Advertisement

ಹೈಫೈ ಡ್ರಗ್ಸ್ ಜಾಲ…ಸ್ಯಾಂಡಲ್ ವುಡ್ ನಟ ಜಗ್ಗೇಶ್ ಸರಣಿ ಟ್ವೀಟ್ ಮೂಲಕ ಹೇಳಿದ್ದೇನು?

06:10 PM Aug 29, 2020 | Nagendra Trasi |

ಬೆಂಗಳೂರು: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಡ್ರಗ್ಸ್ ಜಾಲ ತಳಕು ಹಾಕಿಕೊಂಡ ಬೆನ್ನಲ್ಲೇ ಸ್ಯಾಂಡಲ್ ವುಡ್ ನಲ್ಲಿಯೂ ಬಿಸಿ, ಬಿಸಿ ಚರ್ಚೆ ನಡೆಯತೊಡಗಿದೆ. ಏತನ್ಮಧ್ಯೆ ನವರಸ ನಾಯಕ ಜಗ್ಗೇಶ್ ಕೂಡಾ ಈ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ರಾಜ್ಯ ರಾಜಧಾನಿಯಲ್ಲಿನ ಡ್ರಗ್ಸ್ ಕರಾಳ ಮುಖದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅಲ್ಲದೇ ತಪ್ಪು ಮಾಡಿದವರನ್ನು ಬೆತ್ತಲೆ ಮಾಡಿ, ಆಗಲಾದರೂ ಜನಕ್ಕೆ ಅರಿವಾಗಲಿ ಎಂದು ತಿಳಿಸಿದ್ದಾರೆ.

Advertisement

“2017ರಲ್ಲಿ ಬಲವಂತದಿಂದ ಒಬ್ಬ (?) ರಾಜಕಾರಣಿ ಪಾರ್ಟಿಗೆ ಹೋಗಿದ್ದೆ. ಅರ್ಧಗಂಟೆಗೆ ಆ ಜಾಗ ಅಲ್ಲಿದ್ದವರ ಆರ್ಭಟ, ಬಂದು ಸೇರಿದ ಅರ್ಧ ಉಡುಗೆ ಸುಂದರಿಯರು! ಅದನ್ನು ಕಂಡು ನಾನು ನನ್ನ ಆತ್ಮೀಯ ಯುವನಟಗೆ…! ಹೇಳದೆ ಕೇಳದೆ ಲಿಫ್ಟು ಬಳಸದೆ 12 ಮಹಡಿ ಇಳಿದು ಓಡಿದೆವು. ಅದೆ ಕಡೆ ಇಂದಿಗೂ ನನಗೆ ಯಾರು ಕರೆ ಮಾಡದಂತೆ ಮೊಬೈಲ್ ವರ್ಜಿಸಿದೆ! ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು…ಎಂದು ಜಗ್ಗೇಶ್ ಟ್ವೀಟ್ ಆಕ್ರೋಶ ಹೊರಹಾಕಿದ್ದಾರೆ.

ಇನ್ನೊಂದು ಟ್ವೀಟ್ ನಲ್ಲಿ, ಸರಿಯಾಗಿ ಬಾಳಿ ಬದುಕುವ ನಿರ್ಧಾರ ಮಾಡಿ ಶ್ರಮಿಸುವರು ಎಲ್ಲೆ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ! ನಾನು ನನ್ನಿಷ್ಠ. ನನ್ನ ಬದುಕು ಎನ್ನುವರು ಮಠಕ್ಕೆ ಸೇರಿಸಿದರು. ನಶೆ ಹಾದರದ ಬಿಸಿ ಹೆಂಚಿನ ಮೇಲೆ ಸ್ವಲ್ಪಕಾಲ ಬದುಕಿ ವಿಕೃಯ ಆನಂದ ಅನುಭವಿಸಿ ಸೀದುಹೋಗುತ್ತಾರೆ! ಏಕ್ ಮಾರ್ ದೋ ತುಕಡಾ…ತಪ್ಪು ಮಾಡಿದವರ ಬೆತ್ತಲೆ ಮಾಡಿ! ಆಗಲಾದರು ಜನಕ್ಕೆ ಅರಿವಾಗಲಿ! ಎಂದು ಹೇಳಿದ್ದಾರೆ.

Advertisement

“ನಾನು ಈ ಕಾಲಘಟ್ಟದ ವೇಸ್ಟ್ ಬಾಡಿ! ಕಾರಣ ನನ್ನ ಯೋಗ್ಯತೆ ರಾಗಿಮುದ್ದೆ ಬಸ್ಸಾರು ಗಿರಾಕಿ ಎಂದು! ಹಣ ಇಟ್ಕೊಂಡು ಏನ್ಮಾಡ್ತೀರ? ಸತ್ತ ಮೇಲೆ ಯಾವುದು ಬರಲ್ಲಾ ಎಂಜಾಯ್ ಮಾಡಿ ಬಾಸ್! ಅನ್ನುತ್ತಾರೆ ಪರವಾಗಿಲ್ಲಾ ನನ್ನ ನಲ್ಮೆಯ ಶ್ರೀಕೃಷ್ಣನ ಗೀತೆಯಂತೆ ರಾಯರ ಆದರ್ಶದಂತೆ ಬದುಕಿ ಸಾಯುವೆ! ಸತ್ತರು ಹಣ ಅಧಿಕಾರ ಹಾದರದ ಹಿಂದೆ ಹೋಗೆನು! ನನಗೆ ಬಣ್ಣದ ಬದುಕೆ ಸ್ವರ್ಗ ಎಂದು ಜಗ್ಗೇಶ್ ಸರಣಿ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next