Advertisement

ಕೋವಿಡ್‌ ವರದಿ ತಾಂತ್ರಿಕ ಸಮಸ್ಯೆ ಮಂಗಳೂರಿನಲ್ಲಿ ದುಬಾೖ ಪ್ರಯಾಣಿಕರ ಪರದಾಟ!

01:43 AM Apr 23, 2021 | Team Udayavani |

ಮಂಗಳೂರು: ವಿದೇಶಕ್ಕೆ ಪ್ರಯಾಣಿಸುವರಿಗೆ ಆಸ್ಪತ್ರೆಯಲ್ಲಿ ಮಾಡಲಾಗುವ ಕೋವಿಡ್‌ ಪರೀಕ್ಷಾ ವರದಿಯಲ್ಲಿ ತಾಂತ್ರಿಕ (ಕ್ಯುಆರ್‌ ಕೋಡ್‌) ಸಮಸ್ಯೆ ಎದುರಾದ ಕಾರಣ ದುಬಾೖಗೆ ಪ್ರಯಾಣಿಸಬೇಕಿದ್ದ ಕೆಲವು ಪ್ರಯಾಣಿಕರು ಮಂಗಳೂರು  ವಿಮಾನ ನಿಲ್ದಾಣದಲ್ಲಿ ಪರದಾಡಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.

Advertisement

ದುಬಾೖಗೆ ತೆರಳುವವರು 48 ಗಂಟೆ ಮೀರದ ಕೋವಿಡ್‌ ಟೆಸ್ಟ್‌ ಪ್ರಮಾಣ ಪತ್ರ ಹೊಂದಿರಬೇಕು. ಅದು ಕೋವಿಡ್‌ ಟೆಸ್ಟ್‌ ಮಾಡಿರುವ ಆಸ್ಪತ್ರೆಯ ಕ್ಯುಆರ್‌ಕೋಡ್‌ ಹೊಂದಿರಬೇಕು. ಆದರೆ ಮಂಗಳೂರಿನ ಕೆಲವು ಆಸ್ಪತ್ರೆ ಗಳಲ್ಲಿ ಕ್ಯುಆರ್‌ಕೋಡ್‌ ಸಮಸ್ಯೆಯಿಂದಾಗಿ ಈ ತೊಂದರೆ ಆಯಿತು. ಕೆಲವರು ಪ್ರಯಾಣವನ್ನೇ ಮೊಟಕು ಗೊಳಿಸಬೇಕಾಯಿತು.

ದುಬಾೖಗೆ ಭಾರತದಿಂದ ತೆರಳುವ ಪ್ರಯಾಣಿಕರ ಕೋವಿಡ್‌ ಟೆಸ್ಟ್‌ ಪ್ರಮಾಣ ಪತ್ರದ ಕುರಿತಂತೆ ಅಲ್ಲಿನ ಸರಕಾರ ಹೊಸ ನಿಯಮಾವಳಿ ಜಾರಿ ಗೊಳಿಸಿದ್ದು, ಅದರ ಮಾಹಿತಿ ಮಂಗಳೂರಿನ ಕೆಲವು ಆಸ್ಪತ್ರೆಯವರಿಗೆ ತಡವಾಗಿ ಗೊತ್ತಾದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವಿಸಿತ್ತು.

ಅವಧಿ ಇಳಿಕೆ :

ವಿದೇಶಕ್ಕೆ ಅದರಲ್ಲೂ ಮುಖ್ಯವಾಗಿ ದುಬಾೖಗೆ ಪ್ರಯಾಣಿಸುವವರು ಹೊಂದಿರ ಬೇಕಾದ ಕೋವಿಡ್‌ ಟೆಸ್ಟ್‌ ಪ್ರಮಾಣ ಪತ್ರದ ಅವಧಿಯನ್ನು 72 ಗಂಟೆಯಿಂದ 48 ಗಂಟೆಗೆ ಇಳಿಸ ಲಾಗಿದೆ. ದುಬಾೖಗೆ ನಾಗರಿಕ ವಿಮಾನ ಯಾನ ಪ್ರಾಧಿಕಾರದವರು ನೀಡಿರುವ ಸಂವಹನದ ಪ್ರಕಾರ ಎ. 22ರಿಂದ ಈ ಪ್ರಮಾಣಪತ್ರ ಅನ್ವಯವಾಗಲಿದೆ. ವರದಿಯು ವಿಮಾನ ಯಾನ ಸಂಸ್ಥೆಯು ಅಂಗೀಕರಿಸಿದ ಆಸ್ಪತ್ರೆಗಳ ಕ್ಯುಆರ್‌ ಕೋಡ್‌ ಹೊಂದಿರುವುದನ್ನೂ ಕಡ್ಡಾಯಗೊಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next