Advertisement
ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಸತ್ಯಸಾಯಿ ಪ್ರೇಮಾಮೃತಂ ಸಭಾ ಭವನದಲ್ಲಿ ಆಯೋ ಜಿಸಿದ್ದ ಅಂತಾರಾಷ್ಟ್ರೀಯ ವೈದ್ಯಕೀಯ ಸಮಾವೇಶದ ಸಮಾರೋಪ ಸಮಾರಂಭದಲ್ಲಿ 14 ಮಕ್ಕಳಿಗೆ ಜೀವನದ ಉಡುಗೊರೆ ಪ್ರಮಾಣ ಪತ್ರ ನೀಡಿ ಮಾತನಾಡಿದರು.
Related Articles
Advertisement
ಇದನ್ನೂ ಓದಿ:- ಚಾ.ಬೆಟ್ಟ ಉಳಿವಿಗೆ ನಿವಾಸಿಗಳ ತೆರವೊಂದೇ ದಾರಿ
ಗುಣಮುಖರಾದ 14 ಮಂದಿ ಮಕ್ಕಳು ಸಮಾರೋಪ ಸಮಾರಂಭದ ವೇದಿಕೆಯಲ್ಲಿ ತಮ್ಮ ಪೋಷಕರ ಜೊತೆಗೆ ಆಗಮಿಸಿ “ಚಿರಂಜೀವಿ ಭವ ಪ್ರಮಾಣ ಪತ್ರವನ್ನು ಪಡೆದರು. ವೈದ್ಯಕೀಯ ಸಮಾವೇಶವನ್ನು ಸಂಘಟಿಸಿದ ಡಾ.ಸನ್ನಿ ಆನಂದ್, ಸಮ್ಮೇಳನವು ಯಾವುದೇ ಅಡೆತಡೆ ಇಲ್ಲದೆ ನೆರವೇರಿದ ಹಾಗೆಯೇ ತಾನು ತೀವ್ರ ನಿಗಾ ಘಟಕದಲ್ಲಿ ಪುಟಾಣಿ ಮಕ್ಕಳ ಸೇವೆಯನ್ನು ಭಗವಂತನ ಸ್ವರೂಪವೆಂದು ನೆರವೇರಿಸಿದ ಅನುಭವವನ್ನು ತಿಳಿಸಿದರು.
ವೈದ್ಯಕೀಯ ಸಂಸ್ಥೆ ಜತೆ ಒಪ್ಪಂದ: ಭವಿಷ್ಯದಲ್ಲಿ ಸಮಾಜಕ್ಕೆ, ಅದರಲ್ಲೂ ಗ್ರಾಮೀಣ ಪ್ರದೇಶದ ಬಡತನ ರೇಖೆಗಿಂತ ಕೆಳಗಿರುವ ಬಡಜನರಿಗೆ ಉಚಿತ ಆರೋಗ್ಯ ಸೇವೆ ನೀಡುವ ಸಲುವಾಗಿ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳೊಂದಿಗೆ ಕೈಜೋಡಿಸುವ ಒಪ್ಪಂದದ ಪ್ರಸ್ತಾವನೆಯನ್ನು ಇಡಲಾಯಿತು. ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ಸಮಾವೇಶಗೊಂಡ ಸವಿನೆನಪಿಗಾಗಿ ಡಾ.ಪಿ.ಎಲ್. ತಪಾಡಿಯಾ, ಡಾ. ಬಿ.ಎಫ್.ಗಾರ್ಗಿ, ಡಾ.ಸನ್ನಿಆನಂದ್ ಮೊದಲಾದವರನ್ನು ಸನ್ಮಾನಿಸಲಾಯಿತು.
