Advertisement

ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣ; ಆರೋಪಿ ಬಂಧನ

07:25 PM Aug 01, 2023 | Team Udayavani |

ಪಣಜಿ: ಗೋವಾ ರಾಜ್ಯದಲ್ಲಿ ಮಾದಕ ದ್ರವ್ಯ ಪ್ರಕರಣಗಳು ಹೆಚ್ಚುತ್ತಿದೆ. ರಾಜ್ಯಾದ್ಯಂತ ಮಾದಕ ದ್ರವ್ಯ ಕಳ್ಳಸಾಗಣೆದಾರರ ಸಂಖ್ಯೆ ಹೆಚ್ಚುತ್ತಿವೆ. ಗೋವಾ ಪೊಲೀಸರು ಎಚ್ಚೆತ್ತುಕೊಂಡು ಬಲೆ ಬೀಸಿ ಇಂತಹ ಮಾದಕ ದ್ರವ್ಯ ದಂಧೆಕೋರರನ್ನು ಬಂಧಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸ್ಕೋ ಪೊಲೀಸರು ಮಂಗಳವಾರ ಆರೋಪಿಯೋರ್ವನನ್ನು ಬಂಧಿಸಿದ್ದಾರೆ.

Advertisement

ವಾಸ್ಕೊ ವರುಣಪುರಿಯಿಂದ ಡ್ರಗ್ಸ್ ಸಾಗಾಟ ನಡೆಯುತ್ತಿದೆ ಎಂದು ವಾಸ್ಕೋ ಪೊಲೀಸರಿಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು,  1,20,000 ರೂ  ಮೌಲ್ಯದ 1.2 ಕೆಜಿ ಗಾಂಜಾವನ್ನು ಹೊಂದಿದ್ದ ಅಕ್ಷಯ್ ಕುಮಾರ್ ಶೆಟ್ಟಿ (ಮುರಗಾಂವ್) ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಆತ ಯಾರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದಾನೆ ಅಥವಾ ಯಾವ ಗ್ಯಾಂಗ್‍ಗೆ ಸೇರಿದ್ದಾನೆ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next