Advertisement

ಡ್ರಗ್ಸ್‌ ಪೆಡ್ಲರ್‌ಗಳ ಸದೆ ಬಡಿಯಲು ಹಲ್ಲಿರುವ ಪೊಲೀಸ್‌ ಪಡೆ ಬರಲಿ

12:17 AM Mar 15, 2023 | Team Udayavani |

ಕರಾವಳಿಯಲ್ಲಿ ಕಾನೂನು ಬಾಹಿರ ಕೃತ್ಯಗಳು, ಅಕ್ರಮ ವ್ಯವಹಾರಗಳಿಗೆ ಕಡಿವಾಣ ಹಾಕಲೆಂದೇ ಹಲವು ಉಪಕ್ರಮಗಳನ್ನು ಆರಂಭಿಸಿದರೂ ಕೆಲವೇ ದಿನಗಳಲ್ಲಿ ಸ್ಥಗಿತಗೊಳ್ಳುತ್ತದೆ. ಸ್ಥಗಿತಕ್ಕೆ ಆ ಕ್ಷಣದ ಕಾರಣಗಳನ್ನು ನೀಡುವ ಇಲಾಖೆ, ಅದರ ಪುನರಾರಂಭಕ್ಕೆ ಗಂಭೀರ ಪ್ರಯತ್ನ ಮಾಡುವುದಿಲ್ಲ ಎಂಬ ಆರೋಪ ಹಲವರದ್ದು. ಜಿಲ್ಲಾಡಳಿತವಾಗಲೀ, ಜನಪ್ರತಿನಿಧಿಗಳಾಗಲೀ ಇತ್ತ ಯಾಕೆ ಗಮನಹರಿಸುವುದಿಲ್ಲ ಎಂಬುದು ಬಹಳ ದೊಡ್ಡ ಪ್ರಶ್ನೆ.

Advertisement

ಉಡುಪಿ: ರಾಣಿ ಅಬ್ಬಕ್ಕ ಪಡೆ ಎಲ್ಲಿಗೆ ಹೋಯಿತು?
ನಾಗರಿಕರೇ ಕೇಳುತ್ತಿರುವ ಪ್ರಶ್ನೆ.
ಕರಾವಳಿ ಭಾಗದಲ್ಲಿ ಪೋರ್ಚು ಗೀಸರ ಎದೆ ನಡುಗಿಸಿದ್ದ ಶ್ರೇಷ್ಠ ಹೋರಾ ಟಗಾರ್ತಿ ರಾಣಿ ಅಬ್ಬಕ್ಕರಂತೆ ಪ್ರಸ್ತುತ ಡ್ರಗ್ಸ್‌ ಜಾಲವನ್ನು ಸದೆ ಬಡಿ ಯಲು ಮತ್ತೂಂದು ಸಮರ್ಥ ಪೊಲೀಸ್‌ ಪಡೆ ಅಗತ್ಯವಿದೆ. ಇದರೊಂದಿಗೆ ಆ ಪಡೆಗೆ ಕಚ್ಚಲೂ ಹಲ್ಲಿರಬೇಕು, ಜತೆಗೆ ಬಡಿಗೆಯೂ ಇರಬೇಕು !
ಬರೀ ಬುಸ್‌ ಗುಡುವ ಅಥವಾ “ನಾಯಕರು’ಹೇಳಿದಂತೆ ಮುದುಡಿ ಮಲಗುವ ಪಡೆ ಬೇಡ. ಯಾಕೆಂದರೆ ಈಗ ಅದೇ ಸ್ಥಿತಿ ಇದೆ ಎಂಬ ಆರೋಪ ಸಾರ್ವಜನಿಕರದ್ದು.

