Advertisement

ಡ್ರಗ್ಸ್‌ ಹಾವಳಿ: ಶಾಲೆ, ಕಾಲೇಜು ಬಳಿ ದೂರುಪೆಟ್ಟಿಗೆ

08:43 AM Oct 15, 2017 | |

ಬಂಟ್ವಾಳ: ಜಿಲ್ಲೆಯಲ್ಲಿ ಗಾಂಜಾ ಮತ್ತಿತರ ಮಾದಕ ದ್ರವ್ಯಗಳತ್ತ ಯುವ ಸಮೂಹ ಆಕರ್ಷಣೆ ಗೊಂಡು ದುಷ್ಕೃತ್ಯ ಮತ್ತು ಸಮಾಜ ಘಾತಕ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಜಾಗೃತಿ ಮೂಡಿಸಲಾಗುತ್ತದೆ. ಇದ ರೊಂದಿಗೆ ಪ್ರತಿ ಶಾಲಾ ಕಾಲೇಜು ಬಳಿ ಮಾದಕ ವಸ್ತು ಮಾರಾಟ ಮಾಡು ತ್ತಿರುವ ವ್ಯಕ್ತಿಗಳ ಬಗ್ಗೆ  ಮಾಹಿತಿ ಪಡೆಯಲು ಶಾಲಾ-ಕಾಲೇಜು ಹಾಸ್ಟೆಲುಗಳಿಗೆ ಅ. 25ರೊಳಗೆ ದೂರು ಪೆಟ್ಟಿಗೆ ಒದಗಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ಅವರು ಹೇಳಿದ್ದಾರೆ.

Advertisement

ಅವರು ಶನಿವಾರ ಸಂಜೆ ಬಿ.ಸಿ. ರೋಡ್‌ನ‌ಲ್ಲಿ ವಿವಿಧ ಶಾಲಾ ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರು ಹಾಗೂ ಮುಖ್ಯ ಶಿಕ್ಷಕರಿಗೆ  “ಮಾದಕ ದ್ರವ್ಯ ಸೇವನೆ ಮತ್ತು  ಷ್ಪರಿಣಾಮಗಳ ಅರಿವು ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

ತಂಡ ರಚನೆ 
ಮಾದಕ ದ್ರವ್ಯ ಮಾರಾಟ ತಡೆಗೆ ಗ್ರಾಹಕರಿಂದಲೇ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಈ ಬಗ್ಗೆ ಪ್ರತ್ಯೇಕ ಪೊಲೀಸ್‌ ಅಧಿಕಾರಿಗಳ ತಂಡ ರಚಿಸ ಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಮತ್ತು ಭವಿಷ್ಯ ರೂಪಿಸುವ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಶಿಕ್ಷಕರು ಮತ್ತು ಉಪನ್ಯಾಸಕರು ಈ ನಿಟ್ಟಿನಲ್ಲಿ ಕೂಡ ಗಮನ ಹರಿಸುವ ಮೂಲಕ ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದರು.

ಗೂಡಂಗಡಿಗೆ ದಾಳಿ – ಸಲಹೆ
ಮಾದಕ ದ್ರವ್ಯ ಮಾರಾಟ ತಡೆ‌ ನಿಟ್ಟಿನಲ್ಲಿ ಕೇವಲ ಶಾಲಾ ಕಾಲೇಜುಗಳ ಕಡೆಗೆ ಮಾತ್ರ ಬೆಟ್ಟು ಮಾಡುತ್ತಿರುವ ಪೊಲೀಸರು ಶಾಲಾ ಕಾಲೇಜಿನ ಬಳಿ ನಿರಂತರವಾಗಿ ಸಿಗರೆಟ್‌, ಮದ್ಯ, ಗುಟ್ಕಾ, ಗಾಂಜಾ ಮಾರಾಟ ಸಹಿತ ವಿದ್ಯಾರ್ಥಿಗಳಿಗೆ ಮೊಬೈಲ್‌ ಬಳಕೆಗೆ ಸಹಕರಿಸುತ್ತಿರುವ ಗೂಡಂಗಡಿಗಳಿಗೆ ದಾಳಿ ನಡೆಸಬೇಕು. ಪ್ರತಿ 3 ತಿಂಗಳಿಗೆ ಇಂತಹ ಸಭೆ ನಡೆಸಿ ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಬೇಕು ಎಂದು ಉಪನ್ಯಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಎಎಸ್ಪಿ ಡಾ| ಅರುಣ್‌, ಡಿಸಿಬಿ ಇನ್ಸ್‌ ಪೆಕ್ಟರ್‌ ತಾರಾನಾಥ್‌, ಸೈಬರ್‌ ಕ್ರೈಂ  ಎಸೈ ಉಮೇಶ್‌ ಕುಮಾರ್‌, ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ, ಸಂಚಾರ ಠಾಣಾಧಿಕಾರಿ ಎಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next