Advertisement
ಕೃಷಿ ಕಾರ್ಮಿಕರ ಕೊರತೆಯಿರುವುದರಿಂದ ಬಹುಪಯೋಗಿ ಯಂತ್ರಗಳ ಬಗ್ಗೆ ರೈತರು ಅಲೋಚಿಸುತ್ತಿದ್ದಾರೆ. ಅದರಕ್ಕೆ ಪೂರಕವಾಗಿರುವ ಈಡ್ರೋಣ್ ಕೇವಲ 15 ನಿಮಿಷದಲ್ಲಿ ಒಂದು ಎಕ್ಕರೆಗೆ ಔಷಧಿ ಸಿಂಪಡಿಸಲಿದೆ.
ನೆರವಿಂದ ರೈತ ಸ್ನೇಹಿಯಾಗುವತ್ತ ಹೆಜ್ಜೆಹಾಕಿದೆ. ಇದಕ್ಕೆ ಸಾಕ್ಷಿಯಾಗಿ ಸಿಲ್ಕ್ ಜಿಲ್ಲೆಯ ಮಾಗಡಿ ತಾಲೂಕಿನ ದೊಡ್ಡಸೋಮನಹಳ್ಳಿ ಕೃಷಿ ಚಟುವಟಿಕೆಗಳಿಗೆ ಈಗ ಕೂಲಿ ಕೆಲಸಗಾರರ ಅವಲಂಬನೆ ಕಡಿಮೆ ಮಾಡಲು ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಬಳಸುವ ಸಲುವಾಗಿ ರೇಷ್ಮೆ ನಗರಿ ಜಿಲ್ಲೆಯಲ್ಲಿಯೂ ನಬಾರ್ಡ್ ಸಹಯೋಗದಿಂದ ರೈತರು ನೂತನ ಇಸ್ರೇಲ್ ಮಾದರಿ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿ ಎಂಬಂತೆ ಮಾಗಡಿಯ ದೊಡ್ಡಸೋಮನಹಳ್ಳಿಯಲ್ಲಿ ರೈತರು ಡ್ರೋನ್ ಬಳಸಿ ರಾಗಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸುವ ಮೂಲಕ
ಗಮನ ಸೆಳೆದಿದ್ದಾರೆ. ದೊಡ್ಡ ದೊಡ್ಡ ಸಭೆಗಳಲ್ಲಿ ದೃಶ್ಯ ಚಿತ್ರೀಕರಿಸಲು ಹಾಗೂ ಭದ್ರತೆಗೆ ಬಳಸುವ ಸಾಧನವಾಗಿದ್ದ ಈ ಡ್ರೋನ್ ಈಗ ರೈತರ ಹೊಲ ಗದ್ದೆಗಳ ಮೇಲೆ
ಹಾರಾಡುತ್ತಾ ರಾಸಾಯನಿಕ ಸಿಂಪಡಿಸುತ್ತಿದೆ. ಎಕರೆಗೆ 350 ರೂ.ವೆಚ್ಚ : ಎಕರೆಗೆ 350 ರೂ.ಹಣ ನೀಡಿ ಪ್ರಾಯೋಗಿಕವಾಗಿ ಡ್ರೋನ್ ಮೂಲಕ
ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಒಂದು ಎಕರೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಹೆಚ್ಚು ಸಮಯ ಬೇಕು. ಆದರೆ, ಡ್ರೋನ್ ಮೂಲಕ ಕೆಲವೇ ನಿಮಿಷಗಳಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಬಹುದು. ಇದರಿಂದ ಹಣ ಹಾಗೂ ಸಮಯದ ಉಳಿತಾಯವಾಗುತ್ತಿದೆ ಎನ್ನುತ್ತಾರೆ ಕೆಲ ರೈತರು.
Related Articles
Advertisement
ಜಿಪಿಎಸ್ ಇದೆ. ಸೈಡ್ ಎಫೆಕ್ಟ್ ಇಲ್ಲ : ಈ ಡ್ರೋನ್ ಸಾಧನಕ್ಕೆ ಜಿಪಿಎಸ್ ಅಳವಡಿಸಲಾಗಿದೆ. ಹೊಲದ ಬದುವಿನಲ್ಲೇ ಕುಳಿತು ರಿಮೋಟ್ ಕಂಟ್ರೋಲ್‌ನಿಂದ ಇಡೀ ಹೊಲಕ್ಕೆ ಕ್ರಿಮಿನಾಶಕ ಸಿಂಪಡಿಸಬಹುದಾಗಿದೆ. ಇದರಿಂದ ಕೂಲಿಯಾಳು ಸಮಸ್ಯೆಯಿಲ್ಲ, ಕ್ರಿಮಿನಾಶಕದ ಸೈಡ್ ಎಫೆಕ್ಟ್ ಸಹ ಇಲ್ಲ.
