Advertisement
ಕುಡಿಯುವ ನೀರಿನ ಬರ ಅನುಭವಿಸುತ್ತಿರುವ ವಿವಿಧ ಪ್ರದೇಶಗಳಿಗೆ ಕುಡಿ ಯುವ ನೀರು ಪೂರೈಕೆ ನಡೆದಿದೆ. ಈ ಸಂಬಂಧ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯ ದರ್ಶಿಗಳ ಸಭೆ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನಡೆಯಿತು. ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು ಅಧ್ಯಕ್ಷತೆ ವಹಿಸಿದ್ದರು.
ಒಂದು ವಾರದ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕೊಟೇಷನ್ ಮೂಲಕ ಗೊತ್ತುಮಾಡಿರುವ ವಾಹ ನಗಳಲ್ಲಿ ಬಾಡಿಗೆ ರೂಪ ದಲ್ಲಿ ನೀರಿನ ಸರಬರಾಜು ನಡೆಸ ಲಾಗುವುದು.
Related Articles
Advertisement
ಜಲ ವಿತರಣೆ ವೇಳೆ ಗುಣಮಟ್ಟದ ಖಚಿತತೆಯೂ ಇರಬೇಕು ಎಂದು ಹೆಚ್ಚುವರಿ ದಂಡನಾಧಿಕಾರಿ ತಿಳಿಸಿ ದರು. ಈಗ 328 ಕಿಯಾಸ್ಕ್ಗಳು ಜಿಲ್ಲೆಯಲ್ಲಿವೆ.ಹೆಚ್ಚುವರಿ ಕಿಯಾಸ್ಕ್ಗಳು ಅಗತ್ಯವಿದೆ ಎಂಬ ಕುರಿತು ಸ್ಥಳೀಯಾಡಳಿತ ಸಂಸ್ಥೆಗಳು ಸರ ಕಾರಕ್ಕೆ ಮನವಿ ಸಲ್ಲಿಸಿವೆ. ಈ ಸಂಬಂಧ ಸರಕಾರಕ್ಕೆ ಅರ್ಜಿ ಸಲ್ಲಿಸ ಲಾಗಿದೆ ಎಂದವರು ಹೇಳಿದರು. ತಾಪಮಾನ ಗರಿಷ್ಠ ಮಟ್ಟಕ್ಕೆ ತಲಪಿರುವ ಹಿನ್ನೆಲೆಯಲ್ಲಿ ಕಾರ್ಮಿ ಕರ ದುಡಿಮೆಯ ಸಮಯ ಪುನರ್ ರಚಿಸಲಾಗಿದ್ದು, ಇದನ್ನು ಕಡ್ಡಾಯವಾಗಿ ಪಾಲಿಸುವ ಕುರಿತು ನಗರಸಭೆ-ಪಂಚಾಯತ್ ಅಧಿಕಾ ರಿಗಳು ಖಚಿತ ಪಡಿಸಿಕೊಳ್ಳಬೇಕು ಎಂದು ತಿಳಿಸಲಾಯಿತು. ಸಭೆ ಯಲ್ಲಿ ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಟಿ.ಜೆ.ಅರುಣ್, ಹಿರಿಯ ವರಿಷ್ಠಾಧಿಕಾರಿ ಕೆ.ವಿನೋದ್ ಕುಮಾರ್ ಉಪಸ್ಥಿತರಿದ್ದರು.