Advertisement

ಐರೋಪ್ಯ ವಿಜ್ಞಾನಿಗಳ ಪ್ರಯೋಗ ಡ್ರೈ ಇಮ್ಮರ್ಷನ್‌ ಸ್ಟಡಿ

04:05 PM Oct 01, 2021 | Team Udayavani |

ಐರೋಪ್ಯ ಒಕ್ಕೂಟದ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ), “ಡ್ರೈ ಇಮ್ಮರ್ಷನ್‌ ಸ್ಟಡಿ’ ಎಂಬ ಹೊಸ ಅಧ್ಯಯನ ಆರಂಭಿಸಿದೆ. ಫ್ರಾನ್ಸ್‌ ನಲ್ಲಿನ ಟೌಲೌಸ್‌ ಎಂಬಲ್ಲಿರುವ ಎಂಇಡಿಇಎಸ್‌ ಸ್ಪೇಸ್‌ ಕ್ಲಿನಿಕ್‌ನಲ್ಲಿ ಈ ಪ್ರಯೋಗವನ್ನು ಸೆ. 21ರಿಂದಲೇ ಆರಂಭಿಸಲಾಗಿದೆ. ಈ ಪ್ರಯೋಗಕ್ಕೆ ಒಳಗಾದ ಆಯ್ದ 20 ಮಹಿಳಾ ಯುವ ವಿಜ್ಞಾನಿಗಳು “ಐದು ದಿನಗಳವರೆಗೆ ನೀರಿನಲ್ಲಿ ಅರ್ಧ ಮುಳುಗಿ ನಿಂತಿರಬೇಕಾದ ಪ್ರಯೋಗವಿದು. ಯಾಕೆ ಈ ಪ್ರಯೋಗ, ಇದರ ಲಾಭವೇನು
ಎಂಬುದರ ಮಾಹಿತಿ ಇಲ್ಲಿದೆ.

Advertisement

ಹೇಗಿರುತ್ತೆ ಈ ಪ್ರಯೋಗ?
ಒಬ್ಬ ಮನುಷ್ಯ ಹಿಡಿಸುವಷ್ಟು ಕಂಟೈನರ್‌ನಲ್ಲಿ ನೀರು ತುಂಬಿ ಅದರಲ್ಲಿ ಪ್ರಯೋಗಕ್ಕೆ ಗುರಿಯಾಗಲು ಒಪ್ಪಿಕೊಂಡಿರುವ ಮಹಿಳೆಯರನ್ನು ಇಳಿಸಲಾಗುತ್ತದೆ. ಸೊಂಟದವರೆಗೆ ಮಾತ್ರ ತಮ್ಮ ದೇಹವನ್ನು ಅವರು ಮುಳುಗಿಸಬೇಕಿದ್ದು, ಉಳಿದರ್ಧ ದೇಹವನ್ನು ಕಂಟೈನರ್‌ನಿಂದ ಹೊರಗೆ ಇರುವಂತೆ ಆ ನೀರಿನ ಒತ್ತಡದಲ್ಲಿ ತಮ್ಮ ಕಾಲುಗಳು ತೇಲಾಡುತ್ತಿರುವಂತೆ ನೋಡಿಕೊಳ್ಳಬೇಕು. ಅವರ ಕಾಲುಗಳಿಗೆ ವಾಟರ್‌ ಪ್ರೂಫ್ ಉಡುಗೆ ಹಾಕಿರುವುದರಿಂದ ಚರ್ಮಕ್ಕೇನೂ ತೊಂದರೆ ಇರುವುದಿಲ್ಲ.

ಏಕೆ ಈ ಪ್ರಯೋಗ?
ಭೂಮಿಯ ಉಪಗ್ರಹವಾದ ಚಂದ್ರ ಮತ್ತು ಅದನ್ನು ದಾಟಿರುವ ಅಂತರಿಕ್ಷವನ್ನು ಅಧ್ಯಯನ ಮಾಡುವ ಉದ್ದೇಶದಿಂದ ಪುರುಷರು ಮತ್ತು ಮಹಿಳೆಯರುಳ್ಳ ತಂಡವೊಂದನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಿರ್ಧರಿಸಿದೆ. ಈ ಯೋಜನೆಯ ಹೆಸರು ಆರ್ಟೆಮಿಸ್‌. ಈಗಾಗಲೇ ಅನೇಕ ಪುರುಷ ಖಗೋಳ ವಿಜ್ಞಾನಿಗಳು ಚಂದ್ರನ ಮೇಲೆ ಇಳಿದು ಬಂದಿದ್ದಾರೆ.

ಆದರೆ, ಮಹಿಳಾ ವಿಜ್ಞಾನಿಗಳು ಅಲ್ಲಿಗೆ ಹೋಗಿಲ್ಲ. ಹಾಗಾಗಿ, ಚಂದ್ರನ ಪರಿಸರ ಮಹಿಳೆಯರ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯಲು ಈ ಅಧ್ಯಯನ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next