Advertisement
ಇದಕ್ಕೆ ಕಾರಣವಾಗಿದ್ದು ತಾಂತ್ರಿಕ ದೋಷವಲ್ಲ, ಬದಲಿಗೆ ಇಬ್ಬರೂ ಪೈಲಟ್‌ಗಳ ಅನಾರೋಗ್ಯ. 180 ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ಬೋಯಿಂಗ್ ವಿಮಾನ (ಎಸ್‌ಜಿ 59) ಮಂಗಳವಾರ ರಾತ್ರಿ 12.45ಕ್ಕೆ ಮಂಗಳೂರಿಂದ ನಿರ್ಗಮಿಸಬೇಕಿತ್ತು. ಬೋರ್ಡಿಂಗ್‌ಗೆ ಸಿದ್ಧತೆ ನಡೆಸುತ್ತಿದ್ದಾಗ ಪೈಲಟ್‌ಗೆ ಮಲೇರಿಯಾ ಜ್ವರ ಪತ್ತೆಯಾಗಿದ್ದು, ಹಾರಾಟರದ್ದುಗೊಳಿಸಿ ರಾತ್ರಿ 2 ಗಂಟೆಗೆ ಪ್ರಯಾಣಿಕರನ್ನು ಹೊಟೇಲ್‌ಗೆ ಕರೆತರಲಾಗಿತ್ತು. ಬಳಿಕ ಬುಧವಾರ ಬೆಳಗ್ಗೆ 7.30ಕ್ಕೆ ಮರು ಪ್ರಯಾಣಕ್ಕೆ ವ್ಯವಸ್ಥೆಗೊಳಿಸಲಾಗಿತ್ತು. ವಿಚಿತ್ರ ಅಂದರೆ, ಮಾರನೇ ದಿನ ಬೋರ್ಡಿಂಗ್ ವೇಳೆ ಬಂದಿದ್ದ ಮುಖ್ಯ ಪೈಲಟ್‌ಗೂ ಅನಾರೋಗ್ಯವಾಗಿದೆ. ಈ ಮಧ್ಯೆ ಕೆಲ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸುಮಾರು 20 ಮಂದಿ ಟಿಕೆಟ್ ರದ್ದುಪಡಿಸಿ ಬೇರೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಕೊನೆಗೆ ಬುಧವಾರ ಸಂಜೆ ವಿಮಾನ ದುಬಾೖಗೆ ತೆರಳಿದೆ.
ಸಾಮಾನ್ಯವಾಗಿ ಬೋರ್ಡಿಂಗ್‌ಗೆ
1 ತಾಸು ಮೊದಲು ಪೈಲಟ್‌ಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಅನಾರೋಗ್ಯ ಕಂಡು ಬಂದರೆ ವಿಮಾನ ಚಲಾಯಿಸಲು ಅನುಮತಿ ನೀಡಲಾಗುವುದಿಲ್ಲ. ಮದ್ಯಪಾನ ಸಂಶಯ ಇದ್ದರೂ ಅನುಮತಿ ನೀಡಲಾಗುವುದಿಲ್ಲ. ಇನ್ನು ಪೈಲಟ್‌ಗಳು ತಾವಾಗಿಯೇ ಅನಾರೋಗ್ಯ ಇರುವುದಾಗಿ ಹೇಳಿ ಹಿಂದೆ ಸರಿದರೇ ಅಥವಾ ತಪಾಸಣೆ ವೇಳೆ ಫಿಟ್ ಇಲ್ಲ ಎಂದು ವೈದ್ಯಕೀಯ ವರದಿ ಹೇಳಿತೇ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ನಾವೆಲ್ಲ ಮಂಗಳವಾರ ರಾತ್ರಿ ದುಬಾೖ ವಿಮಾನದಲ್ಲಿ ತೆರಳಬೇಕಿತ್ತು. ಆದರೆ ಬೋರ್ಡಿಂಗ್ ಆಗಬೇಕೆನ್ನುವಷ್ಟರಲ್ಲಿ ಪೈಲಟ್ ಅನಾರೋಗ್ಯದಿಂದ ಮರುದಿನ ಪ್ರಯಾಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಮತ್ತೆ ಬಂದ ಪೈಲಟ್‌ಗೂ ಫಿಟ್‌ನೆಸ್ ಕ್ಲಿಯರ್ ಆಗಿಲ್ಲ ಎಂದು ಮತ್ತೆ ಹೊಟೇಲ್‌ಗೆ ಕರೆತಂದರು. ಮಹಿಳೆಯೊಬ್ಬರಿಗೆ ಬುಧವಾರ ಬೆಳಗ್ಗೆ 10 ಗಂಟೆಗೆ ದುಬಾೖನಲ್ಲಿ ತುರ್ತಾಗಿ ವೈದ್ಯರ ಭೇಟಿ ಮಾಡಬೇಕಿತ್ತು. ಹಲವರು ನಿಗದಿತ ಸಮಯಕ್ಕೆ ತಲುಪಲಾಗದ ಆತಂಕದಲ್ಲಿದ್ದರು.
– ಭಟ್ಕಳ ಮೂಲದ ಓರ್ವ ಪ್ರಯಾಣಿಕ
Related Articles
– ಆನಂದ್, ಸ್ಪೈಸ್ ಜೆಟ್‌ನ ಮಾಧ್ಯಮ ವಿಭಾಗ
Advertisement