Advertisement

ಸ್ಮಶಾನ ಜಾಗಕ್ಕಾಗಿ ಡಿಎಸ್‌ಎಸ್‌ ಪ್ರತಿಭಟನೆ

12:07 PM Mar 17, 2018 | |

ನಂಜನಗೂಡು: ತಾಲೂಕಿನ ಕುರಿಹುಂಡಿ ಬಸವಟ್ಟಿಗೆ ಹೊಸಹಳ್ಳಿ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಇಂದಿಗೂ ಸ್ಮಶಾನಕ್ಕೆ ಜಾಗವಿಲ್ಲ. ಆದ ಕಾರಣ ಗ್ರಾಮಗಳ ಸ್ಮಶಾನಕ್ಕೆ ಜಾಗ ನೀಡಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಶುಕ್ರವಾರ ತಾಲೂಕು ತಹಶೀಲ್ದಾರರ ಕಾರ್ಯಾಲಯದ ಆವರಣದಲ್ಲಿ ಜಮಾವಣೆ ಗೊಂಡ ಸಂಘಟನೆಯ ಸದಸ್ಯರು  ಮರಣ ಹೊಂದಿದವರ ಅಂತ್ಯ ಸಂಸ್ಕಾರಕ್ಕೆ ಸರ್ಕಾರ ನೀಡುವ ಹಣ ಮೂರು ವರ್ಷವಾದರೂ ಬಿಡುಗಡೆಯಾಗಿಲ್ಲ.  ಬಡವರ ಅನ್ನಭಾಗ್ಯದಲ್ಲೂ ತಾರತಮ್ಯ ಎಸಗಲಾಗುತ್ತಿದೆ.

ಬಯೋಮೇಟ್ರಿಕ್‌ ವ್ಯವಸ್ಥೆಯಿಂದಾಗಿ ಕೂಲಿ ನಾಲಿ ಮಾಡುವ ಬಡವರ ಬೆರಳಚ್ಚು ತಾಳೆಯಾಗದೆ ಅವರ ಪರದಾಟ ಹೇಳತೀರದಾಗಿದೆ. ಅಸ್ಪೃಶ್ಯತೆ ಆಚರಣೆಯಂತಹ ಕ್ರೂರ ಆಚರಣೆ ತಾಲೂಕಿನಲ್ಲಿ ಮುಂದುವರಿದಿದ್ದು, ಆಚರಣೆ ತಡಗಟ್ಟುವಲ್ಲಿ ತಾಲೂಕು ಆಡಳಿತ ವಿಫ‌ಲವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆ ನಂತರ ತಹಶೀಲ್ದಾರ ದಯಾನಂದ ಅವರಿಗೆ ಮನವಿ ಸಲ್ಲಿಸಿದರು.  ಪ್ರತಿಭಟನೆಯಲ್ಲಿ ಡಿಎಸ್‌ಎಸ್‌ ಬಣದ ತಾಲೂಕು ಸಂಚಾಲಕ ಶಂಕರಪುರ ಸುರೇಶ, ಯಶವಂತಕುಮಾರ, ಚಿಕ್ಕಣ್ಣ, ನಟರಾಜು, ಕೃಷ್ಣಮೂರ್ತಿ, ಸಾಧಿಕ್‌ ಶಿವಕುಮಾರ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next