ಇದ್ದ ಪಡೆ ಎಲ್ಲಿಗೆ ಹೋಯಿತು?
ಮಹಿಳೆಯರಿಗೆ ಸುರಕ್ಷೆ ಒದಗಿಸ ಲೆಂದೇ ಉಡುಪಿ ಮಹಿಳಾ ಪೊಲೀ ಸ್‌ ಠಾಣೆಯಲ್ಲಿ 2019ರಲ್ಲಿ ರಾಣಿ ಅಬ್ಬಕ್ಕ ಪಡೆ ಆರಂಭವಾ ಯಿತು. ಸಾಕಷ್ಟು ಒಳ್ಳೆಯ ಅಭಿ ಪ್ರಾಯವೂ ವ್ಯಕ್ತವಾಗಿತ್ತು. ಆದರೆ ಒಂದೇ ವರ್ಷ. ಪಡೆ ಎಲ್ಲಿಗೆ ಹೋಯಿ ತೆಂದೇ ತಿಳಿದಿಲ್ಲ? ಯಾರಿಗೆ ಕಿರಿಕಿರಿ ಯಾಯಿತು ಎಂದು ಅದನ್ನು ನಿಲ್ಲಿಸಿ ದರೋ ಅದೂ ತಿಳಿದಿಲ್ಲ. ಅಥವಾ ಹಾಗೆ ಸ್ಥಗಿತಗೊಳಿಸುವಂತೆ ಯಾರು ಆದೇಶಿಸಿದರೋ ಅದೂ ಬಹಿರಂಗಗೊಂಡಿಲ್ಲ.

ಜಿಲ್ಲೆಯಲ್ಲಿ ದಿನೇ ದಿನೇ ಮಾದಕ ವಸ್ತುಗಳ ವಂಚಕರ ಹಾವಳಿ, ಮಟ್ಕಾ ದಂಧೆ ಹೆಚ್ಚುತ್ತಿರುವಾಗ ಇಂಥ ಹಲವು ಪಡೆಗಳು ಕಾರ್ಯಾಚರಿಸಬೇಕು. ಆದರೆ ಇರುವ ವ್ಯವಸ್ಥೆಯನ್ನು ಮೂಲೆಗುಂಪು ಮಾಡುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ.

ವಿವಿಧೆಡೆ ಗಸ್ತು
ಅಬ್ಬಕ್ಕ ಪಡೆಯು ಹಗಲು ಅಧಿಕ ಬಾರಿ ಗಸ್ತು ಕಾರ್ಯಾಚರಣೆ ನಡೆಸುತ್ತಿತ್ತು. ಉಡುಪಿ ಹಾಗೂ ಮಣಿಪಾಲ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಓಡಾಡುವ ಪ್ರದೇಶಗಳಲ್ಲಿ ಗಸ್ತು ಹೊಡೆಯುತ್ತಿತ್ತು. ಸರ್ವಿಸ್‌ ಬಸ್‌ ತಂಗುದಾಣ, ಸಿಟಿ ಬಸ್‌ ತಂಗುದಾಣ, ರೈಲ್ವೇ ನಿಲ್ದಾಣ, ಶಾಲಾ-ಕಾಲೇಜು, ಉದ್ಯಾನವನ ಹಾಗೂ ವಾಕಿಂಗ್‌ ಪ್ರದೇಶಗಳಲ್ಲಿ ಗಸ್ತು ನಡೆಸುತ್ತಿತ್ತು.
ಈ ಸ್ಥಳಗಳಲ್ಲಿ ಮಹಿಳೆಯರಿಗೆ ತೊಂದರೆ ನೀಡುವ, ಶೋಷಿಸುವ, ಕಿರುಕುಳ ನೀಡುವ ವ್ಯಕ್ತಿಗಳು ಕಂಡುಬಂದರೆ ತತ್‌ಕ್ಷಣವೇ ಕ್ರಮ ಕೈಗೊಳ್ಳುತ್ತಿತ್ತು. ಪ್ರಕರಣಗಳನ್ನು ಆಧರಿಸಿ ಅಗತ್ಯವಿದ್ದರೆ ಕ್ರಿಮಿನಲ್‌ ಕೇಸ್‌ಗಳನ್ನೂ ಹಾಕಲಾಗುತ್ತಿತ್ತು.

Advertisement

ಸಿಬಂದಿ ನಿಯೋಜನ ಅತ್ಯಗತ್ಯ
ಅಬ್ಬಕ್ಕ ಪಡೆ ಕಾರ್ಯಾಚರಿಸುತ್ತಿದ್ದ ಸಂದರ್ಭದಲ್ಲಿ ಉಡುಪಿ, ಮಣಿಪಾಲ ಭಾಗದಲ್ಲಿ ಅಪರಾಧ ಪ್ರಕರಣಗಳೂ ನಿಯಂತ್ರಣದಲ್ಲಿತ್ತು. ಕೆಲವು ತಿಂಗಳ ಹಿಂದಷ್ಟೇ ಉಡುಪಿ ನಗರದಲ್ಲಿ ಹೆಚ್ಚುವರಿ ಪೊಲೀಸ್‌ ಬಸ್‌ ಸಿಬಂದಿ ಸಹಿತ ನಿಯೋಜಿಸಲಾಗಿತ್ತು.

