Advertisement

AI: ಮಾದಕವಸ್ತು ಕಳ್ಳಸಾಗಣೆದಾರನ ಪತ್ತೆ!

09:36 PM Jul 19, 2023 | Team Udayavani |

ನ್ಯೂಯಾರ್ಕ್‌: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ದಿನದಿಂದ ದಿನಕ್ಕೆ ತನ್ನ ಕಾರ್ಯಾಚರಣೆ ವ್ಯಾಪ್ತಿ ವಿಸ್ತರಿಸುತ್ತಿದ್ದು, ಈಗ ಕಾನೂನು ಸುವ್ಯವಸ್ಥೆಯಲ್ಲೂ ಮಹತ್ತರ ಪಾತ್ರ ವಹಿಸಲು ಮುಂದಾಗಿದೆ. ಅದಕ್ಕೆ ನಿದರ್ಶನವೆಂಬಂತೆ, ನ್ಯೂಯಾರ್ಕ್‌ನಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಮಾದಕವಸ್ತು ಕಳ್ಳಸಾಗಣೆದಾರನೊಬ್ಬನನ್ನು ಎಐ ಬಲೆಗೆ ಬೀಳಿಸಿದೆ.

Advertisement

ನ್ಯೂಯಾರ್ಕ್‌ನಲ್ಲಿ ಸಾರಿಗೆ ಸುವ್ಯವಸ್ಥೆಗೆಂದು ಎಐ ಆಧಾರಿತ ರೆಕಾರ್‌ ಎನ್ನುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ವಾಹನ ಸವಾರರ ನಂಬರ್‌ಪ್ಲೇಟ್‌, ವಾಹನ ಪರವಾನಗಿ, ಚಾಲನೆ ನಡವಳಿಕೆ ಸೇರಿ ಎಲ್ಲವನ್ನೂ ಗಮನಿಸುತ್ತದೆ.

480 ಕ್ಯಾಮೆರಾಗಳನ್ನು ಒಳಗೊಂಡಿರುವ ಈ ತಂತ್ರಜ್ಞಾನವು ವಾರದಲ್ಲಿ 40 ದಶಲಕ್ಷ ವಾಹನಗಳ ಮಾಹಿತಿ ಕಲೆ ಹಾಕುತ್ತಿರುತ್ತದೆ. ಇದೇ ತಂತ್ರಜ್ಞಾನ ಮಾದಕವಸ್ತುಗಳ ಕಳ್ಳಸಾಗಣೆಗೆ ಸಾಮಾನ್ಯವಾಗಿ ಬಳಸುವ ಮಾರ್ಗದಲ್ಲಿ ಕೆಂಗಣ್ಣಿಟ್ಟು, ಪೊಲೀಸರು ಬಹುಕಾಲದಿಂದ ಹುಡುಕುತ್ತಿದ್ದ ಡೇವಿಡ್‌ ಜಯಾಸ್‌ ಎಂಬ ಕುಖ್ಯಾತ ಡ್ರಗ್‌ ಕಳ್ಳಸಾಗಣೆದಾರನ ನಂಬರ್‌ ಪ್ಲೇಟ್‌ ಗುರುತಿಸಿ ಆತನ ಬಗ್ಗೆ ಮಾಹಿತಿ ನೀಡಿದೆ. ಇದರಿಂದ ಪೊಲೀಸರು ಆತನನ್ನು ಡ್ರಗ್ಸ್‌ ಸಮೇತ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next