ಲೆಕ್ಕಾಕೊಡುತ್ತೆ ಈ ಡ್ರೋನ್: ಸುಮಾರು 8 ಲಕ್ಷ ರೂ. ಮೌಲ್ಯದ ಡ್ರೋನ್ ಗೆ 11 ಲೀಟರ್ ಸಾಮರ್ಥ್ಯದ ಕ್ಯಾನ್ ಅಳವಡಿಸಲಾಗಿದೆ. ಇದರ ಜತೆಗೆ ಜಿಪಿಎಸ್ ಸಹ ಅಳವಡಿಸಲಾಗಿದ್ದು, ಎಷ್ಟು ಎಕರೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ ಎಂಬುದರ ನಿಖರ ಲೆಕ್ಕತಿಳಿಯಬಹುದಾಗಿದೆ. ತೋಟಗಾರಿಕೆ ಬೆಳೆಗಳಿಗೂ ಸೈ: ಭತ್ತ, ಕಡಲೆ, ತೊಗರಿ ಮಾತ್ರವಲ್ಲದೆ ತೋಟಗಾರಿಕೆ ಬೆಳೆಗಳಾದ ನಿಂಬೆ, ಮಾವು, ಸಪೋಟ ಸೇರಿದಂತೆ ಎತ್ತರದ ಮರಗಳಿಗೂ ಸುಲಭವಾಗಿ ಕ್ರಿಮಿನಾಶಕ ಸಿಂಪಡಿಸಬಹುದು. ಡ್ರೋನ್‌ಗೆ 5ಲೀಟರ್ ಟ್ಯಾಂಕ್ ಅಳವಡಿಸಲಾಗಿದ್ದು ಕ್ರಿಮಿನಾಶಕ ಮಿಶ್ರಣ ಬೆರಿಸಿ ಜಿಪಿಎಸ್ ಮೂಲಕ ಕೆಲಸ ನಿಗದಿ ಮಾಡಿದ್ರೆ ಸಾಕು ಕೆಲಸ ಮುಗಿದಂತೆ. ಗಂಗಾವತಿ ಮೊದಲು: ರಾಜ್ಯದಲ್ಲಿ ಮೊದಲು ಭತ್ತದ ಕಣಜ ಖ್ಯಾತಿಯ ಗಂಗಾವತಿ ಭತ್ತದ ಗದ್ದೆಗಳ ಮೇಲೆ ಡ್ರೋನ್ ಹಾರಾಟ ನಡೆಸಿ ಬೆಂಕಿ ರೋಗಕ್ಕೆ ರಾಸಾಯನಿಕ ಸಿಂಪಡಿಸುವಲ್ಲಿ ಯಶಸ್ವಿಯಾಗಿತ್ತು. ತಮಿಳುನಾಡಿನಿಂದ ವಿಜ್ಞಾನಿಗಳು ಡ್ರೋನ್ ತರಿಸಿಕೊಂಡಿದ್ದರು. ಇದಾದ ಬಳಿಕ ಹಂತ-ಹಂತವಾಗಿ ಡ್ರೋನ್ ಬಗ್ಗೆ ಕೃಷಿ ಕ್ಷೇತ್ರದ ಇತರೆ ಜಿಲ್ಲೆಗಳಿಗೂ ರೈತರಿಗೂ ಹತ್ತಿರವಾಗುತ್ತಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು. ತಂತ್ರಜ್ಞಾನ ಬಳಸಿಕೊಂಡು ಕೃಷಿಯಲ್ಲಿ ಪ್ರಗತಿ ಸಾಧಿಸಿ ಅನೇಕ ದೇಶಗಳು ಹೆಚ್ಚು ಇಳುವರಿ ಪಡೆಯುತ್ತಿವೆ. ಹೀಗಾಗಿ ಇಸ್ರೇಲ್ ಕೃಷಿಯ ತಂತ್ರ ಜ್ಞಾನ ಮಾಗಡಿ ತಾಲೂಕಿಗೂ ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ.
– ಅಂಥೋನಿ ಸ್ವಾಮಿ, ಕ್ರಯಾಜಿನ್
ನೋಟಿಕ್ ಕಂಪನಿ ಅಧಿಕಾರಿ. ನಮ್ಮ ಕಾಳಾರಿ ಗ್ರಾಪಂ ವ್ಯಾಪ್ತಿಯಲ್ಲಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ತಂತ್ರಜ್ಞಾನ ಆಧಾರಿತ ಕೃಷಿ ಮಾಡುವ ನಿಟ್ಟಿನಲ್ಲಿ ಐದಾರು ಎಕರೆ ಜಾಗ ಮೀಸಲಿಟ್ಟು ಪ್ರಾಯೋಗಿಕವಾಗಿ ತಂತ್ರಜ್ಞಾನ ಆಧಾರಿತ ಬೇಸಾಯ ಮಾಡಲು ಮುಂದಾಗಿದ್ದೇವೆ ಹಾಗೂ ಕಂಪನಿಗಳು ಹಾಗೂ ವಿಜ್ಞಾನಿಗಳು ನಮ್ಮ ಸಹಾಯಕ್ಕೆ ನಿಂತಿದ್ದಾರೆ.
– ಸುರೇಶ್, ಗ್ರಾಪಂ ಅಧ್ಯಕ್ಷ – ಕೆ.ಎಸ್.ಮಂಜುನಾಥ್ ಕುದೂರು