳೆಯರ ಹೋರಾಟದ ಫಲ. ಆದ್ದರಿಂದ ಮಹಿಳೆಯರ ಆದ್ಯತೆಗಳ ಪಲ್ಲಟವೂ ಕಾಲಕ್ಕೆ ತಕ್ಕಂತೆ ಬದಲಾಗುತ್ತ ಬರುತ್ತಿವೆ ಎಂದರು. ಗುಲ್ಬರ್ಗಾ ವಿವಿ ಕುಲಪತಿ ಎಸ್‌.ಆರ್‌. ನಿರಂಜನ್‌ ಮಾತನಾಡಿ, ಇಂದಿನ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ಅವಶ್ಯಕತೆ ಇದೆ.
ಆದರೆ ಆ ಗುಣಮಟ್ಟದ ಶಿಕ್ಷಣವನ್ನು ನಾವು ಎಲ್ಲಿಂದ ಪಡೆಯಬೇಕು ಎಂಬುವುದರ ಚರ್ಚೆ ಆಗಬೇಕಿದೆ. ಎಂದರು. 

Advertisement

ಮಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಕೆ.ಕಿಶೋರಿ ನಾಯಕ ಮತ್ತು ಕನ್ನಡ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಆರ್‌.ರಮೇಶ ಮಾತನಾಡಿದರು. ಕರ್ನಾಟಕ ರಾಜ್ಯಉನ್ನತ ಶಿಕ್ಷಣ ಪರಿಷತ್‌ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಸ್‌.ಎ. ಕೋರಿ ಪ್ರಾಸ್ತಾವಿಕ ಮಾತನಾಡಿ, ದೇಶದಲ್ಲಿ 900 ವಿಶ್ವವಿದ್ಯಾಲಯಗಳು, 50,000 ಕಾಲೇಜುಗಳಿದ್ದರೂ ಸಹ ಉನ್ನತ ಶಿಕ್ಷಣದತ್ತ ಮುಖ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಸಬಿಹಾ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವಿಶ್ವವಿದ್ಯಾಲಯದ ಆರ್ಥಿಕ ಅಧಿಕಾರಿ ಎಸ್‌.ಬಿ. ಮಾಡಗಿ ವೇದಿಕೆಯಲ್ಲಿದ್ದರು. ಕುಲಸಚಿವೆ ಆರ್‌. ಸುನಂದಮ್ಮ ಸ್ವಾಗತಿಸಿದರು. ಡಾ| ಗಾಣಿಗೇರ ಭಾರತಿ ನಿರೂಪಿಸಿದರು. ಮೌಲ್ಯಮಾಪನ ಕುಲಸಚಿವ ಪಿ.ಜಿ. ತಡಸದ ವಂದಿಸಿದರು.

ನಮ್ಮಲ್ಲಿ ಉನ್ನತ ಶಿಕ್ಷಣಕ್ಕೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ನಮ್ಮ ಪ್ರತಿಭೆಗಳು ಆನಿವಾರ್ಯವಾಗಿ ಅನ್ಯ ದೇಶಗಳಿಗೆ ವಲಸೆ ಹೋಗುತ್ತಿವೆ. ಆದ್ದರಿಂದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮುಖ್ಯವಾಗಿ ಭೌತಿಕ, ಡಿಜಿಟಲ್‌, ಬೌದ್ಧಿಕ ಮತ್ತು ಭಾವನಾತ್ಮಕ ಸೌಕರ್ಯಗಳನ್ನು ಸೃಷ್ಟಿಸಬೇಕು 
 ಎಸ್‌.ಆರ್‌. ನಿರಂಜನ್‌ ಗುಲ್ಬರ್ಗಾ ವಿಶ್ವ ವಿದ್ಯಾಲಯ ಕುಲಪತಿ 

Advertisement

Udayavani is now on Telegram. Click here to join our channel and stay updated with the latest news.

Next