ಬೆಂಗಳೂರು: ನಿಮ್ಮ ಆಧಾರ್ ಕಾರ್ಡ್ ಹೆಸರಿನಲ್ಲಿ ಮುಂಬೈನಿಂದ ತೈವಾನ್ ದೇಶಕ್ಕೆ ಡ್ರಗ್ಸ್ ಪೂರೈಕೆಯಾಗುತ್ತಿದೆ ಎಂದು ಬೆದರಿಸಿದ ಸೈಬರ್ ವಂಚಕರು ವ್ಯಕ್ತಿಯೊಬ್ಬರಿಗೆ 19.99 ಲಕ್ಷ ರೂ. ವಂಚಿಸಿದ್ದಾರೆ.
ಒಎಂಬಿಆರ್ ನಿವಾಸಿ ರಾಜಶೇಖರ ರೆಡ್ಡಿ (43)ವಂಚನೆಗೊಳಗಾದವರು.
ರಾಜ ಶೇಖರ ರೆಡ್ಡಿ ಅವರಿಗೆ ಇತ್ತೀಚೆಗೆ ಅಪರಿಚಿತರು ಕರೆ ಮಾಡಿ ಫೆಡೆಕ್ಸ್ ಕೊರಿ ಯರ್‌ನಿಂದ ಮಾತ ನಾಡುವುದಾಗಿ ನಂಬಿಸಿದ್ದರು. ಮೊದಲಿಗೆ ರಾಜಶೇಖರ ರೆಡ್ಡಿ ಅವರ ಆಧಾರ್, ಮೊಬೈಲ್ ನಂಬರ್ ಹೇಳಿದ್ದರು. ನಿಮ್ಮ ಹೆಸರಿನಲ್ಲಿ ಮುಂಬೈನಿಂದ ತೈವಾನ್ ದೇಶಕ್ಕೆ ಎಂಡಿಎಂಎ ಡ್ರಗ್ಸ್ ಪೂರೈಕೆಯಾಗುತ್ತಿದೆ. ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ. ಮುಂಬೈನ ನಾರ್ಕೋ ಟಿಕ್ ವಿಭಾಗಕ್ಕೆ ಪ್ರಕರಣ ವರ್ಗಾ ವಣೆ ಮಾಡುವುದಾಗಿ ಹೇಳಿದ್ದರು. ಮುಂಬೈ ಕ್ರೈಂ ಬ್ರ್ಯಾಂಚ್‌ನ ಡಿಸಿಪಿ ಮಾತನಾಡುತ್ತಿರುವುದಾಗಿ ಹೇಳಿ ಸ್ಕೈಪ್ ಡೌನ್ ಲೋಡ್ ಮಾಡಲು ತಿಳಿಸಿದ್ದರು.
ಸ್ಕೈಪ್‌ನಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿ ನಿಮ್ಮ ಹೆಸರಿನಲ್ಲಿ ಅಕ್ರಮವಾಗಿ ಮನಿ ಲ್ಯಾಂಡರಿಂಗ್ ನಡೆಯುತ್ತಿದೆ. ನಿಮ್ಮ ಬ್ಯಾಂಕ್ ಖಾತೆ ಸೇಫ್ಗಾರ್ಡ್ ಮಾಡಬೇಕಿರುವುದರಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲ ಹಣ ವನ್ನೂ ಆರ್‌ಬಿಐ ಬ್ಯಾಂಕ್ ಖಾತೆಗೆ ಜಮೆ ಮಾಡ ಬೇಕು ಎಂದು ನಂಬಿಸಿದ್ದರು. ಇದನ್ನು ನಂಬಿದ ರಾಜಶೇಖರ ರೆಡ್ಡಿ ಅಪರಿಚಿತರು ಸೂಚಿಸಿದ ಬ್ಯಾಂಕ್ ಖಾತೆಗೆ ಹಂತ- ಹಂತವಾಗಿ 19.99 ಲಕ್ಷ ರೂ. ಜಮೆ ಮಾಡಿದ್ದರು.
ಇದಾದ ಬಳಿಕ ಆರೋಪಿಗಳು ಸಂಪರ್ಕಕ್ಕೆ ಸಿಗದೇ ಇದ್ದಾಗ ಈ ಬಗ್ಗೆ ರಾಜಶೇಖರ ರೆಡ್ಡಿ ಪರಿಶೀಲನೆ ನಡೆಸಿದ್ದಾರೆ. ಆ ವೇಳೆ ಇದು ಸೈಬರ್ ಕಳ್ಳರ ಕೈ ಚಳಕ ಎಂಬುದು ಗೊತ್ತಾಗಿದೆ.