Advertisement

ಡ್ರಗ್ಸ್: ದೇಹದಿಂದ ಮಾತ್ರವಲ್ಲ, ದೇಶದಿಂದಲೇ ದೂರ ಇಡಲು ಜಾಗೃತಿ ಅಗತ್ಯ: ಕಟೀಲ್

03:21 PM Sep 01, 2020 | sudhir |

ಬೆಂಗಳೂರು : ಡ್ರಗ್ಸ್ ಎನ್ನುವುದು ಕೇವಲ ದೇಹವನ್ನು ಮಾತ್ರವಲ್ಲ ದೇಶವನ್ನು ಕೂಡ ದುರ್ಬಲ ಮಾಡುತ್ತದೆ ಹಾಗಾಗಿ ಯಾವುದೇ ರೀತಿಯ ಡ್ರಗ್ಸ್ ದೇಹದಿಂದ ಮಾತ್ರವಲ್ಲ ದೇಶದಿಂದಲೂ ಎಷ್ಟು ದೂರ ಇಡಲು ಸಾಧ್ಯವೋ ಅಷ್ಟು ದೂರ ಇಡಲು ನಮ್ಮ ಪಕ್ಷದ ಕಾರ್ಯಕರ್ತರು ಯುವಜನಾಂಗದಲ್ಲಿ ಜಾಗೃತಿ ಮೂಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

Advertisement

ಕಳೆದ ಕೆಲವು ದಿನಗಳಿಂದ ಡ್ರಗ್ ಮಾಫಿಯಾದ ಬಗ್ಗೆ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿದ ಕಟೀಲ್ ಡ್ರಗ್ಸ್ ಜಾಲವನ್ನು ಬುಡಸಮೇತ ಕಿತ್ತು ಹಾಕಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಕ್ತಿಮೀರಿ ಕೆಲಸ ಮಾಡುತ್ತಿವೆ. ನಮ್ಮ ಗೃಹಸಚಿವರು ಪೊಲೀಸ್ ಇಲಾಖೆಗೆ ಡ್ರಗ್ಸ್ ಜಾಲ ಮಟ್ಟ ಹಾಕಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಜಾಲವನ್ನು ಬೇರು ಸಮೇತ ಕಿತ್ತು ಹಾಕಲು ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next