ಉಡುಪಿ/ಮಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ಹೆಬ್ರಿ ತಾಲೂಕನ್ನು ಬರಪೀಡಿತ ಹಾಗೂ ಬ್ರಹ್ಮಾವರ ತಾಲೂಕನ್ನು ಸಾಧಾರಣ ಬರಪೀಡಿತ ಎಂದು ಸರಕಾರ ಈಗಾಗಲೇ ಘೋಷಣೆ ಮಾಡಿದೆ.
ಈ ತಾಲೂಕುಗಳ ಬರ ನಿರ್ವಹಣೆಗಾಗಿ ಸರಕಾರವು ಜಿಲ್ಲೆಗೆ 4.50 ಕೋ.ರೂ. ಬಿಡುಗಡೆ ಮಾಡಿದೆ.
ರಾಜ್ಯದ ಎಲ್ಲ ಜಿಲ್ಲೆಗಳಿಗೂ ಬರ ನಿರ್ವಹಣೆಗೆ ಸರಕಾರ ಅನುದಾನ ಬಿಡುಗಡೆಗೊಳಿಸಿ ಆದೇಶಿಸಿದೆ. ದಕ್ಷಿಣ ಕನ್ನಡಕ್ಕೆ 3 ಕೋ.ರೂ. ನೀಡಲಾಗಿದೆ.
ಬರ ತಾಲೂಕುಗಳಲ್ಲಿ ಕುಡಿಯುವ ನೀರು ಸಹಿತ ವಿವಿಧ ತುರ್ತು ಕಾಮ ಗಾರಿಗಳಿಗೆ ಈ ಅನುದಾನ ಬಳಕೆ ಮಾಡ ಲಾಗುತ್ತದೆ. ಅದರಂತೆ ಜಿಲ್ಲೆಯ ಬರ ನಿರ್ವಹಣೆಗೆ 4.50 ಕೋ.ರೂ. ಬಿಡುಗಡೆ ಮಾಡಿದೆ. ಆದರೆ ಈ ಸಂಬಂಧ ಆದೇಶ ಇನ್ನೂ ಜಿಲ್ಲಾಧಿಕಾರಿ ಕಚೇರಿಗೆ ಬಂದಿಲ್ಲ.
ಜಿಲ್ಲೆಯ ಬರ ನಿರ್ವಹಣೆ ಸಂಬಂಧ ಸರಕಾರದಿಂದ ಅನುದಾನ ಮಂಜುರಾತಿಗೆ ಆದೇಶ ಆಗಿದೆ. ಅದರ ಪ್ರತಿ ಇನ್ನೂ ನಮಗೆ ಸಿಕ್ಕಿಲ್ಲ. ಶನಿವಾರ ಸಿಗುವ ನಿರೀಕ್ಷೆಯಿದೆ. ನಿರ್ದಿಷ್ಟ ಮಾನದಂಡದಂತೆ ಅನುದಾನದ ವಿನಿಯೋಗ ಮಾಡಲಾಗುತ್ತದೆ. ಉಡುಪಿ ಯಲ್ಲಿ ತುರ್ತು ನಿರ್ವಹಣೆ ಸುಮಾರು 12 ಕೋ.ರೂ. ಸದ್ಯ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.