ವಿಜಯಪುರ: ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದ ವಿವಿಧ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ.
ಎಸ್ ಪಿ ಅನುಪಮ್ ಅಗರವಾಲ್ ನೇತೃತ್ವದಲ್ಲಿ ವಿಜಯಪುರ ನಗರ ಪಾಲಿಕೆಯ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎನ್.ಡಿ.ಪಿ.ಎಸ್. ಅಡಿಯಲ್ಲಿ 40 ಪ್ರಕರಣ ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ 14,08,187 ರೂ. ಮೌಲ್ಯದ 302 ಕೆ.ಜಿ. 871 ಗ್ರಾಂ ಗಾಂಜಾ ನಾಶ ಪಡಿಸಲಾಯಿತು.
ಇದನ್ನೂ ಓದಿ:ಬೀದರ್: 91 ಕೆಜಿ ಆಲ್ಪಾಜೋಲಮ್ ಡ್ರಗ್, 62 ಲಕ್ಷ ರೂ. ವಶಕ್ಕೆ ಪಡೆದ ಎನ್ ಸಿಬಿ ಅಧಿಕಾರಿಗಳು
ಒಂದು ಪ್ರಕರಣದಲ್ಲಿ ವಶಕ್ಕೆ ಪಡಿಸಲಾಗಿದ್ದ 45.5 ಕೆಜಿ ಮೌಲ್ಯದ 58,800 ರೂ. ಮೌಲ್ಯದ ಅಫೀಮು ನಾಶ ಮಾಡಲಾಯಿತು.
ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ವಿವಿಧ ಠಾಣೆಗಳಲ್ಲಿ ವಶಕ್ಕೆ ಪಡೆದಿದ್ದ ಮಾದಕ ವಸ್ತುಗಳನ್ನು ವಿಲೇ ಮಾಡಲಾಗಿದೆ ಎಂದು ಎಸ್ಪಿ ಅನುಪಮ್ ಅಗರವಾಲ ತಿಳಿಸಿದ್ದಾರೆ.
ಎಎಸ್ಪಿ ರಾಮ ಅರಸಿದ್ಧಿ, ಇಂಡಿ ಡಿಎಸ್ಪಿ ಇತರರು ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು ಎಂದು ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.