Advertisement

ದುಬಾೖಯಲ್ಲಿ 2019ರ ವಿಶ್ವಕಪ್‌ ಕಬಡ್ಡಿ?

06:00 AM Jun 26, 2018 | |

ದುಬಾೖ: ಪ್ರಸ್ತುತ ದುಬಾೖಯಲ್ಲಿ 6 ರಾಷ್ಟ್ರಗಳ ನಡುವಿನ “ದುಬಾೖ ಕಬಡ್ಡಿ ಮಾಸ್ಟರ್ ಲೀಗ್‌’ ನಡೆಯುತ್ತಿದ್ದು, ಇದು ಯಶಸ್ವಿಯಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಇದೇ ಸ್ಫೂರ್ತಿಯಲ್ಲಿ 2019ರ ನಾಲ್ಕನೇ ಆವೃತ್ತಿಯ ವಿಶ್ವಕಪ್‌ ಕಬಡ್ಡಿ ಕೂಟಕ್ಕೂ ದುಬಾೖ ಆತಿಥ್ಯ ವಹಿಸಲು ಸಜ್ಜಾಗಿದೆ. 

Advertisement

ಈ ಕುರಿತಂತೆ ಜೂ. 29ರಂದು ಅಂತಾರಾಷ್ಟ್ರೀಯ ಕಬಡ್ಡಿ ಒಕ್ಕೂಟ ವಾರ್ಷಿಕ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಂದೇ ದುಬಾೖ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಐಕೆಎಫ್ ಅಧ್ಯಕ್ಷ ಜನಾರ್ದನ್‌ ಸಿಂಗ್‌ ಗೆಹೊಟ್‌ ತಿಳಿಸಿದ್ದಾರೆ. 

ಮೂಲಗಳ ಪ್ರಕಾರ ದುಬಾೖಯಲ್ಲಿ ವಿಶ್ವಕಪ್‌ ಕೂಟ ನಡೆಯುವುದು ಖಚಿತ ಎನ್ನಲಾಗಿದೆ. ಈ ಕುರಿತಂತೆ ಪ್ರತಿಕ್ರಿಯಿಸಿದ ಗೆಹೊಟ್‌, “ಈ ಹಿಂದಿನ 3 ವಿಶ್ವಕಪ್‌ ಕೂಟಗಳು ಭಾರತದಲ್ಲಿ ನಡೆದಿವೆ. ಈ ಸಲ ಮೊದಲ ಬಾರಿಗೆ ವಿದೇಶದಲ್ಲಿ ಆಯೋಜಿಸಲು ಚಿಂತನೆ ನಡೆಸ ಲಾಗಿದೆ. ಈ ಕುರಿತಂತೆ ಐಕೆಎಫ್ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next