Advertisement

ಮಾನವರಹಿತ ಟ್ರ್ಯಾಕರ್‌ ಹಾಗೂ ವಿವಿಧ ಬಗೆಯ ಡ್ರೋಣ್‌ಗಳ ಪ್ರದರ್ಶನ

11:28 AM Dec 14, 2021 | Team Udayavani |

ಬೆಂಗಳೂರು: ರಕ್ಷಣಾ ಇಲಾಖೆಯ ಸಾರ್ವಜನಿಕ ಉದ್ಯಮ ಪ್ರತಿಷ್ಠಿತ ಭಾರತ್‌ ಎಲೆಕ್ಟ್ರಾನಿಕÕ… ಲಿ., (ಬಿಇಎಲ್‌) ಬೆಂಗಳೂರು ಘಟಕದಲ್ಲಿ ಹಮ್ಮಿಕೊಂಡ ಏಳು ದಿನಗಳ ವಸ್ತುಪ್ರದರ್ಶನಕ್ಕೆ ಸೋಮವಾರ ಚಾಲನೆ ದೊರೆಯಿತು.

Advertisement

ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವದ ಅಂಗವಾಗಿ ಏರ್ಪಡಿಸಲಾದ ಈ ವಸ್ತು ಪ್ರದರ್ಶನದಲ್ಲಿ ಸಂಸ್ಥೆ ನಿರ್ಮಿಸುವ ರಕ್ಷಣೆ ಹಾಗೂ ರಕ್ಷಣಾಯೇತರ ಉತ್ಪನ್ನಗಳ ವೈವಿಧ್ಯಮಯ ಪ್ರದರ್ಶನ ಸಾರ್ವಜನಿಕರಿಗಾಗಿ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿದೆ. ಭಾರತ್‌ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಾದ ರೆಡಾರ್‌ ವ್ಯವಸ್ಥೆಗಳು, ಎಲೆಕ್ಟ್ರಾನಿಕ್‌ ಉಪಕರಣಗಳು, ಎಲೆಕ್ಟ್ರಾನಿಕ್‌ ಮತದಾನ ಯಂತ್ರಗಳು ಹಾಗೂ ಇತರ ವಿಶಿಷ್ಟ ಉಪಕರಣಗಳ ಪ್ರದರ್ಶನ ಇದೆ.

ಇದನ್ನೂ ಓದಿ:- ಡಿ-14: ಸಂಜೆ 4ಗಂಟೆಗೆ ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ಸಂದೇಶ್ ನೀರ್ ಮಾರ್ಗ ಸಂದರ್ಶನ

ಯುದ್ದದಲ್ಲಿ ಬಳಸುವ ತೇಜಸ್‌ ಯುದ್ದ ವಿಮಾನಕ್ಕೆ ಬೇಕಾದ ಫ್ಲೈಟ್‌ ಕಂಟ್ರೋಲ್‌ ಸಿಸ್ಟಮ್, ಶತ್ರುಗಳನ್ನು 25 ಕಿ.ಮೀ. ದೂರದಲ್ಲಿದ್ದರೂ ಶತ್ರುಗಳನ್ನು ಸಂಹಾರ ಮಾಡುವ ರುಸ್ತಮ್ ಮಾಡೆಲ್‌, ಆಕಾಶ್‌ ಕ್ಷಿಪಣಿ ಹಾಗೂ ಕ್ಷಿಪಣಿ ಲಾಂಚರ್‌, ರೆಡಾರ್‌, ಚುನಾವಣೆಯಲ್ಲಿ ಬಳಸುವ ವಿವಿಪ್ಯಾಡ್‌ ಮಿಶನ್‌, ಮಾನವರಹಿತ ಟ್ರ್ಯಾಕರ್‌ ವಿವಿಧ ಬಗೆಯ ಡ್ರೋಣ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಮೊದಲ ದಿನವೇ ಸುಮಾರು 300 ಜನ ವಿದ್ಯಾರ್ಥಿಗಳು ಹಾಗೂ ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು. ಸರ್ಕಾರದ ಮಾರ್ಗಸೂಚಿಗಳ ಅನುಸಾರ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಡಿ. 19ರವರೆಗೆ ನಡೆಯಲಿದ್ದು, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಆನ್‌ಲೈನ್‌ ಮೂಲಕ ಇದಕ್ಕೆ ಚಾಲನೆ ನೀಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಕ್ಷಣಾ ಇಲಾಖೆಯ ಉತ್ಪಾದನೆಯಲ್ಲಿ ಬಿಇಎಲ್‌ ಪಾತ್ರ ಗಮನಾರ್ಹವಾಗಿದೆ.ರಕ್ಷಣಾ ಉತ್ಪಾದನೆಯ ಪ್ರಮುಖ 20 ಕಂಪೆನಿಗಳಲ್ಲಿ ಬಿಇಎಲ್‌ ಸ್ಥಾನ ಪಡೆದುಕೊಂಡಿದೆ. ಸಂಸ್ಥೆಯ ಉತ್ಪಾದನೆ ಹಾಗೂ ನಿರ್ಮಾಣಗಳಲ್ಲಿ ರಕ್ಷಣಾ ಮಂತ್ರಾಲಯದ ಸಹಯೋಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಮಾರಂಭದಲ್ಲಿ ಬಿಇಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದಿ ರಾಮಲಿಂಗಂ ಸೇರಿದಂತೆ ಎಲ್ಲ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next