Advertisement
ಮನೆಯ ಹೊರಗಿನ ಶೆಡ್‌ನಲ್ಲಿ ದೊಡ್ಡದಾದ ಪೆಟ್ಟಿಗೆಯನ್ನು ಇಡಲಾಗಿದ್ದು, “ದಯವಿಟ್ಟು ಲೂಟಿಯಾಗಿರುವ ಶಸ್ತ್ರಾಸ್ತ್ರಗಳನ್ನು ಈ ಪೆಟ್ಟಿಗೆಯಲ್ಲಿ ತಂದುಹಾಕಿ’ ಎಂದು ಮೈತೇಯಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ. ಅಲ್ಲದೇ, ಶಸ್ತ್ರಾಸ್ತ್ರ ಮರಳಿಸುವವರ ಗುರುತು ಬಹಿರಂಗಪಡಿಸುವುದಿಲ್ಲ, ಅದು ನಿಮ್ಮ ಕೈಗೆ ಹೇಗೆ ಬಂತು ಎಂದು ಪ್ರಶ್ನಿಸುವುದಿಲ್ಲ ಎಂಬರ್ಥದಲ್ಲಿ, ಪೆಟ್ಟಿಗೆಯ ಮೇಲೆ “ಶಸ್ತ್ರಾಸ್ತ್ರ ವಾಪಸ್ ಮಾಡಲು ಯಾವುದೇ ಮುಜುಗರ ಬೇಡ’ ಎಂದೂ ಬರೆಯಲಾಗಿದೆ.
ಈ ನಡುವೆ, ಮಣಿಪುರದಲ್ಲಿ ಶುಕ್ರವಾರ ಹಿಂಸಾಚಾರ ಮರುಕಳಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಪಾಲರ ನೇತೃತ್ವದಲ್ಲಿ ಶಾಂತಿ ಸಮಿತಿಯೊಂದನ್ನು ರಚಿಸಿದೆ. ಮುಖ್ಯಮಂತ್ರಿ, ಕೆಲವು ಸಚಿವರು, ಸಂಸದರು, ಶಾಸಕರು, ವಿವಿಧ ರಾಜಕೀಯ ಪಕ್ಷಗಳು ಹಾಗೂ ನಾಗರಿಕ ಸಮಾಜದ ನಾಯಕರು ಈ ಸಮಿತಿಯಲ್ಲಿದ್ದಾರೆ.