Advertisement

ಜಲಪಾತದ ವಿಡಿಯೋ ತೆಗೆಯುವಾಗ ಕೊಚ್ಚಿ ಹೋದ ಡ್ರೋನ್ ಕ್ಯಾಮರಾ

10:16 AM Nov 20, 2021 | Team Udayavani |

ಕೊಟ್ಟಿಗೆಹಾರ: ಜಲಪಾತದ ವಿಡಿಯೋ ತೆಗೆಯಲು ಹೋಗಿ ಡ್ರೋನ್ ಕ್ಯಾಮರಾ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಚಾರ್ಮಾಡಿ ಘಾಟ್‌ನ ಆಲೇಕಾನ್ ಜಲಪಾತದಲ್ಲಿ ನಡೆದಿದೆ.

Advertisement

ಚಿಕ್ಕಮಗಳೂರು ಮೂಲದ ವ್ಯಕ್ತಿಯೊಬ್ಬರು ಚಾರ್ಮಾಡಿ ಘಾಟ್‌ನ ಆಲೇಕಾನ್ ಜಲಪಾತದಲ್ಲಿ ಡ್ರೋನ್ ಕ್ಯಾಮರಾ ಬಳಸಿ ವೀಡಿಯೋ ಮಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಡ್ರೋನ್ ಕ್ಯಾಮರಾ ಕೊಚ್ಚಿ ಹೋಗಿದೆ.

ಇದನ್ನೂ ಓದಿ:ಉಪ್ಪಿನಂಗಡಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ಹತ್ತನೇ ತರಗತಿ ವಿದ್ಯಾರ್ಥಿನಿ

ನಂತರ ಸ್ಥಳೀಯರಿಗೆ ಮಾಹಿತಿ ನೀಡಿದ್ದು ಸಮಾಜ ಸೇವಕರಾದ ಆರೀಪ್ ಹಾಗೂ ಪಿಶ್ ಮೋಣುನ ಅವರು ಜಲಪಾತದ ನೀರಿಗೆ ಇಳಿದು ಹುಡುಕಾಟ ನಡೆಸಿದರೂ ಕೂಡ ಸುಮಾರು ಮೂರು ಲಕ್ಷ ಮೌಲ್ಯದ ಡ್ರೋನ್ ಕ್ಯಾಮರಾ ಪತ್ತೆಯಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next