ಮಂಗಳೂರು: ದುಬಾೖ-ಮಂಗಳೂರು ಮತ್ತು ಮಂಗಳೂರು- ದುಬಾೖ ನಡುವಣ ಸ್ಪೈಸ್‌ಜೆಟ್ ವಿಮಾನ ಯಾನದಲ್ಲಿ ವಿಳಂಬ ಆಗುತ್ತಿದೆ ಎಂಬ ದೂರುಗಳು ಪ್ರಯಾಣಿಕರಿಂದ ಕೇಳಿ ಬಂದಿವೆ.
ನ. 7ರಂದು ದುಬಾೖ -ಮಂಗಳೂರು ವಿಮಾನ 11 ಗಂಟೆಗಳಷ್ಟು ವಿಳಂಬವಾಗಿ ಮಂಗಳೂರು ವಿಮಾನನಿಲ್ದಾಣಕ್ಕೆ ಬಂದಿಳಿದರೆ ಮಂಗಳೂರು- ದುಬಾೖ ವಿಮಾನ 12 ಗಂಟೆ ವಿಳಂಬವಾಗಿ ಯಾನ ಬೆಳೆಸಿತ್ತು ಎಂಬುದಾಗಿ ಟ್ವಿಟರ್‌ನಲ್ಲಿ ಸಂದೇಶಗಳು ಹರಿದಾಡಿವೆ.
ಈ ಬಗ್ಗೆ ಸ್ಪೈಸ್ ಜೆಟ್ ಸಂಸ್ಥೆ ಮರು ಟ್ವೀಟ್ ಮಾಡಿ ಯಾನ ನಿರ್ವಹಣ ಕಾರಣಗಳಿಂದಾಗಿ ವಿಳಂಬವಾಗಿತ್ತು ಎಂಬುದಾಗಿ ಸ್ಪಷ್ಟೀಕರಣ ನೀಡಿದೆ.
ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುವುದು. ಆದರೆ ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ವಿಳಂಬ ಆಗುವುದನ್ನು ತಪ್ಪಿಸಲಾಗದು.
ಇದನ್ನೂ ಓದಿ:ರಫೇಲ್ ಕಿಕ್‌ಬ್ಯಾಕ್ ತನಿಖೆ ನಡೆಸದಿರಲು ಸಿಬಿಐ ನಿರ್ಧಾರ: ಹೊಸ ವರದಿಯಲ್ಲಿ ಆರೋಪ
ಪ್ರಯಾಣಿಕರಿಗೆ ಆಗಿರುವ ಅನನುಕೂಲತೆಗೆ ವಿಷಾದ ವ್ಯಕ್ತ ಪಡಿಸುತ್ತೇವೆ ಎಂದು ಸ್ಪೈಸ್ ಜೆಟ್ ಸಂಸ್ಥೆ ಹೇಳಿದೆ.