Advertisement
ಒಣ ತ್ಯಾಜ್ಯ ಸಂಗ್ರಹಣ ಘಟಕಗಳಲ್ಲಿ ಯಂತ್ರಗಳು ಅಳವಡಿಕೆ ನಂತರ ಪ್ರಾಯೋಗಿಕವಾಗಿ ಮಹಾನಗರ ಪಾಲಿಕೆ ನಿರ್ವಹಣೆ ಕೈಗೆತ್ತಿಕೊಂಡಿತ್ತು. ನಿತ್ಯ ತಲಾ 5 ಟನ್ ಒಣ ತ್ಯಾಜ್ಯ ಪ್ರತ್ಯೇಕಿಸುವ 4 ಹಾಗೂ 15 ಟನ್ ಸಾಮರ್ಥಯದ 1 ಘಟಕಗಳನ್ನು ಪಾಲಿಕೆ ಪೌರಕಾರ್ಮಿಕರ ಮೂಲಕ ನಿರ್ವಹಿಸಲಾಗುತ್ತಿದೆ.
Related Articles
Advertisement
ಆದಾಯಕ್ಕೆ ಸವಾಲೊಡ್ಡಿದ ಕಸ ವಿಂಗಡಣೆ: ಪ್ರತಿಯೊಂದು ಒಣ ತ್ಯಾಜ್ಯ ಸಂಗ್ರಹ ಘಟಕಗಳಿಗೆ ಪಾಲಿಕೆ 70-75 ಲಕ್ಷ ರೂ. ಸಾರ್ವಜನಿಕ ತೆರಿಗೆ ಹಣ ವಿನಿಯೋಗಿಸಲಾಗಿದೆ. ಹೀಗಾಗಿ ಪಾಲಿಕೆಗೆ ಸಮರ್ಪಕ ನಿರ್ವಹಣೆ ಜತೆಗೆ ಆದಾಯದ ನಿರೀಕ್ಷೆಯೂ ಇದೆ. ಆದರೆ ಮನೆ ಮನೆಗಳಿಂದ ಹಸಿ ಕಸ ಹಾಗೂ ಒಣ ಕಸ ವಿಂಗಡಣೆಯಾಗದಿರುವುದು ಪಾಲಿಕೆ ದೊಡ್ಡ ಸವಾಲಿನ ಕಾರ್ಯವಾಗಿದೆ. ನಿತ್ಯವೂ ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ಗಳ ಜಿಂಗಲ್ ಮೂಲಕ ಜಾಗೃತಿ ಮೂಡಿಸಿದರೂ ಸಮರ್ಪಕ ವಿಂಗಡಣೆ ಸಾಧ್ಯವಿಲ್ಲ. ಅಧಿಕಾರಿಗಳು ಕೊಂಚ ಬಿಗಿ ಮಾಡಿದಾಗ ಆಯಾ ವಾಡ್ ìನ ಆರೋಗ್ಯ ನಿರೀಕ್ಷಕರು ಎಚ್ಚೆತ್ತುಕೊಳ್ಳುತ್ತಾರೆ. ಇದರಿಂದ ಆಟೋ ಟಿಪ್ಪರ್ ಕಾರ್ಮಿಕರು ವಿಂಗಡಣೆ ಕಸ ಮಾತ್ರ ಪಡೆಯುತ್ತಾರೆ. ನಂತರದಲ್ಲಿ ಯಥಾ ಸ್ಥಿತಿಗೆ ತಲುಪುತ್ತಿದೆ. ಇದರಿಂದಾಗಿ ನಿರೀಕ್ಷಿಸಿದ ಆದಾಯ-ನಿರ್ವಹಣೆ ಅಸಾಧ್ಯವಾಗಿದೆ.
