Advertisement
ಹೆಲ್ಪ್ ಲೈನ್ ದುರ್ಬಳಕೆ: ತುರ್ತುಸೇವೆ ಒದಗಿಸುವ ಹೆಲ್ಪ್ ಲೈನ್‌ಗಳನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅನಗತ್ಯವಾಗಿ ಕರೆ ಮಾಡಿ ಬಾರ್ ಯಾವಾಗ ಓಪನ್ ಮಾಡಿಸುತ್ತೀರಾ? ನನಗೆ ಈಗ ಡ್ರಿಂಕ್ಸ್ ಬೇಕು ಎಂದು ಕರೆ ಮಾಡಿ ಹೇಳುವವರ ಸಂಖ್ಯೆ ಹೆಚ್ಚಾಗುತ್ತಿವೆ. ಊಟದ ಬಳಿಕ ಬಾಳೆಹಣ್ಣುತಿನ್ನಬೇಕು. ಹೀಗಾಗಿ ಬಾಳೆಹಣ್ಣು ತೆಗೆದುಕೊಂಡು ಬರುವಿರಾ? ಹೀಗೆ ಅನಗತ್ಯವಲ್ಲದ ಸೇವೆಗಾಗಿ ಕರೆ ಮಾಡಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಸಿಬ್ಬಂದಿ
ವಿವರಿಸಿದರು.
ಲಾಕ್ ಡೌನ್ ನಿಂದ ಆಗುತ್ತಿರುವ ತೊಂದರೆಗಳು ಕುರಿತು ದೂರುಗಳು ಬರುತ್ತಿವೆ. ಸಾಮಾನ್ಯ ದಿನ ಗಳಲ್ಲಿ ಕಾನೂನು ಸುವ್ಯವಸ್ಥೆ, ರಸ್ತೆ ಅಪಘಾತ ಸೇರಿದಂತೆ
ಅಪರಾಧ ಕುರಿತಂತೆ ಕರೆ ಮಾಡುತ್ತಿದ್ದರು. ಇದೀಗ ಸಾರ್ವಜನಿಕರು ಕೊರೊನಾದಿಂದಾಗಿ ಆಗಿರುವ ಸಮಸ್ಯೆಗಳ ಬಗ್ಗೆ ಕರೆ ಮಾಡಿ ದೂರು ನೀಡುತ್ತಿದ್ದಾರೆ.
ಕೊರೊನಾ ಸಂಬಂಧಿತ ಕರೆಗಳ ಜತೆ ಅಪರಾಧಕ್ಕೂ ಸಂಬಂಧಿಸಿದ ಕರೆಗಳು ಬರುತ್ತಿದ್ದು, ದಿನಕ್ಕೆ ಸುಮಾರು 4 ಸಾವಿರ ಕರೆಗಳು ಬರುತ್ತಿವೆ..ಕಳೆದ ತಿಂಗಳು
ಮಾರ್ಚ್ 24ರಿಂದ ಏ.15 ರವರೆಗೆ 1,03,986 ಕರೆಗಳು ಬಂದಿವೆ. ಈ ಪೈಕಿ 22,007 ಕರೆಗಳಿಗೆ ಸ್ಪಂದಿಸಲಾಗಿದೆ. ಇನ್ನೂ ಸೈಬರ್ ಕ್ರೈಂ ಅಪರಾಧ, ಹಿರಿಯ ನಾಗರಿಕರಿಗೆ ಶೋಷಣೆ, ಪೆಂಕ್ಷನ್ ತೊಂದರೆ ಸೇರಿದಂತೆ ಹೀಗೆ ಎಲ್ಲಾ ರೀತಿಯ ಕರೆಗಳು ಬರಲಿವೆ. ತ್ವರಿತವಾಗಿ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ನೀಡಿ ಸ್ಥಳಕ್ಕೆ ಹೋಗಿ ಸಮಸ್ಯೆ ಪರಿಹರಿಸಲು ನಮ್ಮ ತಂಡ ಪ್ರಯತ್ನಿಸುತ್ತಿದೆ ಎಂದು ನಗರ ಕಂಟ್ರೋಲ್ ರೂಮ್
ವಿಭಾಗದ ಡಿಸಿಪಿ ಇಶಾಪಂಥ್ ಮಾಹಿತಿ ನೀಡಿದರು.
Related Articles
ಲಾಕ್ ಡೌನ್ ಘೋಷಣೆಯಿಂದ ಹಿರಿಯ ನಾಗರಿಕರು ಆಸ್ಪತ್ರೆಗೆ ಹೋಗಲಾರದಂತಹ ಪರಿಸ್ಥಿತಿ ಕಂಡು ಆಯುಕ್ತರಾದ ಭಾಸ್ಕರ್ ರಾವ್ ಅವರು ಏ.4 ರಿಂದ ಹಿರಿಯ ನಾಗರಿಕರು ತುರ್ತು ವೈದ್ಯಕೀಯ ಸೇವೆ ಹೊಯ್ಸಳ ಸೇವೆ ಪ್ರಾರಂಭಿಸಿದ್ದರು. ಇದರಂತೆ ಈವರೆಗೂ 714 ಮಂದಿ ಪೊಲೀಸ್ ಸೇವೆ ಪಡೆದಿದ್ದಾರೆ.
Advertisement