Advertisement
ಸ್ವದೇಶಿ ಮೂಲನುಗ್ಗೆ ಅಧಿಕ ಕಬ್ಬಿಣಂಶ ಭರಿತ ಸ್ವದೇಶಿ ಮೂಲದ ಹಸುರು ತರಕಾರಿ. ಭಾರತದ ವಾಯವ್ಯ ಪ್ರದೇಶ ಇದರ ತವರು. ದಕ್ಷಿಣ ಭಾರತದ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಕಾಯಿ ಮಾತ್ರವಲ್ಲದೆ ಹೂವು, ಸೊಪ್ಪು ಸಹ ರುಚಿಕರ ತರಕಾರಿ. ಇದರ ಬೀಜಗಳಿಂದ ಎಣ್ಣೆ ತೆಗೆಯಲಾಗುತ್ತಿದ್ದು, “ಬೆನ್ ಆಯಿಲ್’ ಎಂದು ಹೆಸರು. ಎಣ್ಣೆ ತೆಗೆದ ಬಳಿಕ ಉಳಿಯುವ ಹಿಂಡಿಯನ್ನು ದನಗಳಿಗೆ ಅಹಾರವಾಗಿ ಬಳಸುತ್ತಾರೆ. ನುಗ್ಗೆ ಮರದ ತೊಗಟೆಯಿಂದ ನಾರು ಉತ್ಪಾದನೆಕೂಡ ಮಾಡಲಾಗುತ್ತದೆ.
Related Articles
Advertisement
ನುಗ್ಗೆಯ ಬೇಸಾಯಕ್ಕೆ ಇಂತಹುದೇ ಮಣ್ಣಿನ ಭೂಮಿ ಇರಬೇಕು ಎಂಬ ನಿಯಮವಿಲ್ಲ. ಮರಳು ಮಿಶ್ರಿತ ಗೋಡು ಮಣ್ಣು ಅತ್ಯುತ್ತಮ. ಜಿಗುಟುಕಪ್ಪು ಮಣ್ಣು ಸೂಕ್ತವಲ್ಲ. ನೀರು ಬಸಿಯುವುದು ಬಹುಮುಖ್ಯ. ಮಣ್ಣಿನಲ್ಲಿ ಸ್ವಲ್ಪ ಸುಣ್ಣ ಇದ್ದರೂ ಗಿಡಗಳು ತಡೆದುಕೊಳ್ಳಬಲ್ಲವು. ಇತ್ತೀಚೆಗೆ ನುಗ್ಗೆಯಲ್ಲೂ ಸಂಸ್ಕರಿಸಲ್ಪಟ್ಟ ಉತ್ತಮ ತಳಿಗಳನ್ನು ಸಂಶೋಧಿಸಲಾಗಿದ್ದು, ಇದುಕೂಡ ವಾಣಿಜ್ಯ ಬೆಳೆಯ ಸ್ಥಾನ ಪಡೆದುಕೊಂಡಿದೆ.
ಕಡಿಮೆ ಕೂಲಿನುಗ್ಗೆ ಬೆಳೆಯಲು ಹೆಚ್ಚುಕೂಲಿ ಕಾರ್ಮಿಕರು ಬೇಕಾಗಿಲ್ಲ. ಒಮ್ಮೆ ಸಸಿ ನೆಟ್ಟು,ಕೊಟ್ಟಿಗೆ ಗೊಬ್ಬರ ಹಾಕಿ, ಡ್ರಿಪ್‌ನಲ್ಲಿ ನೀರು ಹರಿಸಿದರೆ ಸಾಕು. ಉತ್ತಮ ಆರೈಕೆ ಮಾಡಿದರೆ ಕೇವಲ 4 ತಿಂಗಳಿಗೆ ಬೆಳೆ ಬರುತ್ತದೆ. ಮಾವು, ಸಪೋಟ, ಕಿತ್ತಳೆ ಮುಂತಾದ ಬೆಳೆಗಳಲ್ಲಿ ಫಸಲು ದೃಢಗೊಳ್ಳುವ ತನಕ ಅಂದರೆ ಮೊದಲ 3-4 ವರ್ಷಗಳವರೆಗೆ ಇದನ್ನು ಮಿಶ್ರ ಕೃಷಿಯಾಗಿ ಬೆಳೆಯಬಹುದು. ನುಗ್ಗೆ ಕೃಷಿ
