Advertisement

ತಾಲಿಬಾನ್ ಹಿಂಸಾಚಾರ : ಭಾರತದಲ್ಲಿ ಡ್ರೈ ಫ್ರುಟ್ಸ್ ಗಳ ಬೆಲೆ ಶೇ.15-20 ರಷ್ಟು ಏರಿಕೆ..!

10:49 AM Aug 24, 2021 | |

ಕಾನ್ ಪುರ್ : ಅಫ್ಗಾನಿಸ್ತಾನದ ಹಿಂಸಾಚಾರದ ನಡುವೆ ಅಲ್ಲಿಂದ ದೇಶಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದ್ದ ಡ್ರೈ ಫ್ರುಟ್ಸ್ ನ ವ್ಯಾಪಾರ ವಹಿವಾಟಿನ ಮೇಲೆ ಭಾರಿ ಪರಿಣಾಮ ಬೀರಿದೆ. ಅಫ್ಗಾನಿಸ್ತಾನವನ್ನು ತಾಲಿಬಾನ್ ಉಗ್ರ ಸಂಘಟನೆ  ವಶಪಡಿಸಿಕೊಂಡ ಬೆನ್ನಿಗೆ ತಾಲಿಬಾನ್ ಭಾರತಕ್ಕೆ ರಫ್ತು ಮಾಡುತ್ತಿದ್ದ ಹಾಗೂ ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ಎಲ್ಲಾ ವ್ಯಾಪಾರ ವಹಿವಾಟನ್ನು ಸಂಪೂರ್ಣವಾಗಿ ನಿಲ್ಲಿಸಿದ್ದು, ದೇಶದಲ್ಲಿ ಡ್ರೈ ಫ್ರುಟ್ಸ್ ಗಳ ಬೆಲೆ ಗಗನಕ್ಕೇರುತ್ತಿರುವುದು ಗ್ರಾಹಕರು ಹಾಗೂ ವ್ಯಾಪಾರಿಗಳ ನಿದ್ದೆಗೆಡಿಸಿದೆ.

Advertisement

ನಯಗಂಜ್ ಡ್ರೈ ಫ್ರೂಟ್ಸ್ ಮಾರುಕಟ್ಟೆಯ ಉಪಾಧ್ಯಕ್ಷ ಅಲಂಕಾರ ಒಮರ್ ಸುದ್ದಿ ಸಂಸ್ಥೆ ಎಎನ್ ಐ ನೊಂದಿಗೆ ಮಾತನಾಡಿ, “ಆ ದೇಶದ ಬಿಕ್ಕಟ್ಟು ನಮ್ಮ ಭಾರತದ ಮೇಲೂ ಪರಿಣಾಮ ಬೀರಿದೆ. ನಾವು ಅಫ್ಘಾನಿಸ್ತಾನದಿಂದ ಪಿಸ್ತಾ, ಬಾದಾಮಿ, ಅಂಜೂರ, ಡ್ರೈ ಏಪ್ರಿಕಾಟ್‌ ಗಳನ್ನು ಆಮದು ಮಾಡಿಕೊಳ್ಳುತ್ತೇವೆ. ಅಲ್ಲಿ ನಡೆಯುತ್ತಿರುವ ಹಿಂಸಾಚಾರದ ಕಾರಣದಿಂದಾಗಿ ಬೆಲೆಗಳು ಸುಮಾರು ಶೇಕಡಾ 15-20 ರಷ್ಟು ಹೆಚ್ಚಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 25,467 ಕೋವಿಡ್ ಪ್ರಕರಣ ಪತ್ತೆ, ಸಾವಿನ ಪ್ರಮಾಣ ಇಳಿಕೆ

ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಹಕರೊಬ್ಬರು, ನಾನು ಮಾರುಕಟ್ಟೆಗೆ ನನ್ನ ಕುಟುಂಬಕ್ಕಾಗಿ ಡ್ರೈ ಫ್ರುಟ್ಸ್ ತರುವುದಕ್ಕಾಗಿ ಬಂದಿದ್ದೆ. ಆದರೇ, ಅಫ್ಗಾನಿಸ್ತಾನದಿಂದ ಡ್ರೈ ಫ್ರುಟ್ಸ್ ಆಮದು ಆಗುತ್ತಿಲ್ಲವಾದ್ದರಿಂದ, ದೇಶದ ಮಾರುಕಟ್ಟೆಯಲ್ಲಿ ಆ ಪರಿಣಾಮ ಬೀರಿದೆ. ಅಗತ್ಯ ವಸ್ತುಗಳ ಬೆಲೆ ಎಂದಿಗೂ ದುಬಾರಿಯಾಗಿದೆ. ಇದು ಗ್ರಾಹಕರ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಆದಷ್ಟು ಶೀಘ್ರದಲ್ಲಿ ಈ ಎಲ್ಲಾ ಸಮಸ್ಯೆಗಳು ಸಹಜ ಸ್ಥಿತಿಯತ್ತ ಮರಳಲಿದೆ ಎಂದು ನಿರೀಕ್ಷಿಸುತ್ತೇವೆ ಎಂದಿದ್ದಾರೆ.

ಇನ್ನು, ತಾಲಿಬಾನ್ ಪಾಕಿಸ್ತಾನದ ಸಾಗಣೆ ಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ನಿಲ್ಲಿಸಿದೆ ಎಂದು ಹೇಳಲಾಗುತ್ತಿದೆ. ಯಾವಾಗ ಈ ಎಲ್ಲಾ ಸ್ಥಿತಿ ಸಹಜವಾಗುತ್ತದೆ ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲವೆಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

Advertisement

ಅಫ್ಗಾನಿಸ್ತಾನದಿಂದ ಸುಮಾರು ಶೇಕಡಾ. 85 ರಷ್ಟು ಡ್ರೈ ಫ್ರುಟ್ಸ್ ಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿತ್ತು. ಆದರೇ, ಈಗ ಅಫ್ಗಾನಿಸ್ತಾನವನ್ನು ತಾಲಿಬಾನ್ ಉಗ್ರ ಸಂಘಟನೆ ವಶಪಡಿಸಿಕೊಂಡ ನಂತರ ಭಾರತದೊಂದಿಗೆ ಎಲ್ಲಾ ಆಮದು ಹಾಗೂ ರಫ್ತು ವಹಿವಾಟನ್ನು ತಾಲಿಬಾನ್ ನಿಲ್ಲಿಸಿದೆ. ಅಲ್ಲಿ ರಾಜಕೀಯ ವಿಷಮ ಸ್ಥಿತಿ ಉಂಟಾಗಿದೆ. ಈ ಕಾರಣದಿಂದಾಗಿ ಭಾರತದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿರುವಾಗಲೇ ಡ್ರೈ ಫ್ರುಟ್ಸ್ ಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಅಫ್ಗಾನಿಸ್ತಾನದಲ್ಲಿನ ತಲ್ಲಣಗಳು ದೇಶದಲ್ಲಿ ಬೆಲೆ ಏರಿಕೆಯ ಅನಿವಾರ್ಯ ವಾತಾವರಣವನ್ನು ಸೃಷ್ಟಿ ಮಾಡಿದೆ.

ಇದನ್ನೂ ಓದಿ : ಪ್ರಯಾಣ ಸಂಕಷ್ಟ: ಅಫ್ಘಾನ್ ಏಕದಿನ ಸರಣಿ ಲಂಕಾದಿಂದ ಪಾಕಿಸ್ಥಾನಕ್ಕೆ ಶಿಫ್ಟ್

Advertisement

Udayavani is now on Telegram. Click here to join our channel and stay updated with the latest news.

Next