Advertisement

ಮಳೆಗಾಲದಲ್ಲಿ ತಾಜಾ ಮೀನಿಗೆ ಬರ; ಗಗನಕ್ಕೇರಿದ ದರ

02:54 PM Jun 25, 2019 | sudhir |

ಮಲ್ಪೆ: ಮಳೆಗಾಲದಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧ ಹಿನ್ನೆಲೆ, ನಾಡದೋಣಿ ಮೀನುಗಾರಿಕೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳದ ಪರಿಣಾಮ ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನಿನ ಅಭಾವ ಸೃಷ್ಟಿಯಾಗಿದೆ. ಮೀನಿನ ಬೆಲೆ ಗಗನಕ್ಕೆ ಏರಿದ್ದು, ಮೀನು ಪ್ರಿಯರು ದುಬಾರಿ ದರ ತೆತ್ತು ಹೊರರಾಜ್ಯದ ಮೀನು, ಸ್ಥಳೀಯ ಹೊಳೆಮೀನು ಮತ್ತು ಶೀತಲೀಕೃತ ಮೀನಿಗೆ ಮೊರೆ ಹೋಗಿದ್ದಾರೆ.

Advertisement

ಹೊಳೆ ಮೀನಿನ ದರವೂ ಕೂಡ ದುಬಾರಿ ಯಾಗಿದೆ. ರುಚಿಕರವಾದ ಕಾಣೆ, ಬಯ್ಯ ಮೀನುಗಳು ತುಟ್ಟಿಯಾಗಿದೆ.

ನಾಡದೋಣಿ ಮೀನುಗಾರಿಕೆ ವಿಳಂಬ

ಉತ್ತಮ ಮಳೆಯಾಗಿ, ಸಮುದ್ರದಲ್ಲಿ ತೂಫಾನ್‌ ಬಂದರೆ ನಾಡದೋಣಿ ಮೀನುಗಾರರಿಗೆ ಹೇರಳ ಮೀನು ಸಿಗುತ್ತದೆ. ಆದರೆ ಈ ಬಾರಿ ಇದುವರೆಗೂ ಸರಿಯಾಗಿ ತೂಫಾನ್‌, ಮಳೆಯಾಗದ ಕಾರಣ ನಾಡದೋಣಿಗಳು ಕಡಲಿಗಿಳಿದಿಲ್ಲ.

ಹೊರರಾಜ್ಯದ ಮೀನಿಗೂ ಡಿಮ್ಯಾಂಡ್‌

Advertisement

ಮೀನು ವ್ಯಾಪಾರಿಗಳು ಹೊರರಾಜ್ಯದಿಂದಲೂ ಲಾರಿ ಮೂಲಕ ಮೀನನ್ನು ತರಿಸಿ ಇಲ್ಲಿ ವ್ಯಾಪಾರ ನಡೆಸುತ್ತಾರೆ. ಮಲ್ಪೆ ಬಂದರಿನಲ್ಲಿ ಆಂಧ್ರಪ್ರದೇಶ ಮತ್ತು ಚೆನ್ನೈಯಿಂದ ಇಲ್ಲಿಗೆ ಬಂಗುಡೆ, ಬೂತಾಯಿ, ಮಡಂಗು, ರೆಬ್ಟಾಯಿ ಮೀನು ಸರಬರಾಜು ಆಗುತ್ತಿದೆ. ರವಿವಾರ ಬಂಗುಡೆ ಕೆಜಿಗೆ 180 ರೂ., ಬೂತಾಯಿ 110 ರೂ.ಗೆ ಮಾರಾಟವಾಗಿದೆ. ಇಲ್ಲಿ ಚಿಲ್ಲರೆ ಮಾರಾಟ ಇಲ್ಲ. ಏನಿದ್ದರೂ ರಖಂ ಮಾತ್ರ ಎನ್ನುತ್ತಾರೆ ಮೀನು ವ್ಯಾಪಾರಿ ಹುಸೇನ್‌ ಸಾಹೇಬ್‌.