2ರಿಂದ2.5 ಮೀಟರ್ ಅಂತರದಲ್ಲಿ30 ಘನ ಸೆಂ.ಮೀ. ಗಾತ್ರದ ಗುಂಡಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು. ಗುಂಡಿಗಳನ್ನು ತೋಡಲು ಮೇ-ಜೂನ್ ಸೂಕ್ತಕಾಲ. ಅನಂತರ ಗುಂಡಿಗಳಿಗೆ ತಿಪ್ಪೆ ಗೊಬ್ಬರ ಮತ್ತು ಮೇಲ್ಮಣ್ಣನ್ನು ತುಂಬಿ ನೀರುಕೊಟ್ಟರೆ ಆ ಮಿಶ್ರಣ ಚೆನ್ನಾಗಿ ಕುಳಿತುಕೊಳ್ಳುತ್ತದೆ. ಒಂದೆರಡು ಮಳೆಗಳಾದ ಅನಂತರ ತಲಾ ಒಂದರಂತೆ ಸಸಿಗಳನ್ನು ನೆಟ್ಟು, ಆಸರೆ ಕೋಲು ಸಿಕ್ಕಿಸಿ ಕಟ್ಟಬೇಕು. ಸಸಿಗಳು ಸುಮಾರು ಒಂದು ಮೀಟರ್‌ನಷ್ಟು ಎತ್ತರಕ್ಕೆ ಬೆಳೆದಾಗ ಅವುಗಳ ತಿರಿ (ತುದಿ)ಯನ್ನು ಚಿವುಟಿ ಹಾಕಿದರೆ ಸುತ್ತ ಹರಡಿ ಬೆಳೆಯುತ್ತವೆ. ಆಗ ಅದರ ನೆತ್ತಿ ಬಿಚ್ಚಿ ಹರಡಿದ ಛತ್ರಿಯಂತೆ ಕಾಣುವುದು. ಅದರಿಂದ ಹೆಚ್ಚಿನ ಪ್ರಮಾಣದಲ್ಲಿ ಹೂವು ಬಿಟ್ಟು ಅಧಿಕ ಫಸಲು ಸಾಧ್ಯ. ಗೊಬ್ಬರ
ನುಗ್ಗೆ ಗಿಡಗಳಿಗೆ ಗೊಬ್ಬರಕೊಡುವ ರೂಢಿ ಇಲ್ಲ. ಪ್ರತಿ ವರ್ಷ ಗಿಡವೊಂದಕ್ಕೆ 10ರಿಂದ20ಕಿ.ಗ್ರಾಂ ತಿಪ್ಪೆ ಗೊಬ್ಬರ ಕೊಡುವುದು ಲಾಭದಾಯಕ. ಅದರ ಜತೆಗೆ ಸೂಕ್ತ ಪ್ರಮಾಣದ ರಾಸಾಯನಿಕ ಗೊಬ್ಬರಗಳನು ಸಹ ಕೊಡಬಹುದು. ತಮಿಳುನಾಡುಕೃಷಿ ವಿಶ್ವವಿದ್ಯಾಲಯದ ಕೊಯಮತ್ತೂರು ಕೇಂದ್ರವು ಪ್ರತಿ ಗಿಡಕ್ಕೆ ವರ್ಷಕ್ಕೆ7.5ಕಿ.ಗ್ರಾಂ ತಿಪ್ಪೆ ಗೊಬ್ಬರ ಮತ್ತು370 ಗ್ರಾಂ ಅಮೋನಿಯಂ ಸಲ್ಫೆಟ್‌ನ್ನು ಡಿಸೆಂಬರ್‌ನಲ್ಲಿ ಕೊಟ್ಟಾಗ ಅಧಿಕ ಇಳುವರಿ ಸಾಧ್ಯವಾಗಿದ್ದಾಗಿ ವರದಿ ಮಾಡಿದೆ. ಮಳೆ ಇಲ್ಲದಿದ್ದಾಗ 10-15 ದಿನಗಳಿಗೊಮ್ಮೆ ನೀರು ಕೊಡಬೇಕು. ಗಿಡ ಚೆನ್ನಾಗಿ ಬೆಳೆದ ಅನಂತರ ಅಷ್ಟೇನೂ ನೀರು ಬೇಕಾಗಿಲ್ಲ. ಕೊಯ್ಲು
ವಾರ್ಷಿಕ ನುಗ್ಗೆ ತಳಿಗಳಲ್ಲಿ ನೆಟ್ಟ ಆರೇಳು ತಿಂಗಳಲ್ಲಿ ಹೂ ಬಿಟ್ಟುಕಾಯಿಕಚ್ಚಲು ಪ್ರಾರಂಭಿಸುತ್ತವೆ. ವರ್ಷವಿಡೀ ಹೂವು – ಕಾಯಿ ಇರುತ್ತವೆಯಾದರೂ ಹೆಚ್ಚಿನ ಪ್ರಮಾಣದಲ್ಲಿಕಾಯಿ ಸಿಗುವುದು ಮಾರ್ಚ್-ಮೇಯಲ್ಲಿ.