ದುಬೈ: 2021ರ ಡಿಸೆಂಬರ್ ಅಂತ್ಯದೊಳಗೆ ಶೇ.70ರಷ್ಟು ಜನಸಂಖ್ಯೆಗೆ ಅಮೆರಿಕ ಅಭಿವೃದ್ದಿಪಡಿಸಿದ ಫೈಜರ್-ಬಯೋಟೆಕ್ ಕೋವಿಡ್ ಲಸಿಕೆ ನೀಡಲು ಗುರಿ ಹೊಂದಿರುವುದಾಗಿ ದುಬೈ ಆರೋಗ್ಯ ಅಧಿಕಾರಿಗಳು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ದೇಶದ ವಾಣಿಜ್ಯ ಕೇಂದ್ರವಾಗಿರುವ ದುಬೈ, ಕೋವಿಡ್ ಸೋಂಕು ಎದುರಿಸಲು ಜನರಿಗೆ ಪ್ರಬಲ ರೋಗನಿರೋಧಕ ಶಕ್ತಿಯ ಅಗತ್ಯವಿದೆ ಎಂಬುದಾಗಿ ಕೋವಿಡ್ 19 ಸೋಂಕಿನ ಲಸಿಕೆ ಸಮಿತಿಯ ಅಧ್ಯಕ್ಷೆ ಫರಿದಾ ಅಲ್ ಖಾಜಾ ತಿಳಿಸಿದ್ದಾರೆ.
ದುಬೈನಲ್ಲಿ ಒಟ್ಟು 33 ಲಕ್ಷ ಜನರಿಗೆ ಕೋವಿಡ್ 19 ಸೋಂಕು ತಗುಲಿತ್ತು. ಕಳೆದ ವಾರವಷ್ಟೇ ಉಚಿತ ಕೋವಿಡ್ ಲಸಿಕೆ ನೀಡುವ ಬಗ್ಗೆ ಪ್ರಚಾರ ಆರಂಭಿಸಿತ್ತು. ಮೊದಲ ಹಂತದಲ್ಲಿ ಹಿರಿಯ ನಾಗರಿಕರಿಗೆ (60ವರ್ಷ ಮತ್ತು ಮೇಲ್ಪಟ್ಟವರಿಗೆ) ಆದ್ಯತೆ ಹಾಗೂ 18 ವರ್ಷ ಮೇಲ್ಪಟ್ಟದವರಿಗೆ ಮತ್ತು ಆರೋಗ್ಯ ಸೇವೆ ಸಲ್ಲಿಸುವವರಿಗೆ, ವೈದ್ಯರಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಇದನ್ನೂ ಓದಿ:ಗುಜರಾತ್: ಆರು ಬಾರಿ ಸಂಸದ, ಮಾಜಿ ಸಚಿವ ಎಂಬಿ ವಾಸವ್ ಬಿಜೆಪಿಗೆ ರಾಜೀನಾಮೆ
ದುಬೈನಲ್ಲಿ ಎರಡನೇ ಹಂತದ ಲಸಿಕೆ ನೀಡುವಿಕೆಯನ್ನು ಏಪ್ರಿಲ್ ನಿಂದ ಆರಂಭಿಸಲಾಗುವುದು. ಇದು ಎಲ್ಲಾ ನಾಗರಿಕರಿಗೂ ಮತ್ತು ನಿವಾಸಿಗಳಿಗೂ ಲಭ್ಯವಾಗಲಿದೆ ಎಂದು ಖಾಜಾ ತಿಳಿಸಿದ್ದಾರೆ.