Advertisement
ನಾಟಿ ಮಾಡಿದ 90 ದಿನಗಳ ಅನಂತರ ಎಕ್ರೆಗೆ 5 ಕೆ.ಜಿ. ಸಾರಜನಕ, 25 ಕೆ.ಜಿ. ರಂಜಕ, 6 ಕೆ.ಜಿ. ಪೊಟ್ಯಾಷ್ ರಸಗೊಬ್ಬರ ಮತ್ತು 10 ಟನ್ ಕೊಟ್ಟಿಗೆ ಗೊಬ್ಬರವನ್ನು ಒದಗಿಸಬೇಕು. ಇದೇ ಪ್ರಮಾಣದ ಗೊಬ್ಬರವನ್ನು ಮತ್ತೆ 90 ದಿನಗಳ ಅನಂತರ ಒದಗಿಸಬೇಕು. ನೆಟ್ಟ 8ನೇ ತಿಂಗಳಿನಿಂದ ಈ ಗಿಡ್ಡ ತಳಿಗಳು, ಹೂ ಮತ್ತು ಕಾಯಿಗಳನ್ನು ಬಿಡಲು ಆರಂಭಿಸುತ್ತವೆ. ಈ ತಳಿಗಳಲ್ಲಿ ಎರಡು ವರ್ಷಗಳ ಅನಂತರ ಪ್ರತಿ ಗಿಡದಿಂದ 200-250 ಕಾಯಿಗಳು ದೊರೆಯುತ್ತವೆ. ನುಗ್ಗೆ ಸೊಪ್ಪನ್ನು ತರಕಾರಿಯಾಗಿ ಹಾಗೂ ಔಷಧಿಗಾಗಿಯೂ ಬಳಸುವುದರಿಂದ ಅವುಗಳಿಗೂ ತುಂಬಾ ಬೇಡಿಕೆ ಇದೆ. Advertisement
ಎಲ್ಲ ಬಗೆಯ ಮಣ್ಣಲ್ಲೂ ಬೆಳೆಯುವ ನುಗ್ಗೆ
10:31 PM Feb 15, 2020 | mahesh |