Advertisement

ಪಿಎನ್‌ಬಿ ಗೆ 7,200 ಕೋಟಿ ರೂ. ಬಡ್ಡಿ ಪಾವತಿಸಿ: ನೀರವ್‌ ಮೋದಿಗೆ ಡಿಆರ್‌ಟಿ ಆದೇಶ

12:02 PM Jul 07, 2019 | Sathish malya |

ಪುಣೆ : ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 7,200 ಕೋಟಿ ರೂ.ಗಳಿಗೂ ಮೀರಿದ ಬಡ್ಡಿಯನ್ನು ಪಾವತಿಸುವಂತೆ ಸಾಲ ವಸೂಲಾತಿ ನ್ಯಾಯ ಮಂಡಳಿಯು ಲಂಡನ್‌ ಜೈಲಿನಲ್ಲಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ನೀರವ್‌ ಮೋದಿ ಮತ್ತು ಆತನ ಪಾಲುದಾರರಿಗೆ ಆದೇಶ ಹೊರಡಿಸಿದೆ.

Advertisement

ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 13,500 ಕೋಟಿ ರೂ. ವಂಚನೆಗೈದು ವಿದೇಶಕ್ಕೆ ಪರಾರಿಯಾಗಿ ಪ್ರಕೃತ ಲಂಡನ್‌ ಜೈಲಿನಲ್ಲಿರುವ ನೀರವ್‌ ಮೋದಿ, ಪಿಎನ್‌ಬಿ ಗೆ 7,200 ಕೋಟಿ ರೂ. ಅಧಿಕ ಮೊತ್ತದ ಬಡ್ಡಿಯನ್ನು ಪಾವತಿಸಬೇಕಿದೆ.

ಮುಂಬಯಿಯ ಡೆಟ್‌ ರಿಕವರಿ ಅಧಿಕಾರಿಯಾಗಿ ಹೆಚ್ಚುವರಿ ಹೊಣೆಗಾರಿಕೆ ಹೊಂದಿರುವ ಪ್ರಿಸೈಡಿಂಗ್‌ ಆಫೀಸರ್‌ ದೀಪಕ್‌ ಠಕ್ಕರ್‌ ಅವರು ಎರಡು ಕೇಸುಗಳಿಗೆ ಸಂಬಂಧಿಸಿ ಪಿಎನ್‌ಬಿ ಪರವಾಗಿ ಎರಡು ಆದೇಶಗಳನ್ನು ಹೊರಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next