ತಾಜಾ ಮೀನು ಸಿಗುತ್ತಿಲ್ಲ

ಮಾರಾಟಕ್ಕೆ ಸರಿಯಾದ ಪ್ರಮಾಣದಲ್ಲಿ ತಾಜಾ ಮೀನು ಸಿಗುತ್ತಿಲ್ಲ. ಈಗ ಮೀನು ಮಾರಾಟದಲ್ಲಿ ಅಷ್ಟೇನು ಲಾಭ ಸಿಗದಿದ್ದರೂ ಮನೆಯಲ್ಲಿ ಕುಳಿತಾದರೂ ಮಾಡುವುದೇನೆಂದು ಸಿಕ್ಕ ಮೀನು ಮಾರಲು ಹೋಗುತ್ತೇವೆ. ಹೊಟ್ಟೆ ತುಂಬ ಬೇಕಲ್ಲ.
– ಗುಲಾಬಿ ತಿಂಗಳಾಯ ಕಿದಿಯೂರು, ಸ್ಥಳೀಯ ಮೀನು ಮಾರಾಟ ಮಹಿಳೆ
ಲಾಭ ಕಡಿಮೆ, ಕೆಲವು ಬಾರಿ ನಷ್ಟ

ನಾಡದೋಣಿಗಳು ಕಡಲಿಗಿಳಿಯದ ಕಾರಣ ಸಮುದ್ರದ ತಾಜಾ ಮೀನು ಸಿಗದೆ ಫ್ರೀಜರ್‌ ಮೀನನ್ನು ತರಿಸಿಕೊಳ್ಳಲಾಗುತ್ತದೆ. ಹೊಳೆಮೀನು ದುಬಾರಿ. ಮಾರಾಟ ಸಾಧ್ಯವಿಲ್ಲ. ಹಾಗಾಗಿ ಲಾಭದ ಪ್ರಮಾಣ ಕಡಿಮೆ, ಕೆಲವು ಸಲ ನಷ್ಟ ಉಂಟಾಗುತ್ತದೆ.
-ಬೇಬಿ ಎಚ್. ಸಾಲ್ಯಾನ್‌,ಅಧ್ಯಕ್ಷರು, ಉಡುಪಿ ತಾಲೂಕು
ಹಸಿಮೀನು ಮಾರಾಟಗಾರರ ಸಂಘ
ವ್ಯಾಪಾರದಲ್ಲಿ ನಿರತವಾಗಿರುವ ಮೀನು ಮಾರಾಟ ಮಾಡುವ ಮಹಿಳೆ.
ಫ್ರೀಜರ್‌ನ ಪ್ಯಾಕೆಟ್ ಮೀನಿಗೂ ಭಾರೀ ಬೇಡಿಕೆ ಇದೆ. ಬಂಗುಡೆ ಕೆಜಿಗೆ 200 ರೂ., ಡಿಸ್ಕೋ ಮೀನು 150 ರೂ., ಕಲ್ಲೂರು 200 ರೂ., ಬೊಳಂಜೀರ್‌ 100ಕ್ಕೆ 200 ರೂ. ಇದೆ. ಮುರುಮೀನು ಸಣ್ಣಗಾತ್ರದ್ದು 150 ರೂ., ದೊಡ್ಡದು 200 ರೂ., ಬೊಂಡಸ 200ರಿಂದ 250 ರೂಪಾಯಿ ಇದ್ದರೆ, ದೊಡ್ಡ ಸಿಗಡಿ ಮೀನಿಗೆ ಪ್ಯಾಕೆಟಿಗೆ 350, ಸಣ್ಣದ್ದು 250 ರೂ. ಇದೆ. ಈ ಬಾರಿ ಫ್ರೀಜರ್‌ನ ಪಾಂಪ್ಲೆಟ್ ಮತ್ತು ಅಂಜಲ್ ಮೀನು ತೀರ ಕಡಿಮೆ ಎನ್ನಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next