ಒಂದು ತಿಂಗಳವರೆಗೆ ಕಾರ್ಯಾಚರಿಸಿದ್ದ ಇದೂ ಈಗ ಮೊಟಕುಗೊಂಡಿದೆ. ಪರಿಣಾಮ ವಾಗಿ ಅನೈತಿಕ ಚಟುವಟಿಕೆಗಳೆಲ್ಲ ರಾಜಾರೋ ಷವಾಗಿ ನಡೆಯುತ್ತಿವೆ. ಯಾರೂ ಇದನ್ನು ತಡೆಯುವವರೇ ಇಲ್ಲವಾಗಿದೆ.

ವಾಹನ ಕೊರತೆ
ಮಹಿಳಾ ಪೊಲೀಸ್‌ ಠಾಣೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿದ್ದ ಈ ಪಡೆಗೆ ಸೂಕ್ತ ವಾಹನವಿತ್ತು. ಅದಕ್ಕೆ ಗುಲಾಬಿ ಬಣ್ಣವನ್ನು ಬಳಿಯಲಾಗಿತ್ತು. ವಾಹನದ ಸುತ್ತ ಕಂಟ್ರೋಲ್‌ ರೂಂ ಸಂಖ್ಯೆ ಹಾಗೂ ಮಹಿಳಾ ಠಾಣೆಯ ಸಂಖ್ಯೆಯನ್ನು ನಮೂದಿಸಲಾಗಿದ್ದು, ಸುಲಭದಲ್ಲಿ ದೂರು ನೀಡಲು ಅವಕಾಶ ಕಲ್ಪಿಸಲಾಗಿತ್ತು. ಪ್ರಸ್ತುತ ಈ ವಾಹನ ಹಳೆಯದಾಗಿದ್ದು, ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇಲಾಖೆಯಿಂದ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಮಹಿಳಾ ಠಾಣೆಯ ನಿರೀಕ್ಷಕರಿಗಷ್ಟೇ ವಾಹನ ವ್ಯವಸ್ಥೆಯಿದ್ದು, ಗಸ್ತು ಕಾರ್ಯಾಚರಣೆಗೆ ವಾಹನವಿಲ್ಲವೆಂದು ಹೇಳಿ ಪಡೆ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

ವಿಶೇಷ ಪಡೆಯ ಆವಶ್ಯಕತೆ
ಜಿಲ್ಲೆಯಲ್ಲಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ವಿಶೇಷ ಪಡೆ ರೂಪಿಸುವ ಅಗತ್ಯವಿದೆ. ಮಾದಕ ವಸ್ತುಗಳ ಜಾಲ, ಸೈಬರ್‌ ಅಪರಾಧಗಳನ್ನು ತಡೆಗಟ್ಟಲು ಸೆನ್‌ ಪೊಲೀಸ್‌ ಠಾಣೆ ಕಾರ್ಯಾಚರಣೆ ಮಾಡುತ್ತಿದೆಯಾದರೂ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ.

ಸಾರ್ವಜನಿಕರ ಆಗ್ರಹ
ಅಂದಿನ ಉಡುಪಿಯ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ವಿಶೇಷ ಮುತುವರ್ಜಿಯಿಂದ ಆರಂಭಿಸಿದ್ದು ರಾಣಿ ಅಬ್ಬಕ್ಕ ಪಡೆ. ಉಡುಪಿ ನಗರ ಹಾಗೂ ಮಣಿಪಾಲದಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿತ್ತು. ರಾಣಿ ಅಬ್ಬಕ್ಕ ಪಡೆಯ ವಾಹನದಲ್ಲಿ ಮಹಿಳಾ ಠಾಣೆಯ ಪೊಲೀಸ್‌ ಉಪನಿರೀಕ್ಷಕರು ಅಥವಾ ಸಹಾಯಕ ಪೊಲೀಸ್‌ ನಿರೀಕ್ಷಕರು, ಮೂವರು ಸಿಬಂದಿ, ಓರ್ವ ಪುರುಷ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಇಂತಹ ಪಡೆಯ ಆವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಿದ್ದು, ಕೂಡಲೇ ಪುನರಾರಂಭಿಸಬೇಕೆಂಬುದು ಸಾರ್ವಜನಿಕರ ಆಗ್ರಹ.

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next