ಕಠಿಣ ಕ್ರಮವಿಲ್ಲ ಯಾಕೆ: ಕಾಯ್ದೆ ಪ್ರಕಾರ ಹಸಿ ಕಸ ಹಾಗೂ ಒಣ ಕಸ ವಿಂಗಡಿಸಿ ಕೊಡಬೇಕು. ಇಂತಹ ಕಸವನ್ನು ಮಾತ್ರ ಪೌರ ಕಾರ್ಮಿಕರು ಪಡೆಯಬೇಕು. ಕಸ ವಿಂಗಡಿಸಿ ಕೊಟ್ಟರೂ ಟಿಪ್ಪರ್ ಕಾರ್ಮಿಕರು ಅದನ್ನು ಒಂದೇ ಕಂಟೇನರ್‌ಗೆ ಸುರಿಯುವುದು ನಡೆಯುತ್ತಿದೆ. ಇಷ್ಟೆಲ್ಲಾ ಆದರೂ ಕಸ ನೀಡುವವರು ಹಾಗೂ ಪಡೆಯುವವರ ವಿರುದ್ಧ ಯಾವುದೇ ಕ್ರಮ ಆಗದಿರುವುದು ಪ್ರಾಥಮಿಕ ಹಂತದಲ್ಲೇ 60 ಕೋಟಿ ರೂ. ಸಮಗ್ರ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಸಮರ್ಪಕ ನಡೆಯದಂತಾಗಿದೆ. ಪ್ರಾಥಮಿಕ ಹಂತದಲ್ಲಿ ಕಠಿಣ ಕ್ರಮ ಕೈಗೊಂಡರೆ ಯಶಸ್ಸು ಸಾಧ್ಯ ಎನ್ನುವುದು ಖಾಸಗಿ ಸಂಸ್ಥೆ ವಹಿಸಿಕೊಂಡಿರುವ ಪ್ರದೇಶದಲ್ಲಿ ಸಾಬೀತಾಗಿದೆ. ಪಾಲಿಕೆ ಘನ ತ್ಯಾಜ್ಯ ನಿರ್ವಹಣಾ ವಿಭಾಗ ಈ ಬಗ್ಗೆ ಇನ್ನಷ್ಟು ಕಾರ್ಯಪ್ರವೃತ್ತವಾದರೆ ಮಾತ್ರ ಈ ಯೋಜನೆ ಯಶಸ್ವಿಯಾಗಲು ಸಾಧ್ಯವಾಗಿದೆ.
ಒಣ ತ್ಯಾಜ್ಯ ಸಂಗ್ರಹಣ ಘಟಕಗಳ ಸಮಗ್ರ ನಿರ್ವಹಣೆ ಕುರಿತು ವರದಿ ತಯಾರಿಸಲು ಎರಡು ಸಂಸ್ಥೆಗಳಿಗೆ ಘಟಕಗಳನ್ನು ನೀಡಲಾಗಿದೆ. ಒಂದು ತಿಂಗಳೊಳಗೆ ಸಮಗ್ರ ವರದಿ ತಯಾರಿಸಿ ನೀಡಲಿದ್ದಾರೆ. ಈ ವರದಿ ಆಧರಿಸಿ ಒಂದು ವ್ಯವಸ್ಥೆ ಅಳವಡಿಕೆ ಮಾಡಲು ಸಾಧ್ಯವಾಗುತ್ತದೆ. ಸ್ಥಳೀಯವಾಗಿ ಕಸ ಆಯುವವರಿಗೂ ನಿರಂತರ ಕೆಲಸ ನೀಡಿದಂತಾಗುತ್ತದೆ. ಸಮರ್ಪಕ ನಿರ್ವಹಣೆಯೊಂದಿಗೆ ಪಾಲಿಕೆಗೆ ಒಂದಿಷ್ಟು ಆದಾಯ ಬರಲಿದೆ. –ಡಾ| ಗೋಪಾಲಕೃಷ್ಣ, ಆಯುಕ್ತ, ಮಹಾನಗರ ಪಾಲಿಕೆ
ಕಳೆದ ಒಂದು ವರ್ಷದಿಂದ ಒಂದು ಘಟಕವನ್ನು ಕಸ ಆಯುವವರನ್ನು ಬಳಸಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇವೆ. ಪಾಲಿಕೆ ನಿರೀಕ್ಷೆ ಪ್ರಕಾರ ಒಂದು ತಿಂಗಳಲ್ಲಿ ಪ್ರತಿಯೊಂದು ಅಂಶಗಳನ್ನೊಳಗೊಂಡ ವರದಿ ನೀಡುತ್ತೇವೆ. ಪ್ರಾಥಮಿಕ ಹಂತದಲ್ಲೇ ಕಸ ವಿಂಗಡಣೆಯಾದರೆ ನಿರ್ವಹಣೆ-ನಿರೀಕ್ಷಿತ ಆದಾಯ ಪಡೆಯಬಹುದಾಗಿದೆ. –ಮಂಜುನಾಥ ಬಾರಕೇರ, ವ್ಯವಸ್ಥಾಪಕ, ಹಸಿರು ದಳ ಸಂಸ್ಥೆ
–ಹೇಮರಡ್ಡಿ ಸೈದಾಪುರ