Advertisement
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಇದಕ್ಕೆ ಸಂಬಂಧಿಸಿದ ದಾಖಲೆಬಿಡುಗಡೆಗೊಳಿಸಿದ ಪಾಲಿಕೆ ವಿಪಕ್ಷನಾಯಕ ಪ್ರೇಮಾನಂದ ಶೆಟ್ಟಿ ಮಾತನಾಡಿ, ಫ್ಲೈಓವರ್ ನಿರ್ಮಾಣ ಸಂಬಂಧ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ಗುರಿಯನ್ನಾಗಿಸಿ ಕಾಂಗ್ರೆಸ್ ಪದೇ ಪದೇ ಟೀಕಿಸು ತ್ತಿದೆ. ಆದರೆ ಫ್ಲೈಓವರ್ ನಿರ್ಮಾಣ ಸಂಬಂಧ 2014ರ ಕಡತವೊಂದನ್ನು ಕಾಂಗ್ರೆಸ್ ಆಡಳಿತದ ಮಹಾನಗರ ಪಾಲಿಕೆ ಇನ್ನೂ ವಿಲೇವಾರಿ ಮಾಡಿಲ್ಲ.ಆ ಮೂಲಕ ಕಾಮಗಾರಿ ವಿಳಂಬಕ್ಕೆ ಅವರೇ ಕಾರಣಕರ್ತರು ಎಂದರು.
ಪಾಲಿಕೆಗೆ ರಾಜ್ಯದಲ್ಲಿ ಬಿಜೆಪಿ ಸರಕಾರ ಮತ್ತು ಕೇಂದ್ರದಲ್ಲಿ ಮೋದಿ ಸರಕಾರದಿಂದ ಮಾತ್ರ ಹೆಚ್ಚಿನ ಅನುದಾನ ಬಂದಿದೆ. ಆದರೆ ಮನಪಾಕ್ಕೆ ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಆರೋಪಿಸುತ್ತಿರುವುದು ಸರಿ ಯಲ್ಲ. ಸ್ವತ್ಛ ಭಾರತ್ ಯೋಜನೆಯಲ್ಲಿ ಶೌಚಗೃಹ ನಿರ್ಮಾಣಕ್ಕೆ 88 ಲಕ್ಷ ರೂ., ಘನತ್ಯಾಜ್ಯ ವಿಲೇವಾರಿಗೆ 14 ಕೋಟಿ ರೂ. ಅನುದಾನ ಬಂದಿದೆ. ಅಮೃತ್ ಯೋಜನೆ, ಸ್ಮಾರ್ಟ್ ಸಿಟಿ ಕೇಂದ್ರದ ಯೋಜನೆಗಳಾಗಿವೆ. 13ನೇ ಹಣಕಾಸು ಯೋಜನೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಮನಪಾಕ್ಕೆ 54.52 ಕೋಟಿ ರೂ. ಅನುದಾನ ಬಂದಿದ್ದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಈ ಅವಧಿಯಲ್ಲಿ 89.21 ಕೋಟಿ ರೂ. ಅನುದಾನ ಬಂದಿದೆ. ಇನ್ನೂ ಪರ್‌ಫಾರ್ಮೆನ್ಸ್ ಆಧಾರದಲ್ಲಿ 20 ಕೋಟಿ ರೂ. ಬರಲಿದೆ ಎಂದರು.