Advertisement

ಜಮ್ಮುವಿನಲ್ಲಿ ಮತ್ತೂಂದು ಡ್ರೋನ್‌ : 15 ದಿನಗಳಲ್ಲಿ 6ನೇ ಡ್ರೋನ್‌ ಪತ್ತೆ

03:44 AM Jul 15, 2021 | Team Udayavani |

ನವ ದೆಹಲಿ: ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ವಲಯದಲ್ಲಿ ಮಂಗಳವಾರ ತಡರಾತ್ರಿ ಭಾರತದ ಭೂಪ್ರದೇಶದಲ್ಲಿ (ಗಡಿಯಿಂದ 100-150 ಮೀಟರ್‌ ಒಳಗೆ) ಡ್ರೋನ್‌ ವೊಂದು ಹಾರಾಟ ನಡೆಸಿದೆ. ಅಲರ್ಟ್‌ ಆಗಿದ್ದ ಬಿಎಸ್‌ ಎಫ್ ಯೋಧರ ಕಣ್ಣಿಗೆ ಡ್ರೋನ್‌ ಬಿದ್ದೊಡನೆ, ಅವರು ಗುಂಡು ಹಾರಿಸಿದ್ದು, ನಂತರ ಡ್ರೋನ್‌ ವಾಪಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಜಮ್ಮುವಿನ ವಾಯುಪಡೆ ನೆಲೆಯ ಮೇಲೆ ಡ್ರೋನ್‌ ದಾಳಿ ನಡೆದ ಬಳಿಕ 15 ದಿನಗಳ ಅಂತರದಲ್ಲಿ ಪತ್ತೆಯಾದ 6ನೇ ಡ್ರೋನ್‌ ಇದಾಗಿದೆ. ಅಂತಾರಾಷ್ಟ್ರೀಯ ಗಡಿಯ ಸಮೀಪದಲ್ಲಿ ಬೇಹುಗಾರಿಕೆ ನಡೆಸಲು ಅಥವಾ ಶಸ್ತ್ರಾಸ್ತ್ರಗಳನ್ನು ಎಸೆಯಲು ಈ ಡ್ರೋನ್‌ ಬಂದಿರಬಹುದು ಎಂದು ಶಂಕಿಸಲಾಗಿದೆ.

ದುರಂತ ತಪ್ಪಿಸಿದ ಭದ್ರತಾ ಪಡೆ: ಈ ನಡುವೆ, ಬುಧವಾರ ಜಮ್ಮು-ಕಾಶ್ಮೀರದ ಕುಲ್ಗಾಂನಲ್ಲಿ ಮರವೊಂದರ ಕೆಳಗೆ ಇಡಲಾಗಿದ್ದ ಎಲ್‌ಇಡಿ(ಸುಧಾರಿತ ಸ್ಫೋಟಕ)ಯನ್ನು ಭದ್ರತಾ ಪಡೆ ನಿಷ್ಕ್ರಿಯಗೊಳಿಸಿದೆ. ಈ ಮೂಲಕ ದೊಡ್ಡ ದುರಂತವೊಂದನ್ನು ತಪ್ಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next