Advertisement

ಅವನತಿ ಅಂಚಿನಲ್ಲಿ ಒಣ ಮೀನು ಉದ್ಯಮ

06:25 AM May 19, 2018 | Team Udayavani |

ಕುಂದಾಪುರ: ಒಂದು ಕಾಲದಲ್ಲಿ ಕರಾವಳಿ ಭಾಗದ ಬಹಳ ಪ್ರಸಿದ್ಧವಾಗಿದ್ದ ಒಣಮೀನು ಉದ್ಯಮ ಈಗ ಅವನತಿ ಅಂಚಿನಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ವಾರ್ಷಿಕವಾಗಿ 1.50 ಲಕ್ಷ ಮೆಟ್ರಿಕ್‌ ಟನ್‌ ಮೀನು ಸಿಗುತ್ತಿದ್ದರೂ ಕೇವಲ ಶೇ. 10 ಪ್ರತಿಶತದಷ್ಟು ಮಾತ್ರ ಒಣಮೀನು ಉತ್ಪಾದನೆಯಾಗುತ್ತಿದೆ. ಒಣಮೀನು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕುಂದಾಪುರ, ಗಂಗೊಳ್ಳಿಯ ನೂರಾರು ಮಂದಿ ಮೀನುಗಾರು ಈಗ ಪರ್ಯಾಯವಾಗಿ ಬೇರೆ ಉದ್ಯಮದ ಕಡೆಗೆ ಮುಖಮಾಡಿದ್ದಾರೆ. 

Advertisement

ಜಿಲ್ಲೆಯ ಎರಡನೇ ಪ್ರಮುಖ ಮೀನುಗಾರಿಕಾ ನೆಲೆಯಾಗಿರುವ ಗಂಗೊಳ್ಳಿಯಲ್ಲಿ ಹಿಂದೆ ಮಾರಾಟವಾಗಿ ಉಳಿದ ಮೀನುಗಳನ್ನು ಉಪ್ಪು ಹಾಕಿ ಒಣಗಿಸುತ್ತಿದ್ದರು.  ಇದನ್ನು ಹೊರೆಯಲ್ಲಿ ಅಥವಾ ದೋಣಿಗಳಲ್ಲಿ ಹಳ್ಳಿ ಹಳ್ಳಿಗೆ ಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಆದರೆ ಈಗ ಹಸಿಮೀನಿನ ದರ ಗಗನಕ್ಕೇರಿದೆ. ಹಾಗಾಗಿ ಹಸಿ ಮೀನನ್ನು ಒಣಗಿಸುವತ್ತ ಮೀನುಗಾರರು ಆಸಕ್ತಿ ಬೆಳೆಸುತ್ತಿಲ್ಲ. 

ಗಂಗೊಳ್ಳಿ ಬಂದರು ಪ್ರದೇಶದಲ್ಲಿ ಸುಮಾರು 20-25 ವರ್ಷಗಳ ಹಿಂದೆ ಸುಮಾರು 80 ಕ್ಕೂ ಮಿಕ್ಕಿ ಒಣ ಮೀನು ವ್ಯವಹಾರ ನಡೆಸುವ ಮೀನುಗಾರರ ಶೆಡ್‌ಗಳಿದ್ದರೆ ಈಗ ಅದರ ಸಂಖ್ಯೆ ಕೇವಲ 10 ಮಾತ್ರವಿದೆ. ಕಳೆದ 10 ವರ್ಷಗಳಲ್ಲಿ ಒಣಮೀನು ಸಾಗಾಟವೂ ಗಣನೀಯವಾಗಿ ಕುಸಿದಿದೆ.

