ಬೆಂಗಳೂರಿನಲ್ಲಿ ಡ್ರಮ್ ಫೆಸ್ಟಿವಲ್ ಆಯೋಜನೆಗೊಂಡಿದೆ. ಡ್ರಮ್ ಒಂದು ವಿದೇಶಿ ವಾದ್ಯ. ಹಾಗಾಗಿ, ನಮ್ಮ ಸಂಗೀತ ಪ್ರಕಾರಗಳಿಂದ ದೂರವೇ ಅಂತ ಅನಿಸಿದರೂ, ಅದರದೇ ಆದ ಮೆಲೋಡಿ, ಶಾಸ್ತ್ರೀಯತೆ ಇದೆ. ಈ ಎಲ್ಲವೂ ಸೇರಿದಾಗಲೇ ಡ್ರಮ್ಸ್‌ನ ನಾದ ಕಿವಿಗೆ ಇಂಪು ಅನಿಸೋದು.
ಡ್ರಮ್ಸ್‌ನ ಸಂಸ್ಕೃತಿ ಎಲ್ಲೆಡೆ ಹರಡಬೇಕು, ನಮ್ಮ ಶಾಸ್ತ್ರೀಯ ಸಂಗೀತದ ಹೆಗಲ ಮೇಲೆ ಕೈ ಹಾಕಿ ನಡೆಯುವಂತಾಗಬೇಕು ಅಂತಲೇ ಎನ್.ಆರ್. ಕಾಲೋನಿಯಲ್ಲಿ ಹಿರಿಯ ಡ್ರಮರ್ ಸುಕುಮಾರ್ ಬಾಬು ಸ್ಕೂಲ್ ಆಫ್ ರಿದಮ್ಸ್ ಶುರುಮಾಡಿದರು. ಮುಂದುವರಿದ ಭಾಗವಾಗಿ ಅವರ ಮಗ ಅರುಣ್ ಕಳೆದ ಎರಡು ವರ್ಷಗಳಿಂದ ಡ್ರಮ್ಸ್ ಮೇಳ ಆರಂಭಿಸಿದ್ದಾರೆ. ಜಗತ್ತಿನ ನಾನಾ ಭಾಗಗಳಿಂದ ಕಲಾವಿದರು ಡ್ರಮ್ಸ್ ವಿಶ್ವರೂಪ ದರ್ಶನ ಮಾಡಿಸಲಿದ್ದಾರೆ.
ಅರುಣ್ ಜತೆಗೆ ರಂಜಿತ್ ಬರೋಟ್, ಗಿನೊ ಬ್ಯಾಂಕ್ಸ್, ಜೈರೊ ಕವಿ, ಜಿಯೋರಾಜ್ ಸ್ಟಾನ್ಲಿ ಭಾಗವಹಿಸಲಿದ್ದಾರೆ. ಈ ಬಾರಿಯ ಫೆಸ್ಟ್‌ನಲ್ಲಿ ದರ್ಶನ್ ದೋಶಿ, ಮೊಹಮ್ಮದ್ ನೂರ್, ವಿಲ್ಲಿ ಡೆಮೊಜ್ ಮತ್ತು ಗ್ರೆಗ್ ಎಲ್ಲಿಸ್, ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಲಿದ್ದಾರೆ. ಬಾಬು ಸ್ಕೂಲ್ ಆಫ್ ರಿದಮ್ಸ್, ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ ಜಂಟಿಯಾಗಿ ಈ ಉತ್ಸವವನ್ನು ಆಯೋಜಿಸಿವೆ.
ಎಲ್ಲಿ?: ಚೌಡಯ್ಯ ಮೆಮೋರಿಯಲ್ ಹಾಲ್
ಯಾವಾಗ?: ಫೆ.7, ಶುಕ್ರವಾರ ಸಂಜೆ 7