Advertisement

ದೇಶದಲ್ಲೇ ಮೊದಲ ಬಾರಿಗೆ ಡ್ರೋಣ್‌ನಲ್ಲಿ ಔಷಧ ರವಾನೆ

08:27 PM Jun 20, 2021 | Team Udayavani |

ಗೌರಿಬಿದನೂರು : ತುರ್ತುಪರಿಸ್ಥಿತಿಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಔಷಧ ತಲುಪಿಸುವ ಸಲುವಾಗಿ ಟಿಎಎಸ್‌ ಸಂಸ್ಥೆ ನಗರದ ಶಂಭುಕನಗರ ಹೊರವಲಯದ ಜಮೀನಿನಲ್ಲಿ ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದೆ. ಟಿಎಎಸ್‌ ಕಂಪೆನಿ ಭಾರತದ ರಕ್ಷಣ ಇಲಾಖೆಯಿಂದ ಮಿಲಿಟರಿ ಡ್ರೋಣ್‌ ತಯಾರಿಸಲು ವಿಶೇಷ ಪರವಾನಿಗೆ ಹೊಂದಿದೆ.

Advertisement

ದೇಶದಲ್ಲಿ ಡ್ರೋಣ್‌ ಉತ್ಪಾದನೆ ಹಾಗೂ ತಂತ್ರಜ್ಞಾನ ಕ್ಷೇತ್ರ ಬೆಳೆಯುತ್ತಿದೆ. ಬೆಂಗಳೂರಿನಲ್ಲಿ 15 ವರ್ಷಗಳಿಂದ ಡ್ರೋಣ್‌ ತಂತ್ರಜ್ಞಾನದ ಬಗ್ಗೆ ಅಪಾರ ಜ್ಞಾನ ಹೊಂದಿರುವ ಯುವ ಉದ್ಯಮಿಗಳ ತಂಡ ರಚಿಸಿ, ನಾಗರಿಕ ಮತ್ತು ಮಿಲಿಟರಿ ಮಾರುಕಟ್ಟೆಗೆ ಮಾನವ ರಹಿತ ವ್ಯವಸ್ಥೆಗಳ ಕ್ಷೇತ್ರದಲ್ಲಿ ನಾವೀನ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ತಲುಪಿಸಲು ಟಿಎಎಸ್‌ ಮುಂದಾಗಿದೆ.

ಕಾರ್ಯಾಚರಣೆ ಹೇಗೆ?
ಸಾಮಾನ್ಯವಾಗಿ ಬಿವಿಎಲ್‌ಒಎಸ್‌ ಆಪರೇಷನ್‌ನಲ್ಲಿ ಡ್ರೋಣ್‌ ಕಣ್ಣಿಗೆ ಕಾಣುವಷ್ಟು ದೂರಕ್ಕೆ ಪೈಲಟ್‌ ಸಹಕಾರದಿಂದ ಸಂಚರಿಸಬಹುದು. ಆದರೆ, ಕಣ್ಣಿಗೆ ಕಾಣದ ಪ್ರಯೋಗಗಳನ್ನು ಮಾಡುವುದು ಬಿ.ವಿ.ಲಾಸ್‌ ಪ್ರಯೋಗವಾಗಿದೆ. ಕಣ್ಣಿಗೆ ಕಾಣದ 10-15 ಕಿ.ಮೀ. ದೂರ ಡ್ರೋಣ್‌ ಹಾರಿಸುವ ತಂತ್ರಜ್ಞಾನದ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ. ಒಂದು ಮೆಡ್‌ ಕಾಪ್ಟರ್‌ 15 ಕಿ.ಮೀ. 1 ಕೆಜಿ ಹಾಗೂ ಇನ್ನೊಂದು ಕಾಪ್ಟರ್‌ 12 ಕಿ.ಮೀ. 12 ಕೆ.ಜಿ. ಸಾಮಗ್ರಿ ಹೊತ್ತೂಯ್ಯಬಲ್ಲ ಸಾಮರ್ಥ್ಯ ಹೊಂದಿವೆ.

ಇದನ್ನೂ ಓದಿ :ಅಪಘಾತದಲ್ಲಿ ಕರು ಸಾವು : ಮನಕಲುಕುವಂತಿತ್ತು ಹಸುಳೆಯನ್ನು ಕಳೆದುಕೊಂಡ ತಾಯಿ ಹಸುವಿನ ಕಣ್ಣೀರು

45 ದಿನ ಕಾರ್ಯಾಚರಣೆ
ಜೂ.21ರಿಂದ ಟಿಎಎಸ್‌ ಕಂಪೆನಿ ಅಧಿಕೃತವಾಗಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅನುಮತಿ ಪಡೆದು ದೇಶದಲ್ಲೇ ಪ್ರಥಮವಾಗಿ ಪ್ರಯೋಗ ನಡೆಸುತ್ತಿದೆ. 45 ದಿನ ಔಷಧ ಸರಬರಾಜು ಮಾಡುವ ಪ್ರಯೋಗ ನಡೆಸಲಾಗುತ್ತಿದೆ ಎಂದು ಟಿಎಎಸ್‌ ಕಂಪನಿ ನಿರ್ದೇಶಕ ಗಿರೀಶ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next