Advertisement

ದೇಶಕ್ಕೆ ಇದು ಯುಗ ಪರಿವರ್ತನೆಯ ಕಾಲ… ದೇಶ ಉದ್ದೇಶಿಸಿ ರಾಷ್ಟ್ರಪತಿ ಮುರ್ಮು ಭಾಷಣ

08:23 AM Jan 26, 2024 | Team Udayavani |

ನವದೆಹಲಿ: ಸ್ವತಂತ್ರ ಭಾರತ ಶತಮಾನೋ ತ್ಸವ ದತ್ತ ದೃಷ್ಟಿ ಹರಿಸಿದ್ದು, ಅಮೃತ ವರ್ಷದ ಆರಂಭಿಕ ಕಾಲಘಟ್ಟದಲ್ಲಿದೆ. ಇದು ಯುಗ ಪರಿವರ್ತನೆಯ ಕಾಲವಾಗಿದೆ. ಅಭಿವೃದ್ಧಿ ಹೊಂದಿದ ಶತಮಾನದ ಭಾರತದ ನಮ್ಮೆಲ್ಲರ ಕನಸು ಸಾಕಾರಗೊಳ್ಳಬೇಕಾದರೆ ಇಡೀ ದೇಶದ ಜನತೆ ತಮ್ಮ ಕರ್ತವ್ಯಗಳನ್ನು ಮತ್ತು ಪ್ರಾಥಮಿಕ ಹೊಣೆಗಾರಿಕೆಗಳನ್ನು ಶ್ರದ್ಧೆ ಯಿಂದ ನಿರ್ವಹಿಸಬೇಕಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದ್ದಾರೆ.

Advertisement

ದೇಶದ 75ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಗುರುವಾರ ದೂರದರ್ಶ ನದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವವು ನಮ್ಮ ಮೌಲ್ಯಗಳು ಮತ್ತು ತಣ್ತೀಗಳನ್ನು ನೆನಪಿಸುವ ಪ್ರಮುಖ ಸಂದರ್ಭವಾಗಿದ್ದು ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದೆ ಎಂದು ಕೊಂಡಾಡಿದರು.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಯಲ್ಲಿ ನಿರ್ಮಾಣಗೊಂಡ ರಾಮ ಮಂದಿ ರದಲ್ಲಿ ಶ್ರೀರಾಮ ಲಲ್ಲಾನ ಪ್ರಾಣಪ್ರತಿಷ್ಠೆ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ, ಹಿರಿಯ ಸಮಾಜವಾದಿ ನಾಯಕರಾಗಿದ್ದ ಕರ್ಪೂರಿ ಠಾಕೂರ್‌ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನವನ್ನು ಮರಣೋತ್ತರವಾಗಿ ಘೋಷಿಸಿರುವುದು ಐತಿಹಾಸಿಕ ಮತ್ತು ದೇಶದ ಪಾಲಿಗೆ ಅತ್ಯಂತ ಮಹತ್ವದ ಕ್ಷಣ ಎಂದು ಬಣ್ಣಿಸಿದರು. ರಾಮ ಮಂದಿರವನ್ನು ವಿಶಾಲ ದೃಷ್ಟಿಕೋನದೊಂದಿಗೆ ನೋಡಿದಾಗ ಭವಿಷ್ಯದ ಇತಿಹಾಸಕಾರರು ಇದನ್ನು ದೇಶದ ನಾಗರಿಕ ಪರಂಪರೆಯ ಮರುಶೋಧದ ಹೆಗ್ಗುರುತಾಗಿ ಪರಿಗಣಿ ಸಲಿದ್ದಾರೆ ಎಂದರು.