ಬೇಡಿಕೆ ಕಡಿಮೆಯಾಗಲು ಕಾರಣಗಳೇನು?
-  ಮತ್ಸÂಕ್ಷಾಮ
-  ಹೆಚ್ಚುತ್ತಿರುವ ಮೀನು ಸಂಸ್ಕರಣಾ ಘಟಕ, ಐಸ್‌ಪ್ಲಾಂಟ್‌, ಕೋಲ್ಡ್‌ ಸ್ಟೋರೆಜ್‌
-  ಹಸಿಮೀನಿಗೆ ಹೋಲಿಸಿದರೆ ಆರ್ಥಿಕವಾಗಿ ಲಾಭದಾಯಕವಾಗಿಲ್ಲ 
-  ಹಸಿ ಮೀನುಗಳಲ್ಲಿ ಉಳಿದವುಗಳು ಫಿಶ್‌ಮಿಲ್‌ಗೆ ಬಳಕೆ
-  ಉತ್ತಮ ಸಾಗಾಟ ವ್ಯವಸ್ಥೆ, ಇದರಿಂದ ಹಸಿಮೀನು ಉಳಿಯುತ್ತಿಲ್ಲ   
-  ಹಿಂದೆ ಸರ್ವಋತು ಮೀನು ಸಿಗುತ್ತಿರಲಿಲ್ಲ. ಈಗ ಮಳೆಗಾಲದಲ್ಲೂ ಹಸಿ ಮೀನು ಶೇಖರಣೆಯಾಗುತ್ತಿದೆ.

ವಾರ್ಷಿಕ 1,500 ಕೋ.ರೂ. ಆದಾಯ
ಉಡುಪಿ ಜಿಲ್ಲೆಯಲ್ಲಿ ಒಟ್ಟು 78 ಸಾವಿರ ಮಂದಿ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಮಲ್ಪೆ, ಗಂಗೊಳ್ಳಿ, ಹೆಜಮಾಡಿ ಪ್ರಮುಖ ಬಂದರುಗಳು. ಮರವಂತೆ, ಕೋಡಿ-ಬೇಂಗ್ರೆ, ಶಿರೂರು, ನಾವುಂದ ನಾಡದೋಣಿ ಬಂದರುಗಳಿವೆ. ಒಟ್ಟು 1.50 ಲಕ್ಷ ಮೆಟ್ರಿಕ್‌ ಟನ್‌ ಹಸಿ ಮೀನು ಉತ್ಪಾದನೆಯಾಗುತ್ತಿದ್ದು, ವಾರ್ಷಿಕ 1,500 ಕೋ.ರೂ. ಆದಾಯ ಬರುತ್ತಿದೆ.

Advertisement

ಪ್ರತ್ಯೇಕ ಯೋಜನೆಗಳು ಇಲ್ಲ
ಒಣಮೀನು ಉದ್ಯಮಕ್ಕೆ ಉತ್ತೇಜನ ನೀಡಲು ಸರಕಾರ ಪ್ರತ್ಯೇಕ ಯೋಜನೆಗಳೇನು ಹಾಕಿಕೊಂಡಿಲ್ಲ. ಆದರೆ ಮೀನುಗಾರರಿಗೆ 50 ಸಾವಿರ ಸಾಲ, ಶೇ. 2-3 ಬಡ್ಡಿದರದಲ್ಲಿ ಸಾಲ ಯೋಜನೆಗಳೆಲ್ಲ ಇವೆ. ಸಂಚಾರ ವ್ಯವಸ್ಥೆಯು ಸುಧಾರಣೆ ಕಂಡಿದೆ. ಬಂದರಿನಿಂದ ನೇರವಾಗಿ ಹೊರರಾಜ್ಯಗಳಿಗೆ ಮೀನು ಸಾಗಾಟ ನಡೆಯುತ್ತದೆ. ಮತ್ತೆ ಈ ಒಣ ಮೀನು ಅಷ್ಟೊಂದು ಲಾಭದಾಯಕವಲ್ಲದ ಉದ್ಯಮ.
– ಪಾರ್ಶ್ವನಾಥ,
ಜಿಲ್ಲಾ ಉಪ ನಿರ್ದೇಶಕ, ಮೀನುಗಾರಿಕಾ ಇಲಾಖೆ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next