Advertisement

ದುಬಾೖಯಲ್ಲಿ ತೆರೆದ ಶಾಪಿಂಗ್‌ ಮಾಲ್‌ಗ‌ಳು

08:35 PM Jun 03, 2020 | Sriram |

ದುಬಾೖ: ವಿಶ್ವದೆಲ್ಲೆಡೆ ಲಾಕ್‌ಡೌನ್‌ ತೆರವಾಗುತ್ತಿದ್ದಂತೆ ದುಬಾೖನಲ್ಲೂ ಇಂತಹುದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಶಾಪಿಂಗ್‌ ಮಾಲ್‌ಗ‌ಳನ್ನು ಸಂಪೂರ್ಣವಾಗಿ ತೆರೆಯಲಾಗಿದೆ.

Advertisement

ಮಂಗಳವಾರ ರಾತ್ರಿ ಈ ಕುರಿತಾಗಿ ದುಬಾೖ ಆಡಳಿತ ಆದೇಶವನ್ನು ಹೊರಡಿಸಿತ್ತು. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ವಹಿವಾಟು ನಡೆಸುವಂತೆ ಸೂಚನೆ ನೀಡಿತ್ತು. ಆದ್ದರಿಂದ ಕೋವಿಡ್‌ ಸುರಕ್ಷಾ ಕ್ರಮಗಳನ್ನು ಇಲ್ಲಿ ಗ್ರಾಹಕರು ಮತ್ತು ಮಾಲ್‌ ಸಿಬಂದಿ ಪಾಲಿಸುವುದು ಕಡ್ಡಾಯವಾಗಿದೆ.

ಮಾಲ್‌ನಲ್ಲಿ ಸಾಮಾಜಿಕ ಅಂತರ ಕಾಯುವುದು, ಹೆಚ್ಚು ಜನ ಓಡಾಡುವಲ್ಲಿ ಸ್ಯಾನಿಟೈಸೇಶನ್‌, ಗ್ರಾಹಕರ ಜ್ವರ ಪರೀಕ್ಷೆ ಮುಂತಾದ ಕ್ರಮಗಳು ಕಡ್ಡಾಯ. ಅಲ್ಲದೇ ಶಂಕಿತ ಪ್ರಕರಣಗಳಿದ್ದಲ್ಲಿ ಐಸೋಲೇಷನ್‌ಗೆ ಪ್ರತ್ಯೇಕ ಕೋಣೆಗಳನ್ನು ಕಾದಿರಿಸುವುದು ಕಡ್ಡಾಯವಾಗಿದೆ. ದುಬಾೖಯಲ್ಲಿ ಮಾ.23ರಿಂದ ಮಾಲ್‌ಗ‌ಳು ಬಂದ್‌ ಆಗಿದ್ದರೆ, ದುಬಾೖಯಲ್ಲಿ ಮಾಲ್‌ಗ‌ಳು ಮಾ.26ರಿಂದ ಮುಚ್ಚಿದ್ದವು. ಇದರೊಂದಿಗೆ ಎಲ್ಲ ಕಂಪೆನಿಗಳು ಬೆಳಗ್ಗೆ 6ರಿಂದ ರಾತ್ರಿ 11ರವರೆಗೆ ಮಾತ್ರ ಕಾರ್ಯಾಚರಿಸಬಹುದಾಗಿದೆ. ಜಿಮ್‌ಗಳು, ಬೀಚ್‌ಗಳನ್ನು ತೆರೆಯಲಾಗಿದೆ. ಆದರೆ ಮಸೀದಿ, ಸಾರ್ವಜನಿಕ ಈಜುಕೊಳಗಳು, ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳು, ಅಂಗನವಾಡಿಗಳು ತೆರೆಯಲು ಅನುಮತಿಸಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next