Advertisement

ಡ್ರಗ್‌ ಪ್ರಕರಣ: ಗಡಿಯಲ್ಲಿ ಅಲರ್ಟ್‌

02:01 PM Sep 07, 2020 | Suhan S |

ಶಿಡ್ಲಘಟ್ಟ: ರಾಜ್ಯದಲ್ಲಿ ಡ್ರಗ್ಸ್‌ ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ, ಆಂಧ್ರಕ್ಕೆ ಹೊಂದುಕೊಂಡಿರುವ ಚಿಕ್ಕಬಳ್ಳಾಪುರದಲ್ಲಿ ಪೊಲೀಸ್‌ ಇಲಾಖೆಯ ಹೈಅಲರ್ಟ್‌ ಆಗಿ ಕೆಲಸವನ್ನು ನಿರ್ವಹಿಸುತ್ತಿದೆ. ಎಸ್ಪಿ ಮಿಥುನ್‌ ಕುಮಾರ್‌ ನೇತೃತ್ವದಲ್ಲಿ ಇಲಾಖೆ ಸಿಬ್ಬಂದಿ ಹದ್ದಿನ ಕಣ್ಣಿಟ್ಟು ರಾಷ್ಟ್ರೀಯ ಹೆದ್ದಾರಿ 7, ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳ ಮೂಲಕ ತೆರಳುವ ವಾಹನಗಳನ್ನು ತಪಾಸಣೆ ನಡೆಸಲು ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ.

Advertisement

ಜೊತೆಗೆ ಶ್ವಾನದಳದ ಮೂಲಕ ವಾಹನ ತಪಾಸಣೆ ನಡೆಸುವ ಕಾರ್ಯ ಭರದಿಂದ ಸಾಗಿದೆ. ಜಿಲ್ಲೆಯ ಬಾಗೇಪಲ್ಲಿ, ಹಿಂದೂಪುರಕ್ಕೆ ಸಮೀಪದಲ್ಲಿರುವ ಗೌರಿಬಿದನೂರು, ಪಾತಪಾಳ್ಯ, ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಹಾಗೂ ಚೇಳೂರು ಹೋಬಳಿ ಸಹಿತ ಜಿಲ್ಲೆಯ ಐದು ಕಡೆ ಚೆಕ್‌ಪೋಸ್ಟ್‌ ಸ್ಥಾಪಿಸಿ ಬೆಂಗಳೂರು, ಹೈದ್ರಾಬಾದ್‌ ಸೇರಿ ಇನ್ನಿತರೆ ಪ್ರದೇಶಗಳಿಂದ ಬರುವ ವಾಹನ ಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಇತ್ತೀಚಿಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿ ಡಿಜಿಪಿ ಅವರು, ಜಿಲ್ಲೆಯಲ್ಲಿ ಗಾಂಜಾ ಪ್ರಕರಣ ಭೇದಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದ್ದರು.

ಉದಯವಾಣಿಯೊಂದಿಗೆ ಜಿಲ್ಲಾ ಎಸ್ಪಿ ಮಿಥುನ್‌ಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ಗಡಿ ಭಾಗಗಳಲ್ಲಿ ಐದು ಕಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ಅನುಮಾನ ಬಂದ ವಾಹನಗಳನ್ನು ಶ್ವಾನ ದಳದ ಮೂಲಕ ತಪಾಸಣೆ ನಡೆಸುವ ಕೆಲಸವನ್ನು ಮಾಡುತ್ತಿದ್ದೇವೆ. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ- ಜಿಲ್ಲಾ ಮತ್ತು ತಾಲೂಕು ಹೆದ್ದಾರಿಗಳ ಮೂಲಕ ಹಾದು ಹೋಗುವ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಮೇಲೆ ಕಣ್ಣಿರಿಸಲಾಗಿದೆ. ಸಾರ್ವಜನಿ ಕರು ಸಹ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next