ಮುಂಜಾನೆ ನಡೆದ ಕಾರ್ಯಕ್ರಮದಲ್ಲಿ, ಡಾ.ಬೆರ್ರ, ಡಾ.ಎಚ್.ಆರ್.ನಾಗೇಂದ್ರ, ಡಾ.ರಾಜೇಶ್ ಕೋಟೇಶ, ಡಾ. ಸೀಮಾ ಮಲ್ಹೋತ್ರ, ಡಾ.ಹೀರಾ ಮಾಲಿನಿ, ಡಾ.ತೆರೇಸಾ ಕಟ್ಟಸ್, ಡಾ.ಫಣೀಂದ್ರ ಲಾಲ್, ಡಾ.ಸತೀಶ ಬಾಬು ಡಾ.ಬಿಪಿನ್ ನಾಯರ್ ಮೊದಲಾದವರು ಸಮ್ಮೇಳನಕ್ಕೆ ಅವಶ್ಯಕ ಸಂಪನ್ಮೂಲ ವಿಚಾರಗಳನ್ನು ತಿಳಿಸಿದರು. ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಬಿ.ಎನ್.ನರಸಿಂಹಮೂರ್ತಿ, ಕುಲಪತಿಗಳಾದ ಡಾ.ಶ್ರೀಕಂಠಮೂರ್ತಿ ಉಪಸ್ಥಿತರಿದ್ದರು.
ವೈದ್ಯಕೀಯ ಸೇವೆಯಲ್ಲಿ ರೋಗಿ ಭಗವಂತ ಸ್ವರೂಪ
ಸತ್ಯಸಾಯಿ ವೈದ್ಯಕೀಯ ಸೇವೆಯಲ್ಲಿ ರೋಗಿಯನ್ನು ಭಗವಂತನ ಸ್ವರೂಪವೆಂದು ತಿಳಿಯಲಾಗುತ್ತದೆ ಎಂದು ಸದ್ಗುರು ಮಧುಸೂದನ ಸಾಯಿ ಹೇಳಿದರು. ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ವಹಿಸಿದ್ದ ಅವರು ಆಶೀರ್ವಚನ ನೀಡಿ, ಪ್ರೇಮ ಶಕ್ತಿಯ ಮುಂದೆ ಬದ್ಧತೆಯುಳ್ಳ ಕ್ರಿಯಾಶಕ್ತಿಯು ಕೈಜೋಡಿಸಿದಾಗ ಅದ್ಭುತವಾದ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತದೆ.
ಇಂದು ಸತ್ಯ ಸಾಯಿ ಒಕ್ಕೂಟದಲ್ಲಿ ಮೈದಳೆದ ಆರೋಗ್ಯ ಸಂಸ್ಥೆಯು ಜನರಿಗೆ ಉತ್ತಮ ಶುಲ್ಕರಹಿತ ಆರೋಗ್ಯ ಸೇವೆ ಯನ್ನು ನೀಡುವುದಲ್ಲದೆ ಪ್ರೇಮದಿಂದ ಬದ್ಧತೆಯ ವೈದ್ಯ ಪಡೆಯನ್ನು ತಯಾರಿಸಿ ಸಮಾಜಕ್ಕೆ ನೀಡುವ ಮಹಾನ್ ಕಾರ್ಯದ ಮಹದಾಸೆಯನ್ನು ಹೊಂದಿದೆ ಎಂದು ಹೇಳಿದರು.ಭಾರತ ಸರ್ಕಾರ ಮತ್ತು ರಾಜ್ಯ ಸರಕಾರದ ಸಕಾಲಿಕ ನೆರವು ದೊರೆತಿದ್ದು, ಮುಂದೆಯೂ ಅದು ದೊರೆಯಲಿದೆ ಎಂಬ ಆಶಯವನ್ನು ವ್ಯಕ್ತ ಪಡಿಸಿದರು.
ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಸತ್ಯಸಾಯಿ ಪ್ರೇಮಾಮೃತಂ ಸಭಾ ಭವನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವೈದ್ಯಕೀಯ ಸಮಾವೇಶದ ಸಮಾರೋಪ ಸಮಾರಂಭದಲ್ಲಿ 14 ಮಕ್ಕಳಿಗೆ ಜೀವನದ ಉಡುಗೊರೆ ಪ್ರಮಾಣ ಪತ್ರವನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ನೀಡಿದರು.