ಜಗತ್ತಿನ ವಿವಿಧೆಡೆ ಸಮಸ್ಯೆಗಳು, ಸಂಘರ್ಷಗಳು ತಲೆದೋರಿದೆ. ಪರಸ್ಪರ ದೋಷಾರೋಪಣೆ, ಸಂಘರ್ಷ, ದಾಳಿ- ಪ್ರತಿದಾಳಿ ಯಿಂದಾಗಿ ಸಹಸ್ರಾರು ಸಂಖ್ಯೆ ಯಲ್ಲಿ ಅಮಾಯಕ ಜನರು ಬವಣೆ ಪಡುವಂತಾಗಿದೆ. ಈ ಎಲ್ಲ ವಿಪ್ಲವಗಳಿಂದಾಗಿ ಮಾನ ವೀಯತೆಗೆ ತೀವ್ರ ತೆರನಾದ ಹೊಡೆತ ಬೀಳುತ್ತಿದೆ. ಇವುಗಳನ್ನು ಬಗೆಹರಿಸಲು ಸೂಕ್ತ ಶಾಂತಿಯುತ ಮಾರ್ಗೋಪಾಯಗಳನ್ನು ಕಂಡುಕೊಳ್ಳ ಬೇಕಿದೆ ಎಂದು ರಾಷ್ಟ್ರಪತಿಯವರು ಹೇಳಿದರು.

ಮಹತ್ವದ ಶೃಂಗ: ಜಿ 20 ಶೃಂಗದ ಯಶಸ್ಸನ್ನು ಪ್ರಸ್ತಾವಿಸಿದ ಅವರು, ಜಾಗತಿಕ ದಕ್ಷಿಣದ ದನಿಯಾಗಿ ಭಾರತ ಹೊರಹೊಮ್ಮುವಲ್ಲಿ ಈ ಶೃಂಗ ಮಹತ್ತರ ಪಾತ್ರವನ್ನು ವಹಿಸಿತು ಎಂದರು. ದೇಶದ ಆರ್ಥಿಕತೆ ದೃಢವಿಶ್ವಾಸ ದಿಂದ ಮುನ್ನುಗ್ಗುತ್ತಿದ್ದು, ಎಲ್ಲ ಅಡೆತಡೆಗಳ ಹೊರತಾಗಿಯೂ ಸಶಕ್ತ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳುತ್ತಿದೆ.

Advertisement

ಸರ್ಕಾರ ಜಾರಿಗೊಳಿಸಿದ ವಿವಿಧ ಜನಕಲ್ಯಾಣ ಯೋಜನೆಗಳ ಸಹಿತ ವಿವಿಧ ವಿಷಯಗಳನ್ನು ಉಲ್ಲೇಖೀಸಿ ಇಡೀ ವಿಶ್ವದಲ್ಲಿಯೇ ಇಂದು ದೇಶ ಪ್ರಗತಿ ಪಥದಲ್ಲಿ ದಾಪುಗಾಲಿಡುವಂತಾಗಿದೆ ಎಂದರು. ದೇಶದ 81 ಕೋಟಿ ಬಡವರಿಗೆ 5 ವರ್ಷಗಳ ಕಾಲ ಉಚಿತ ಪಡಿತರ ನೀಡುವ ಕೇಂದ್ರದ ಯೋಜನೆ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಜನಕಲ್ಯಾಣ ಯೋಜನೆಯಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೇಶದೆಲ್ಲೆಡೆ ಸಮಾನ ಶಿಕ್ಷಣ ನೀತಿ ಜಾರಿಗೊಳಿಸಿದಂತಾಗಿದೆ. ಇದರಿಂದ ದುರ್ಬಲ ವರ್ಗದವರೂ ಶಿಕ್ಷಣ ಪಡೆಯಲು ಸಾಧ್ಯವಾಗಿದೆ ಎಂದರು. ನಾರಿ ಶಕ್ತಿ ವಂದನ್‌ ಅಧಿನಿಯಮ್‌ ಮಹಿಳಾ ಸಶಕ್ತೀಕರಣಕ್ಕೆ ಕ್ರಾಂತಿಕಾರಿ ಸಾಧನವಾಗಿದೆ. ಇದು ಆಡಳಿತ ಪ್ರಕ್ರಿಯೆನ್ನು ಮತ್ತಷ್ಟು ಸುಲಲಿತಗೊಳಿಸಲಿದೆ ಎಂದರು.

ಇದನ್ನೂ ಓದಿ: ಇಂದು ದೇಶದ 75ನೇ ಗಣರಾಜ್ಯೋತ್ಸವ: ಗೌರವ ವಂದನೆ ಸ್ವೀಕರಿಸಲಿರುವ ರಾಷ್ಟ್ರಪತಿ ಮುರ್ಮು

Advertisement

Udayavani is now on Telegram. Click here to join our channel and stay updated with the latest news.

Next