Advertisement

ಭ್ರಷ್ಟಾಚಾರ ತನಿಖೆಗೆ ಡಿಎಸ್‌ಎಸ್‌ ಒತ್ತಾಯ

03:49 PM Nov 12, 2020 | Suhan S |

ಶಹಾಪುರ: ತಾಲೂಕಿನ ಹಲವಾರು ಗ್ರಾಪಂಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಅವ್ಯವಹಾರ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಭೀಮವಾದ) ತಾಪಂ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿತು.

Advertisement

ಸಮಿತಿ ಜಿಲ್ಲಾ ಸಂಚಾಲಕ ಶರಣುದೋರನಹಳ್ಳಿ ಮಾತನಾಡಿ, ತಾಲೂಕಿನ ದೋರನಹಳ್ಳಿ, ಹಯ್ನಾಳ(ಬಿ),ಕೊಂಕಲ್‌, ಹುರಸಗುಂಡಗಿ, ರಸ್ತಾಪುರ,ಮದ್ರಿಕಿ, ಐಕೂರು, ಟಿವಡಿಗೇರಾ,ಚಾಮನಾಳ, ಬೀರನೂರ, ಹೋತಪೇಠಗ್ರಾಪಂಗಳಲ್ಲಿ 14 ಮತ್ತು 15ನೇ ಸಾಲಿನಹಣಕಾಸು ಹಾಗೂ ವಸತಿ, ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಡುವಲ್ಲಿ ಅವ್ಯವಹಾರ ನಡೆದಿದ್ದು, ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಅಧಿ ಕಾರಿಗಳುಮತ್ತು ಆಡಳಿತಾರೂಢ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಹಲವು ಪಂಚಾಯಿತಿಗಳಲ್ಲಿ 14 ಮತ್ತು15ನೇ ಹಣಕಾಸಿನಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಮುಕ್ಕಾಲು ಭಾಗ ಯಾವುದೇ ಕಾಮಗಾರಿಗಳಿಗೆ ವಿನಿಯೋಗಿಸದೇ ಬೋಗಸ್‌ ಬಿಲ್‌ ಮಾಡಿದ್ದಾರೆ. ಶೌಚಾಲಯ ನಿರ್ಮಾಣ ಯೋಜನೆಯಡಿ ಶೌಚಾಲಯ ನಿರ್ಮಿಸದೇ ಹಣ ಬಿಡುಗಡೆಗೊಳಿಸಿದ್ದುಭ್ರಷ್ಟಾಚಾರದಲ್ಲಿ ತೊಡಗಿದ ಗ್ರಾಪಂಗಳಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.ದುರ್ಬಳಕೆ ಮಾಡಿಕೊಂಡ ಹಣ ವಾಪಸ್‌ ಪಡೆದು ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.

ಈ ವೇಳೆ ರಾಜ್ಯ ಸಂಚಾಲಕ ಈರಣ್ಣ ಕಸನ್‌, ವಿಶ್ವ ನಾಟೇಕಾರ, ರಾಜೂ ಸಲಾದಪುರ, ತಾಲೂಕು ಸಂಚಾಲಕ ಚಂದ್ರಶೇಖರ ಹುರುಸಗುಂಡಗಿ, ಸಂತೋಷ ಗೋಗಿ, ವೀರೇಶ ಕೊಂಕಲ್‌, ಸಾಬಣ್ಣ ಕಿರಿ ಹಯ್ನಾಳ, ಶಿವು ಪೋತೆ,ರಾಜು ಚಂದಾಪುರ, ಮಾನಪ್ಪ ಜಿಗ್ರಿ, ಮಲ್ಲು ಆರಬೋಳ, ಶೇಖರ ಬಡಿಗೇರ, ಮಲ್ಲಿಕಾರ್ಜುನ ಶಹಾಪುರ, ಮಂಜು ಹಾಲಬಾವಿ, ಸಿದ್ದು ಮುಂಡಾಸ, ಶರಣು ಐಕೂರ, ಬಸವರಾಜ ಕ್ಯಾತನಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next