ನಂಜನಗೂಡು: ವರುಣಾ ವಿಧಾನ ಸಭಾ ಕ್ಷೇತ್ರಕ್ಕೆ ಸೇರುವ ತಾಯೂರು ಗ್ರಾಪಂ ಅನ್ನು ಬಯಲು ಮುಕ್ತ ಶೌಚಾಲಯವನ್ನಾಗಿ ಮಾಡಲು ಶ್ರಮಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪವಿತ್ರರನ್ನು ವರುಣಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಶನಿವಾರ ಸನ್ಮಾನಿಸಿದರು.
ನಂತರ ಡಾ.ಯತೀಂದ್ರ ಮಾತನಾಡಿ, ಇದೇ ರೀತಿ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶ್ರಮಿಸಿದಲ್ಲಿ ಕಲವೇ ದಿನಗಳಲ್ಲಿ ವರುಣಾ ವಿಧಾನ ಸಭಾ ಕ್ಷೇತ್ರವೇ ಬಯಲು ಶೌಚಾಲಯ ಮುಕ್ತ ಕ್ಷೇತ್ರವಾಗುತ್ತದೆ ಎಂದರು.
ಗ್ರಾಪಂ ಅಧ್ಯಕ್ಷೆ ಗೌರಮ್ಮ ಶಿವಣ್ಣ ಮಾತನಾಡಿ, ನಮ್ಮ ಪಂಚಾಯತಿಯನ್ನು ಬಯಲು ಮುಕ್ತ ಶೌಚಾಲಯವನ್ನಾಗಿ ಮಾಡಲು ಪಣತೊಟ್ಟು ಶ್ರಮಿಸಿದ ಅಭಿವೃದ್ಧಿ ಅಧಿಕಾರಿ ಪವಿತ್ರರನ್ನು ಗ್ರಾಮಸ್ಥರ ಪರವಾಗಿ ನಾವು ಅಭಿನಂದಿಸುತ್ತೇವೆ.
ಬಯಲು ಮುಕ್ತ ಶೌಚಾಲಯವನ್ನಾಗಿ ನಮ್ಮ ಗ್ರಾಮ ಪರಿವರ್ತನೆಯಾಗಿದ್ದರ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಸದ್ಯದಲ್ಲೇ ನಮ್ಮ ಗ್ರಾಪಂನ್ನು ಬಯಲು ಮುಕ್ತ ಶೌಚಾಲಯವೆಂದು ಘೋಷಣೆ ಮಾಡಿ ಸರ್ಕಾರದಿಂದ ಪ್ರಶಸ್ತಿ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಎಸ್.ಸಿ.ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ವರುಣಾ ಕ್ಷೇತ್ರದ ಬಗರ್ ಹುಕುಂ ಅಧ್ಯಕ್ಷ ಹೊಸಕೋಟೆ ಕುಮಾರ್, ವಾಲ್ಮೀಕಿ ನಿಗಮ ನಿರ್ದೇಶಕ ಬಸವರಾಜು, ಶಿವನಾಗು, ಬೇಬಿ ಲತಾ, ಹಾರೋಪುರ ಶಿವಣ್ಣ, ಮಹಾವೀರ್ ಸಿಂಗ್, ದೊರೆಸ್ವಾಮಿ ಗೌಡ, ನಂಜುಂಡೇಗೌಡ,
ಚಾಮುಂಡನಾಯಕ, ಬಸವರಾಜು, ಬಿ.ಡಿ.ಮಾದೇಶ್, ಚಿನ್ನಸ್ವಾಮಿ, ಟೈಲರ್ ಶಿವಣ್ಣ, ವಿಠಲ್, ಮಲ್ಲಣ್ಣ, ರಾಜೇಶ್, ತಾಪಂ ಇಒ ರೇವಣ್ಣ, ತಹಶೀಲ್ದಾರ್ ದಯಾನಂದ್, ಲೋಕೋಪಯೋಗಿ ಇಲಾಖೆ ಅಧಿಕಾರಿ ಸುರೇಂದ್ರ, ತಾಯೂರು ಗ್ರಾಪಂಗೆ ಸೇರಿದ ಎಲ್ಲಾ ಗ್ರಾಮಗಳ ಮುಖಂಡರು ಹಾಜರಿದ್ದರು.