Advertisement
ಸ್ಯಾಂಡಲ್ ವುಡ್ ನ ನಟ, ನಟಿಯರು ಹಾಗೂ ಸಂಗೀತಗಾರರ ಡ್ರಗ್ಸ್ ಪೂರೈಕೆ ಪ್ರಕರಣವನ್ನು ಕೇಂದ್ರ ಮಾದಕ ವಸ್ತು ನಿಗ್ರಹ ದಳ (ಎನ್ ಸಿಬಿ) ತನಿಖೆಯ ಬಳಿಕ ರಾಜ್ಯ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದರು.
Related Articles
Advertisement
ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ನಾನು ಅಧಿಕಾರಿಗಳಿಗೆ ನೀಡಿರುವ ಮಾಹಿತಿಯನ್ನು ನಿಮ್ಮ ಮುಂದೆ ಹಂಚಿಕೊಳ್ಳಲಾರೆ. ಯಾಕೆಂದರೆ ಇದರಿಂದ ತನಿಖೆಗೆ ಅಡ್ಡಿಯಾಗುತ್ತದೆ. ಎಲ್ಲ ವಿವರವನ್ನು ಸಿಸಿಬಿ ಅಧಿಕಾರಿಗಳೇ ನಿಮಗೆ ನಂತರ ನೀಡುತ್ತಾರೆ ಎಂದು ಇಂದ್ರಜಿತ್ ಹೇಳಿದರು. ಡ್ರಗ್ಸ್ ಜಾಲದ ವಿಚಾರದಲ್ಲಿ ಯಾರ ತೇಜೋವಧೆ ಮಾಡುವುದು ನನ್ನ ಉದ್ದೇಶವಲ್ಲ. ಸಮಾಜದ ಒಳಿತಿಗಾಗಿ ಇದು ಅನಿವಾರ್ಯ ಎಂದರು.
ಚಿರಂಜೀವಿ ಸರ್ಜಾ ಬಗ್ಗೆ ನಾನು ಅವರ ಕುಟುಂಬಕ್ಕೆ ನೋವು ನೀಡಬೇಕೆಂಬ ಅರ್ಥದಲ್ಲಿ ಮಾತನಾಡಿಲ್ಲ. ನನಗೆ ಗೊತ್ತಿರುವ ವಿಷಯದ ಬಗ್ಗೆ ಮಾತನಾಡಿದ್ದೇನೆ ಅಷ್ಟೇ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.
ಡ್ರಗ್ಸ್ ಜಾಲದೊಂದಿಗೆ ಕನ್ನಡ ಚಲನಚಿತ್ರರಂಗದ ಕೆಲವರಿಗೆ ನಂಟಿದೆ. ಈ ಬಗ್ಗೆ ನನ್ನ ಬಳಿ ವಿವರ ಇದೆ. ನನಗೆ ರಕ್ಷಣೆ ನೀಡಿದರೆ ಎಲ್ಲವನ್ನೂ ಅಧಿಕಾರಿಗಳ ಮುಂದೆ ಇಡುತ್ತೇನೆ ಎಂದು ಇಂದ್ರಜಿತ್ ಹೇಳಿದ್ದರು. ಈ ನಿಟ್ಟಿನಲ್ಲಿ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದು, ಇಂದು ಇಂದ್ರಜಿತ್ ಅವರು ಸಾಕ್ಷ್ಯ ಸಮೇತ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿ ಬರೋಬ್ಬರಿ ಆರು ಪುಟಗಳ ಹೇಳಿಕೆಯನ್ನು ನೀಡಿರುವುದಾಗಿ ವರದಿ ತಿಳಿಸಿದೆ.