Advertisement

ಡ್ರಾಪ್‌ ಔಟ್‌ ಫ್ರೀ ಕಾಸರಗೋಡು ಯೋಜನೆ : ಸಹಾಯವಾಣಿ

12:30 AM Jan 18, 2019 | |

ಕಾಸರಗೋಡು: ಡ್ರಾಪ್‌ ಔಟ್‌ ಫ್ರೀ ಕಾಸರಗೋಡು ಯೋಜನೆಗೆ ಪೂರಕವಾಗಿ “ಹೆಲ್ಪ್ ಲೈನ್‌ ನಂಬ್ರ 6238479484′ ಸಿದ್ಧವಾಗಿದೆ.

Advertisement

ಬೇರೆ ಬೇರೆ ಕಾರಣಗಳಿಂದ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿ ತೆರಳುವ ಮಕ್ಕಳನ್ನು ಅವರ ಸಹಪಾಠಿಗಳ ಮೂಲಕ ಪತ್ತೆಮಾಡಿ ಶಾಲೆಗೆ ಮರಳಿ ಕರೆತರುವ, ಸಮಸ್ಯೆಗಳಿದ್ದರೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಮಕ್ಕಳ ಸಂರಕ್ಷಣೆ ಘಟಕ ವತಿಯಿಂದ ಈ ಹೆಲ್ಪ್ ಲೈನ್‌ ನಂಬ್ರ ಸಿದ್ಧಪಡಿಸಲಾಗಿದೆ.

ಶಿಕ್ಷಣದ ದಿನಗಳಲ್ಲಿ ಜತೆಯಲ್ಲಿ ಕಲಿಕೆ ನಡೆಸುವ ವಿದ್ಯಾರ್ಥಿ ಶಾಲೆಗೆ ಸತತವಾಗಿ ಬಾರದೇ ಇದ್ದರೆ ಈ ದೂರವಾಣಿ ಸಂಖ್ಯೆ ಮೂಲಕ ಮಾಹಿತಿ ನೀಡಬೇಕು. ಎಲ್ಲ ಶಾಲೆಗಳಿಗೂ ಈ ನಂಬ್ರ ನೀಡಲಾಗಿದೆ.

ತೆರಳಿದವರು 559 ಮಕ್ಕಳು 
ಶಿಕ್ಷಣನಿರ್ದೇಶಕರ ಅ ಧಿಕೃತ ದಾಖಲೆ ಪ್ರಕಾರ ಜಿಲ್ಲೆಯಲ್ಲಿ 559 ಮಕ್ಕಳು ವಿವಿಧ ಕಾರಣಗಳಿಂದ 2018ಜೂನ್‌ ತಿಂಗಳಿಂದ ಅಕ್ಟೋಬರ್‌ 16ರ ವರೆಗೆ ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿ ಶಾಲೆಯಿಂದ ತೆರಳಿದ್ದಾರೆ.

ಸಾರ್ವತ್ರಿಕ ಶಿಕ್ಷಣ ಕಡ್ಡಾಯ 
14 ವರ್ಷ ಪ್ರಾಯದ ವರೆಗಿನ ಸಾರ್ವತ್ರಿಕ ಶಿಕ್ಷಣ ಒಂದು ಮಗುವಿಗೆ ಕಡ್ಡಾಯ ಎಂಬ ಘೋಷಣೆಯೊಂದಿಗೆ ಜಿಲ್ಲಾಡಳಿತದ ನೇತೃತ್ವದಲ್ಲಿ “ಡ್ರಾಪ್‌ ಔಟ್‌ ಫ್ರೀ ಕಾಸರಗೋಡು’ ಯೋಜನೆ ಜಾರಿಗೊಳ್ಳುತ್ತಿದೆ. 

Advertisement

ಎಲ್ಲೆಡೆ ಮಕ್ಕಳ ಸಂರಕ್ಷಣೆ ಖಚಿತ ಗೊಳಿಸುವ ಮೂಲಕ ಜಿಲ್ಲೆಯನ್ನು ಶಿಶು ಸೌಹಾರ್ದ ಪ್ರದೇಶವನ್ನಾಗಿಸುವ ಗುರಿಯೊಂದಿಗೆ ಈ ಯೋಜನೆ ಅನುಷ್ಠಾನದಲ್ಲಿದೆ.

ಈ ಯೋಜನೆ ವ್ಯಾಪ್ತಿಯಲ್ಲಿ ಜಿಲ್ಲಾ ಧಿಕಾರಿ, ಜಿಲ್ಲಾ ಪಂಚಾಯತ್‌ ಅಧ್ಯಕ್ಷರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರ ಜಂಟಿ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದ ಡ್ರಾಪ್‌ ಔಟ್‌ ಮಾನಿಟರಿಂಗ್‌ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಆದೇಶ ಪ್ರಕಾರ ಜಿಲ್ಲೆಯ ವಿವಿಧ ಶಾಲೆಗಳಿಂದ ಶಿಕ್ಷಣ ಮೊಟಕುಗೊಳಿಸಿ ತೆರಳಿದ ಮಕ್ಕಳ ಗಣನೆ ನಡೆಸಲಾಗಿತ್ತು.

ಸಹಕಾರ ಅಗತ್ಯ
 ಎಲ್ಲ ಶೈಕ್ಷಣಿಕ ದಿನಗಳಲ್ಲಿ ಎಲ್ಲ ವಿದ್ಯಾರ್ಥಿಗಳೂ ಹಾಜರಿರುವಂತೆ ಮಾಡುವಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು, ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಸಹಕರಿಸಬೇಕು.
-ಡಾ.ಡಿ.ಸಜಿತ್‌ ಬಾಬು,
ಕಾಸರಗೋಡು ಜಿಲ್ಲಾ ಧಿಕಾರಿ

ಹೆಲ್ಪ್ ಲೈನ್‌ ನಂಬ್ರ: 6238479484

Advertisement

Udayavani is now on Telegram. Click here to join our channel and stay updated with the latest news.

Next